ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್: ಎರಡನೇ ಸುತ್ತಿಗೆ ಸಾನಿಯಾ-ಬ್ರಯಾನ್

Last Updated 18 ಜನವರಿ 2013, 19:59 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ): ಅಮೆರಿಕದ ಬಾಬ್ ಬ್ರಯಾನ್ ಜೊತೆಗೂಡಿ ಮಿಶ್ರ ಡಬಲ್ಸ್‌ನಲ್ಲಿ ಆಡುತ್ತಿರುವ ಸಾನಿಯಾ ಮಿರ್ಜಾ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.ಶುಕ್ರವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸಾನಿಯಾ-ಬ್ರಯಾನ್ 6-2, 6-2ರಲ್ಲಿ ಆಸ್ಟ್ರೇಲಿಯಾದ ಸಮಂತಾ ಸ್ಟ್ರಾಸರ್ ಹಾಗೂ ಲ್ಯೂಕ್ ಸವಿಲೆ ಎದುರು ಗೆಲುವು ಸಾಧಿಸಿದರು.

ಈ ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಹೊಂದಿರುವ ಭಾರತ-ಅಮೆರಿಕದ ಜೋಡಿ ಕೇವಲ 50 ನಿಮಿಷಗಳಲ್ಲಿ ಎದುರಾಳಿಗೆ ಜೋಡಿಗೆ ಸೋಲುಣಿಸಿತು. ಡಬಲ್ಸ್‌ನಲ್ಲಿ ವಿಶ್ವದ ಶ್ರೇಷ್ಠ ಆಟಗಾರ ಎನಿಸಿರುವ ಬಾಬ್ ಮೂರೂ ಬ್ರೇಕ್ ಪಾಯಿಂಟ್‌ಗಳಲ್ಲಿ ಯಶಸ್ಸು ಕಂಡರು. ಸಾನಿಯಾ-ಬ್ರಯಾನ್ ಅವರಿಗೆ ಎರಡನೇ ಸುತ್ತಿನ ಪಂದ್ಯದಲ್ಲಿ ಕಠಿಣ ಎದುರಾಳಿ ಸಿಗುವ ಸಾಧ್ಯತೆ ಇದೆ.

ಆದರೆ ಮಹಿಳೆಯರ ವಿಭಾಗದ ಡಬಲ್ಸ್‌ನಲ್ಲಿ ಸಾನಿಯಾ ಈಗಾಗಲೇ ಸೋಲು ಕಂಡಿದ್ದಾರೆ. ಅಮೆರಿಕದ ಬೆಥನಿ ಮಾಟೆಕ್ ಜೊತೆಗೂಡಿ ಆಡಿದ ಸಾನಿಯಾ ಮೊದಲ ಸುತ್ತಿನ ಪಂದ್ಯದಲ್ಲಿ 6-7, 3-6ರಲ್ಲಿ ಸ್ಪೇನ್‌ನ ಸಿಲಿವಿಯಾ ಸೋಲರ್ ಹಾಗೂ ಕಾರ್ಲಾ ಸಾರೆಜ್ ನಾವಾರೊ ಎದುರು ಪರಾಭವಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT