ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್ ತರಬೇತಿಗೆ ಆಸ್ಟ್ರೇಲಿಯಾ ಅಕಾಡೆಮಿ

Last Updated 18 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಟೆನಿಸ್ ತರಬೇತುದಾರರ ಆಸ್ಟ್ರೇಲಿಯಾ ಅಕಾಡೆಮಿ'ಯು (ಎಎಟಿಸಿ) ತನ್ನ ತರಬೇತಿ ಕಾರ್ಯಕ್ರಮಗಳನ್ನು ಉದ್ಯಾನ ನಗರಿಗೆ ವಿಸ್ತರಿಸಿರುವುದಾಗಿ ಗುರುವಾರ ಪ್ರಕಟಿಸಿತು.

`ಗ್ರೌಂಡ್ ಸ್ಟ್ರೋಕ್ಸ್ ಟೆನಿಸ್ ಅಕಾಡೆಮಿ'ಯ ಸಹಭಾಗಿತ್ವದಲ್ಲಿ ಎಎಟಿಸಿಯು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದೆ. ಈ ಬಗ್ಗೆ ಸ್ದ್ದುದಿಗಾರರೊಂದಿಗೆ ಮಾತನಾಡಿದ ಎಎಟಿಸಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಿಂಟನ್ ಜೋಸೆಫ್, `ಏಷಿಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಅಂತರರಾಷ್ಟ್ರೀಯ ಮಟ್ಟದ ತರಬೇತುದಾರರ ಮೂಲಕ ಟೆನಿಸ್ ಅಭಿವೃದ್ಧಿಪಡಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಟೆನಿಸ್ ಕ್ರೀಡೆಯನ್ನು ವೃತ್ತಿಯನ್ನಾಗಿ ಸ್ವೀಕರಿಸಲು ಬಯಸುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು ನಮ್ಮ ಗುರಿ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT