ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈಟಾನ್ ಪರಿಚಯಿಸಿದೆ ಎಡ್ಜ್-2012

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಟೈಟಾನ್ ಕಂಪೆನಿ, ವಿಶ್ವದಲ್ಲೇ ಅತ್ಯಂತ ತೆಳುವಾದ, ಶ್ರೀಮಂತ ಶೈಲಿಯ `ಎಡ್ಜ್-2012~ ಕೈಗಡಿಯಾರವನ್ನು ಭಾರತದ ಮಾರುಕಟ್ಟೆಗೆ ಶುಕ್ರವಾರ ಇಲ್ಲಿ ಬಿಡುಗಡೆ ಮಾಡಿದೆ. ಟೈಟಾನಿಯಮ್ ಲೋಹದಿಂದ ತಯಾರಿಸಿದ ಈ ಗಡಿಯಾರ ಬಲು ಹಗುರವಾಗಿದೆ(36 ಗ್ರಾಂ).

`ವಿಮಾನ ತಯಾರಿಕೆಗೆ ಬಳಸುವ ಲೋಹ ಟೈಟಾನಿಯಂನಿಂದ ಈ ಕೈಗಡಿಯಾರ ಸಿದ್ಧಪಡಿಸಲಾಗಿದೆ. ಇದು ನೀರು ನಿರೋಧಕ. ಗಾತ್ರದಲ್ಲಿ ಕೇವಲ 1.15 ಮಿ.ಮೀ. ಇದೆ.  8 ಬಗೆಯ ವಿನ್ಯಾಸಗಳಲ್ಲಿರುವ ಈ ಕೈಗಡಿಯಾರದ ಬೆಲೆ ರೂ. 11,995ರಿಂದ 16,995 ಎಂದು `ಟೈಟಾನ್~ ಕಂಪೆನಿ ಗಡಿಯಾರ-ಪರಿಕರಗಳ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಜಿ.ರಘುನಾಥ್ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೈಟಾನ್‌ಗೀಗ 25ರ ಹರೆಯ. ಪ್ರತಿವರ್ಷ ಹಲವು ಹೊಸ ಕೈಗಡಿಯಾರ ಬಿಡುಗಡೆ ಮಾಡುತ್ತಲೇ ಇದೆ. 2002ರಲ್ಲಿ `ಎಡ್ಜ್~ ಸರಣಿ ಮೊದಲ ಕೈಗಡಿಯಾರ(ಆಗ 3.5 ಮಿ.ಮೀ ದಪ್ಪ) ಪರಿಚಯಿಸಲಾಯಿತು. ಆಗ ಅದುವೇ ವಿಶ್ವದ ಅತ್ಯಂತ ತೆಳು ಕೈಗಡಿಯಾರ ಎನಿಸಿಕೊಂಡು ಗಿನ್ನಿಸ್ ದಾಖಲೆ ಸೇರಿತು. 2007ರಲ್ಲಿ `ಎಡ್ಜ್~ ಗಾತ್ರವನ್ನು 1.15 ಮಿ.ಮೀ.ಗೆ ಇಳಿಸುವಲ್ಲಿ ನಮ್ಮ ತಂತ್ರಜ್ಞರು ಸಫಲರಾದರು. ಪೇಟೆಂಟ್(ಹಕ್ಕುಸ್ವಾಮ್ಯ) ಸಹ ಪಡೆಯಲಾಯಿತು. ಈಗಿನ ಹೊಸ ಮಾದರಿ ಗಾತ್ರದಲ್ಲಿ ತೆಳುವಷ್ಟೇ ಅಲ್ಲ, ಬಲು ಹಗುರವೂ ಇದೆ ಎಂದರು.

ನಂತರ ಮಾತನಾಡಿದ `ಟೈಟಾನ್~ನ ಜಾಗತಿಕ ಮಾರಾಟ ವಿಭಾಗ ಮುಖ್ಯಸ್ಥ ಅಜೋಯ್ ಚಾವ್ಲಾ, ಭಾರತದ ಕೈಗಡಿಯಾರ ಮಾರುಕಟ್ಟೆ ಶೇ 5ರಿಂದ 7ರಷ್ಟು ಪ್ರಗತಿ ಕಾಣುತ್ತಿದೆ. 2011ರಲ್ಲಿ 4.50 ಕೋಟಿ ಕೈಗಡಿಯಾರ ಮಾರಾಟವಾಗಿವೆ. ಟೈಟಾನ್, ಸೊನಾಟಾ, ಫಾಸ್ಟ್‌ಟ್ರ್ಯಾಕ್ ಸೇರಿದಂತೆ ಒಟ್ಟು 1.55 ಕೋಟಿ ಕೈಗಡಿಯಾರ ಮಾರುವ ಮೂಲಕ ದೇಶದ ಮಾರುಕಟ್ಟೆಯಲ್ಲಿ ಶೇ 29ರಷ್ಟು ದೊಡ್ಡ ಪಾಲನ್ನು `ಟೈಟಾನ್~ ಹೊಂದಿದೆ. 32 ದೇಶಗಳಿಗೂ ರಫ್ತು ಮಾಡುತ್ತಿದೆ. ಕಳೆದ ವರ್ಷ ಟೈಟಾನ್ ಬ್ರಾಂಡ್ ಕೈಗಡಿಯಾರಗಳೇ ದೇಶದಲ್ಲಿ 40 ಲಕ್ಷ, ವಿದೇಶದಲ್ಲಿ 8.5 ಲಕ್ಷ ಮಾರಾಟವಾಗಿವೆ ಎಂದರು.`ಟೈಟಾನ್ ಎಡ್ಜ್-2012~ ಕೈಗಡಿಯಾರವನ್ನು ಖ್ಯಾತ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಬಿಡುಗಡೆ ಮಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT