ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್: ಫೈನಲ್‌ಗೆ ಐಸಾಮ್-ರೋಹನ್

Last Updated 21 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸ್ಟಾಕ್‌ಹೋಮ್ (ಪಿಟಿಐ): ಭಾರತದ ರೋಹನ್ ಬೋಪಣ್ಣ ಹಾಗೂ ಪಾಕಿಸ್ತಾನದ ಐಸಾಮ್ ಉಲ್ ಹಕ್ ಖುರೇಶಿ ಅವರು ಸ್ಟಾಕ್‌ಹೋಮ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.

ಅಗ್ರಶ್ರೇಯಾಂಕ ಹೊಂದಿರುವ ಭಾರತ-ಪಾಕ್ ಜೋಡಿಯು ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ 2-6, 6-2, 10-8ರಲ್ಲಿ ಸೈಪ್ರಸ್‌ನ ಮಾರ್ಕೊಸ್ ಬಗ್ದಾಟಿಸ್ ಹಾಗೂ ಅರ್ಜೆಂಟೀನಾದ ಡೆಲ್ ಪೊಟ್ರೊ ವಿರುದ್ಧ ವಿಜಯ ಸಾಧಿಸಿತು.

ಆರು ಲಕ್ಷ ಯೂರೊ ಬಹುಮಾನ ಮೊತ್ತದ ಈ ಟೂರ್ನಿಯ ನಾಲ್ಕರ ಘಟ್ಟದ ಪಂದ್ಯವು ಒಂದು ತಾಸಿಗೂ ಹೆಚ್ಚು ಸಮಯ ವಿಸ್ತರಿಸಿತು. ಬೋಪಣ್ಣ ಮತ್ತು ಖುರೇಶಿ ಅವರು ಉತ್ತಮ ಹೊಂದಾಣಿಕೆಯ ಆಟದಿಂದ ಬಗ್ದಾಟಿಸ್ ಮತ್ತು ಪೊಟ್ರೊ ಮೇಲೆ ಒತ್ತಡ ಸಾಧಿಸಲು ಪ್ರಯತ್ನ ಮಾಡಿದರು. ಆದರೆ ಮೊದಲ ಸೆಟ್‌ನಲ್ಲಿ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿಲ್ಲ. ಆದರೆ ಆನಂತರ ಭಾರಿ ಚುರುಕಿನ ಆಟವಾಡಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ ರೋಹನ್ ಹಾಗೂ ಐಸಾಮ್ ಜೋಡಿಯು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 7-6 (5), 7-5ರಲ್ಲಿ ಜರ್ಮನಿಯ ಮೈಕಲ್ ಕೋಲ್ಮನ್ ಮತ್ತು ಅಲೆಕ್ಸಾಂಡರ್ ವಾಸ್ಕ್ ವಿರುದ್ಧ ಗೆಲುವು ಸಾಧಿಸಿದ್ದರು.

ಭಾರತ-ಪಾಕ್ ಆಟಗಾರರು ಫೈನಲ್‌ನಲ್ಲಿ ಯಾರ ವಿರುದ್ಧ ಆಡುತ್ತಾರೆನ್ನುವುದು ಇನ್ನೂ ನಿರ್ಧಾರವಾಗಬೇಕಿದೆ. ಅರ್ಜೆಂಟೀನಾದ ಜುವಾನ್ ಲಾನ್ಸಿಯೊ-ಬ್ರೆಜಿಲ್‌ನ ಆ್ಯಂಡ್ರೆ ಸಾ ಹಾಗೂ ಬ್ರೆಜಿಲ್ ಜೋಡಿಯಾದ ಮಾರ್ಸೆಲೊ ಮೆಲೊ-ಬ್ರೂನೊ ಸೋರೆಸ್ ನಡುವಣ ಪಂದ್ಯದಲ್ಲಿ ಗೆಲ್ಲುವವರ ವಿರುದ್ಧ ರೋಹನ್-ಐಸಾಮ್ ಜೋಡಿಯು ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT