ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಕ್ಸಾಸ್‌ ಕಾರ್ಯ­ದರ್ಶಿ ಹುದ್ದೆಗೆ ಭಾರತ ಮೂಲದ ನಂದಿತಾ

Last Updated 21 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಐಎಎನ್‌ಎಸ್‌): ಹೈದ­ರಾ­ಬಾದ್‌ ಮೂಲದ ಅಟಾರ್ನಿ ನಂದಿತಾ ವೆಂಕಟೇಶ್ವರನ್‌ ಬೆರ್ರಿ ಅವ­ರನ್ನು ಅಮೆರಿಕದ ಟೆಕ್ಸಾಸ್‌ ರಾಜ್ಯದ ಮುಖ್ಯ ಕಾರ್ಯ­ದರ್ಶಿಯಾಗಿ ನೇಮಕ ಮಾಡಲಾಗಿದೆ.

ಈ ದಕ್ಷಿಣ ರಾಜ್ಯದ ಮೂರನೇ ಅತ್ಯು­ನ್ನತ ಶ್ರೇಣಿಯ ಹುದ್ದೆ ಅಲಂಕರಿ­ಸಿರುವ ಮೊದಲ ಭಾರತೀಯ ಇವರಾಗಿದ್ದಾರೆ. ಜ. 7ರಂದು ನಂದಿತಾ ಅಧಿಕಾರ ವಹಿ­ಸಿ­­­-ಕೊಳ್ಳಲಿದ್ದಾರೆ. ಈ ಹುದ್ದೆ­ಯೊಂದಿಗೆ ರಾಜ್ಯದ ಮುಖ್ಯ ಚುನಾ­ವಣಾ ಅಧಿಕಾರಿ ಹುದ್ದೆಯನ್ನೂ ಅವರು ನಿರ್ವಹಿಸಲಿ­ದ್ದಾರೆ.

ಗಡಿ, ಮೆಕ್ಸಿಕನ್‌ ವ್ಯವಹಾರ ಮತ್ತು ಅಂತರರಾಷ್ಟ್ರೀಯ ವಿಷಯಗಳಿಗೆ ಸಂಬಂ­ಧಿಸಿದಂತೆ ರಾಜ್ಯದ ಮುಖ್ಯ ಶಿಷ್ಟಾಚಾರ ಅಧಿಕಾರಿಯಾಗಿ ನಂದಿತಾ,  ರಾಜ್ಯ­ಪಾ­ಲ­ರೊಂದಿಗೆ ಸಂಪರ್ಕದಲ್ಲಿರುತ್ತಾರೆ.

21ನೇ ವಯಸ್ಸಿನಲ್ಲಿ ಟೆಕ್ಸಾಸ್‌ಗೆ ಬಂದ ನಂದಿತಾ, ಕಾನೂನು ಪದವಿ­ಪಡೆಯಲು ಶ್ರದ್ಧೆಯಿಂದ ಕೆಲಸ ಮಾಡಿ­ದರು. ಬಳಿಕ ರಾಜ್ಯದ ಹೆಸರಾಂತ ಅಟಾರ್ನಿಗಳಲ್ಲಿ ಒಬ್ಬರಾದರು.

‘ಟೆಕ್ಸಾನ್‌ನ ಮೊದಲ ಕಾರ್ಯದರ್ಶಿ ಸ್ಟೀಫನ್‌ ಎಫ್‌. ಆಸ್ಟಿನ್‌ ಅವರು ಸಾಗಿದ ಮಾರ್ಗದಲ್ಲೇ ಸಾಗಬೇಕೆಂದು ನಿರ್ಧ­ರಿಸಿದೆ’ ಎಂದು ನಂದಿತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT