ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ಗೆ ಮೈಕ್ ಹಸ್ಸಿ ವಿದಾಯ

ಶ್ರೀಲಂಕಾ ವಿರುದ್ಧ ಸಿಡ್ನಿಯಲ್ಲಿ ನಡೆಯಲಿರುವ ಪಂದ್ಯ ಕೊನೆಯದ್ದು
Last Updated 29 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಸಿಡ್ನಿ (ಪಿಟಿಐ): ಆಸ್ಟ್ರೇಲಿಯಾ ತಂಡದ ಮಧ್ಯಮ ಕ್ರಮಾಂಕದ ಯಶಸ್ವಿ ಬ್ಯಾಟ್ಸ್‌ಮನ್ ಮೈಕ್ ಹಸ್ಸಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಶ್ರೀಲಂಕಾ ವಿರುದ್ಧ ಸಿಡ್ನಿಯಲ್ಲಿ ಜನವರಿ ಮೂರರಂದು ಆರಂಭವಾಗಲಿರುವ ಟೆಸ್ಟ್ ಪಂದ್ಯ ಹಸ್ಸಿ ಪಾಲಿಗೆ ಕೊನೆಯದ್ದು.

`ಹಸ್ಸಿ ಶ್ರೀಲಂಕಾ ವಿರುದ್ಧ ಸಿಡ್ನಿಯಲ್ಲಿ ನಡೆಯಲಿರುವ ಪಂದ್ಯದ ಬಳಿಕ ಟೆಸ್ಟ್‌ಗೆ ವಿದಾಯ ಹೇಳಲಿದ್ದಾರೆ. ಅದು ಅವರ ಪಾಲಿನ 79ನೇ ಪಂದ್ಯ. ಆದರೆ ಹಸ್ಸಿ ಆಸ್ಟ್ರೇಲಿಯಾದ ದೇಶಿ ಕ್ರಿಕೆಟ್ ಟೂರ್ನಿಗೆ ಲಭ್ಯರಿರುತ್ತಾರೆ' ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.

`ಹಸ್ಸಿ ವಿದಾಯದಿಂದ ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಹಿನ್ನಡೆಯಾಗಿದೆ. ಇದುವರೆಗಿನ ನಮ್ಮ ಹಲವು ಗೆಲುವಿನಲ್ಲಿ ಹಸ್ಸಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ವಿದಾಯ ಜೀವನಕ್ಕೆ ನಮ್ಮ ಶುಭ ಹಾರೈಕೆ' ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೇಮ್ಸ ಸದರ್ಲೆಂಡ್ ನುಡಿದಿದ್ದಾರೆ.

`ಈ ವಿಷಯ ಕೇಳಿ ನನಗೆ ಆಘಾತವಾಯಿತು' ಎಂದು ಆಸ್ಟ್ರೇಲಿಯಾ ತಂಡದ ಕೋಚ್ ಮಿಕಿ ಆರ್ಥರ್ ಟ್ವಿಟ್ ಮಾಡಿದ್ದಾರೆ. ಇದಕ್ಕೆ ಕಾರಣ ಹಸ್ಸಿ ಉತ್ತಮ ಫಾರ್ಮ್‌ನಲ್ಲಿದ್ದರು. ಹಾಗಾಗಿ ಅವರ ಈ ನಿರ್ಧಾರ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಹಸ್ಸಿ ವಿಶೇಷವೆಂದರೆ ಅವರು ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದು 30ನೇ ವಯಸ್ಸಿನಲ್ಲಿ. ಆದಾಗ್ಯೂ ಅವರು ಅತ್ಯುತ್ತಮ ಪ್ರದರ್ಶನದ ಮೂಲಕ ಖ್ಯಾತ ಕ್ರಿಕೆಟಿಗ ಎನಿಸಿಕೊಂಡರು. ಸ್ಥಿರ ಆಟಕ್ಕೆ ಇನ್ನೊಂದು ಹೆಸರು ಹಸ್ಸಿ ಎಂದು ಹೇಳಬಹುದು. ಅದಕ್ಕೆ ಸಾಕ್ಷಿ ಅವರ ಸರಾಸರಿ. ಟೆಸ್ಟ್‌ನಲ್ಲಿ 51.52 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 48.15 ಸರಾಸರಿ ಹೊಂದಿದ್ದಾರೆ. ಹಾಗಾಗಿ ಅವರನ್ನು `ಮಿಸ್ಟರ್ ಕ್ರಿಕೆಟ್' ಎಂದು ಕರೆಯಲಾಗುತ್ತಿದೆ.  ಇತ್ತೀಚೆಗಷ್ಟೇ ಈ ತಂಡದ ರಿಕಿ ಪಾಂಟಿಂಗ್ ಕೂಡ ವಿದಾಯ ಹೇಳಿದ್ದರು. ಈಗ ಹಸ್ಸಿ ಸರದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT