ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈಗರ್ ಏರ್‌ವೇಸ್ ಒಪ್ಪಂದ

Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಬೆಂಗಳೂರು: ವಿಮಾನ ಟಿಕೆಟ್ ಬುಕ್ಕಿಂಗ್‌ಗೆ ಸಂಬಂಧಿಸಿದಂತೆ ಪ್ರಮುಖ ಪ್ರವಾಸಿ ಸಂಸ್ಥೆ ವಯಾ ಡಾಟ್ ಕಾಂ ಮತ್ತು ಅಗ್ಗದ ದರದ ವಿಮಾನಯಾನ ಸಂಸ್ಥೆ ಟೈಗರ್ ಏರ್‌ವೇಸ್ ಬುಧವಾರ ಇಲ್ಲಿ ಒಪ್ಪಂದ ಮಾಡಿಕೊಂಡಿವೆ.ಈ ಜಂಟಿ ಪಾಲುದಾರಿಕೆಯಡಿ ವಯಾ ಡಾಟ್ ಕಾಂ, ಭಾರತ, ಇಂಡೋನೇಷಿಯಾ ಮತ್ತು ಪಿಲಿಫೀನ್ಸ್‌ಗಳಲ್ಲಿ ಟೈಗರ್ ಏರ್‌ವೇಸ್‌ನ ಅಧಿಕೃತ ಟಿಕೆಟ್ ಏಜೆಂಟ್ ಆಗಿ ಕಾರ್ಯನಿರ್ವಹಿಸಲಿದೆ. ಹೋಟೆಲ್ ಬುಕ್ಕಿಂಗ್ ಸೇರಿದಂತೆ ಹಲವು ಮೌಲ್ಯವರ್ಧಿತ ಸೇವೆಗಳನ್ನೂ ಒದಗಿಸಲಿದೆ.  

ಟೈಗರ್ ಏರ್‌ವೇಸ್ 13 ದೇಶಗಳ 50ಕ್ಕೂ ಹೆಚ್ಚು ನಗರಗಳಿಗೆ ಸಂಪರ್ಕ ಹೊಂದಿದ್ದು,  ಈ ಸಹಭಾಗಿತ್ವದ ಮೂಲಕ ಜಾಗತಿಕ ಮಾರುಕಟ್ಟೆ ವಿಸ್ತರಿಸುವ ಯೋಜನೆ ಹೊಂದಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ವಯಾ ಡಾಟ್ ಕಾಂನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವಿನಯ್ ಗುಪ್ತಾ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT