ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್ ಟೂರ್ನಿ: ಬಿಎನ್‌ಎಸ್ ರೆಡ್ಡಿಗೆ ಪ್ರಶಸ್ತಿ

Last Updated 3 ಡಿಸೆಂಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ಪೊಲೀಸ್ ಜಂಟಿ ಆಯುಕ್ತ ಬಿ.ಎನ್.ಎಸ್.ರೆಡ್ಡಿ ಅವರು ಕೋಲ್ಕತ್ತಾದಲ್ಲಿ ನಡೆದ 13ನೇ ಅಖಿಲ ಭಾರತ ಪೊಲೀಸ್ ಲಾನ್‌ಟೆನಿಸ್ ಚಾಂಪಿಯನ್‌ಷಿಪ್‌ನ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಈಚೆಗೆ ಕೋಲ್ಕತ್ತಾದ `ಸೌತ್ ಕ್ಲಬ್~ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರೆಡ್ಡಿ ಅವರು  ಪಂಜಾಬ್‌ನ ಆಶೀಶ್ ಕಪೂರ್ ಜತೆಗೂಡಿ ಆಡಿ ಬಿಎಸ್‌ಎಫ್‌ನ ವಿಕ್ರಮ್‌ದೇವ್ ಸಿಂಗ್ ಮತ್ತು ಡಾ.ನಾಗ್ ಜೋಡಿಯನ್ನು 6-3, 6-3ರಲ್ಲಿ ಸೋಲಿಸಿದರು.

ರೆಡ್ಡಿ ಮತ್ತು ಕಪೂರ್ ಜೋಡಿ ಈ ಪ್ರಶಸ್ತಿಯನ್ನು ಸತತ ಎರಡನೇ ವರ್ಷ ಗೆಲ್ಲುತ್ತಿರುವುದಾಗಿದೆ.
ಇದಕ್ಕೆ ಮೊದಲು ನಡೆದ ಸಿಂಗಲ್ಸ್ ಫೈನಲ್‌ನಲ್ಲಿ ಆಶೀಶ್ ಕಪೂರ್ ಅವರು 6-4, 6-4ರಿಂದ ಸಿ.ಆರ್.ಪಿ.ಎಫ್ ತಂಡದ ಡಾ.ಕೆನ್ ಜೊಮ್ ಅವರನ್ನು ಮಣಿಸಿ ಪ್ರಶಸ್ತಿ ಎತ್ತಿಕೊಂಡರು.

ಗಡಿ ಭದ್ರತಾ ದಳ (ಬಿಎಸ್‌ಎಫ್) ತಂಡ ಪ್ರಶಸ್ತಿ ಗೆದ್ದುಕೊಂಡರೆ, ಇಂಡೊ ಟಿಬೆಟನ್ ಗಡಿ ಪೊಲೀಸ್ ದಳ (ಐಟಿಬಿಪಿ) ರನ್ನರ್‌ಅಪ್ ಸ್ಥಾನ ಪಡೆದುಕೊಂಡಿತು.

ಈ ಟೂರ್ನಿಯನ್ನು ಪಶ್ಚಿಮ ಬಂಗಾಳದ ರಾಜ್ಯಪಾಲ ಎಂ.ಕೆ.ನಾರಾಯಣನ್ ಉದ್ಘಾಟಿಸಿದರು. ಸಮಾರೋಪ ಸಮಾರಂಭದಲ್ಲಿ ಕ್ರೀಡೆ ಮತ್ತು ಸಾರಿಗೆ ಸಚಿವ ಮದನ್ ಮಿತ್ರ ವಿಜೇತರಿಗೆ ಬಹುಮಾನ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT