ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್ ತಾರೆಯ ಪ್ರೇಮ ಕಥನ

Last Updated 11 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಟೆನಿಸ್ ತಾರೆ ರೋಹನ್ ಬೋಪಣ್ಣ ಮತ್ತು ಅವರ ಪತ್ನಿ ಸುಪ್ರಿಯಾ ಮೊನ್ನೆ ಉಂಗುರ ಬದಲಾಯಿಸಿಕೊಂಡರು. ಅರೆ ಇದೇನು ಮದುವೆಯಾಗಿ ಇಷ್ಟು ದಿನಗಳಾದ ಮೇಲೆ ಉಂಗುರ ಬದಲಾಯಿಸಿಕೊಳ್ಳುವ ಜರೂರತ್ತೇನು ಎಂದುಕೊಂಡರೆ...

ಆಭರಣ ತಯಾರಿಕಾ ಕ್ಷೇತ್ರದ ಹಿರಿತಲೆ ಎಂದೇ ಗುರುತಿಸಿಕೊಳ್ಳುವ ‘ಸಿ. ಕೃಷ್ಣಯ್ಯ ಚೆಟ್ಟಿ ಅಂಡ್‌ ಸನ್ಸ್‌’ ಅವರು ಇತ್ತೀಚೆಗೆ ನಗರದ ಆಲಿವ್‌ ಬೀಚ್‌ ಹೋಟೆಲ್ನಲ್ಲಿ ಬಿಡುಗಡೆ ಮಾಡಿದ ‘ಪ್ಲಾಟಿನಂ ಲವ್‌ ಬ್ಯಾಂಡ್‌’ಗಳ ಶ್ರೇಣಿಯನ್ನು ಅನಾವರಣಗೊಳಿಸಿದ ಸಂದರ್ಭವದು.

ವೇದಿಕೆಯಲ್ಲಿ ನಿಂತಿದ್ದ ರೋಹನ್ ಬೆರಳಿಗೆ ಸುಪ್ರಿಯಾ ನಾಚುತ್ತಲೇ ಉಂಗುರ ತೊಡಿಸಿದರು. ನಂತರ ರೋಹನ್‌ ಸರದಿ.

ಹೇಳಿಕೇಳಿ ರೋಹನ್‌ ಬೋಪಣ್ಣ ಅವರದು ಪ್ರೇಮವಿವಾಹ. ಅವರು ತಮ್ಮ ಪ್ರೀತಿಯನ್ನು ದಕ್ಕಿಸಿಕೊಂಡ ಬಗೆಯನ್ನು ಕೆದಕಿದ ’ಮೆಟ್ರೊ’ಗೆ ಅವರು ಕೆನ್ನೆಕೆಂಪು ಮಾಡಿಕೊಂಡೇ ಉತ್ತರಿಸಿದರು....

ಸುಪ್ರಿಯಾ ಅವರನ್ನು ನೀವು ಭೇಟಿ ಯಾಗಿದ್ದು ಯಾವಾಗ?
ನಗರದ ರೆಸ್ಟೋರೆಂಟ್‌ ಒಂದರಲ್ಲಿ ನಾನು ಸುಪ್ರಿಯಾರನ್ನು ನೋಡಿದೆ. ಸುಪ್ರಿಯಾ ಮತ್ತು ನನ್ನ ಕಾಮನ್ ಫ್ರೆಂಡ್ ಮೂಲಕ ಪರಿಚಯವಾಯಿತು. ಆ ಕ್ಷಣವೇ ನನಗೆ ಮಧುರ ಭಾವ ಮೂಡಿತು. ತೋರಿಸಿಕೊಳ್ಳಲಿಲ್ಲವೆನ್ನಿ. ನನ್ನ ಸಹೋದರ ಸಂಬಂಧಿ ಜತೆ ಅವಳು ಮಾತನಾಡುತ್ತಿರುವುದನ್ನು ನೋಡಿ ಖುಷಿಯಾಯಿತು. ಅವಳ ಬಗ್ಗೆ ಮಾಹಿತಿ ಕಲೆಹಾಕಿದೆ. ಅವಳು ಮನಶಾಸ್ತ್ರಜ್ಞೆ ಎಂಬುದು ತಿಳಿಯಿತು.

ಪ್ರಪೋಸ್‌ ಹೇಗೆ ಮಾಡಿದ್ರಿ?
ಹಾಗೆ ಮನಸ್ಸಿಗೆ ಬಂದ ಹುಡುಗಿಯಲ್ಲಿ ಪ್ರೇಮ ನಿವೇದನೆ ಮಾಡಿಕೊಳ್ಳಬೇಕು ಎಂದು ಅವಕಾಶಕ್ಕಾಗಿ ಕಾಯುತ್ತಿದ್ದೆ. ಒಂದು ದಿನ ನಗರದ ಹೋಟೆಲ್‌ ಒಂದರಲ್ಲಿ ರೂಂ ಬುಕ್‌ ಮಾಡಿ ಸುಪ್ರಿಯಾಳನ್ನು ಕರೆಸಿಕೊಂಡೆ. ನಿರಾಕರಿಸಿದರೆ ಎಂಬ ಭಯ ನನ್ನಲ್ಲಿತ್ತು. ನಾನು ಪ್ರಪೋಸ್‌ ಮಾಡಲೆಂದೇ ಕರೆಸಿಕೊಂಡಿದ್ದೆನೆಂಬುದು ಸುಪ್ರಿಯಾಗೆ ಗೊತ್ತಿರಲಿಲ್ಲ. ಅದು ನನ್ನ ಮೊದಲ ಪ್ರೀತಿ. ಬರಿ ಮಾತಲ್ಲಿ ಪ್ರೇಮನಿವೇದನೆ ಮಾಡಿಕೊಳ್ಳುವುದಕ್ಕಿಂತ ಭಿನ್ನವಾಗಿ ಪ್ರಪೋಸ್‌ ಮಾಡಬೇಕು ಎಂಬುದು ನನ್ನ ಆಸೆ ಆಗಿತ್ತು. ಹೋಟೆಲ್‌ನ ಬಾಲ್ಕನಿಯ ನೆಲವನ್ನು ಗುಲಾಬಿ ಪಕಳೆಯಿಂದ ಹಾಸಲಾಗಿತ್ತು. ಕ್ಯಾಂಡಲ್‌, ಕೇಕ್‌ ಮತ್ತಿತರ ಅಲಂಕಾರವೂ ಇತ್ತು.

ಸುಪ್ರಿಯಾಳನ್ನು ಅಲ್ಲಿಗೆ ಕರೆದುಕೊಂಡು ಹೋದೆ. ಅವಳು ಅವಾಕ್ಕಾಗಿದ್ದಳು. ತಡಮಾಡದೆ ನಾನು ಮೊಣಕಾಲೂರಿ ಅವಳಲ್ಲಿ ನನ್ನನ್ನು ಮದುವೆ ಆಗುತ್ತಿಯಾ ಎಂದು ಕೇಳಿದೆ. ಅವಳು ಒಪ್ಪಿಗೆ ಸೂಚಿಸಿಬಿಟ್ಟಳು! ಅವಳ ಕಣ್ಣಲ್ಲಿದ್ದ ಆಶ್ಚರ್ಯ, ಸಂತೋಷ ಈಗಲೂ ನೆನಪಿದೆ. ಅಲ್ಲಿದ್ದ ಕ್ಯಾಮೆರಾ ಆ ಕ್ಷಣಗಳನ್ನು ಕ್ಲಿಕ್ ಮಾಡಿತು...

ಸುಪ್ರಿಯಾ ಅವರಲ್ಲಿ ನಿಮಗೆ ಇಷ್ಟವಾಗುವ ಗುಣ ಯಾವುದು?
ನನ್ನೆಲ್ಲಾ ಕೆಲಸಕ್ಕೆ ಅವಳ ಬೆಂಬಲ ಸದಾ ಇರುತ್ತದೆ. ಟೂರ್ನ್‌ಮೆಂಟ್ ಇದ್ದಾಗ ಬರುತ್ತಾಳೆ. ಪ್ರೋತ್ಸಾಹ ನೀಡುತ್ತಾಳೆ. ನನ್ನ ಬದುಕಿಗೆ ಅವಳೇ ಒಂದು ಶಕ್ತಿ.

ಹೊಸ ವರ್ಷಕ್ಕೆ ಯೋಜನೆ ಏನು?
ಸದ್ಯಕ್ಕೆ ಯಾವುದೇ ಪ್ಲ್ಯಾನ್‌ ಹಾಕಿಕೊಂಡಿಲ್ಲ.

ಪ್ಲಾಟಿನಂ ಬಗ್ಗೆ ನಿಮ್ಮ ಅಭಿಪ್ರಾಯ?
ಪ್ಲಾಟಿನಂ ತುಂಬಾ ಇಷ್ಟ. ಇದರ ವಿನ್ಯಾಸ ತುಂಬಾ ಇಷ್ಟವಾಗಿದೆ. ಪ್ಲಾಟಿನಂ ದಿನದ ನಿಮಿತ್ತ ಇಬ್ಬರೂ ರಿಂಗ್‌ ವಿನಿಮಯ ಮಾಡಿಕೊಂಡೆವು. ಈ ಕ್ಷಣ ಮಧುರವಾದದ್ದು.

ಮಡಿಕೇರಿಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಹೋಗುವ ಯೋಜನೆ ಇದೆಯಾ?
ಟೂರ್ನ್‌ಮೆಂಟ್‌ ಇದೆ. ಹಾಗಾಗಿ ಹೋಗುವುದು ಕಷ್ಟವಾಗುತ್ತದೆ. ಇಲ್ಲದಿದ್ದರೆ ನನಗೆ ಅಂತಹ ಕಾರ್ಯಕ್ರಮಕ್ಕೆ ಹೋಗುವುದೆಂದರೆ ತುಂಬಾ ಪ್ರೀತಿ. ಸಮಯ ಸಿಕ್ಕಾಗಲೆಲ್ಲಾ ಪುಸ್ತಕ ಓದುವುದು ನನ್ನ ಮೆಚ್ಚಿನ ಹವ್ಯಾಸ.
****
‘ಪ್ಲಾಟಿನಂ ಆಭರಣದ ಬೇಡಿಕೆ ಇಂದು ಹೆಚ್ಚುತ್ತಿದೆ. ಯುವಜನತೆ ಪ್ಲಾಟಿನಂ ಆಭರಣವನ್ನು ಹೆಚ್ಚು ಇಷ್ಟಪಡುತ್ತಾರೆ. ಪಾರ್ಟಿವೇರ್ ಉಡುಪುಗಳಿಗೆ ಈ ಆಭರಣಗಳು ಚೆನ್ನಾಗಿ ಒಪ್ಪುತ್ತವೆ. ಪ್ಲಾಟಿನಂ ಲವ್‌ ಬ್ಯಾಂಡ್‌ ಉಡುಗೊರೆಯಾಗಿ ನೀಡಲು ಚಳಿಗಾಲ ಅತ್ಯುತ್ತಮ ಸೀಸನ್‌ ಎಂದವರು ಸಿ. ಕೃಷ್ಣಯ್ಯಚೆಟ್ಟಿ ಅಂಡ್‌ ಸನ್ಸ್‌ ವ್ಯವಸ್ಥಾಪಕ ನಿರ್ದೇಶಕ ವಿನೋದ್‌ ಹಯಗ್ರೀವ್‌!

ಅದಕ್ಕೆಂದೇ ಪ್ಲಾಟಿನಂ ಲವ್‌ ಬ್ಯಾಂಡ್‌–ಎಂಡ್‌ಲೆಸ್‌ ಲವ್‌ ಕಲೆಕ್ಷನ್‌ ಬಿಡುಗಡೆ ಮಾಡಿರುವುದಾಗಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT