ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈಟಾನ್ಸ್ ತಂಡಕ್ಕೆ ಜಯ

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸೆಂಚೂರಿಯನ್ (ಪಿಟಿಐ): ಜಾಕ್ ರುಡಾಲ್ಫ್ (83, 59 ಎಸೆತ, 9 ಬೌಂ, 3 ಸಿಕ್ಸರ್) ತೋರಿದ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಟೈಟಾನ್ಸ್ ತಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಸೂಪರ್ ಸ್ಪೋರ್ಟ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮಾರ್ಟಿನ್ ವಾನ್ ಜಾಸ್‌ವೆಲ್ಡ್ ನೇತೃತ್ವದ ತಂಡ 39 ರನ್‌ಗಳಿಂದ ಪರ್ತ್ ಸ್ಕಾಚರ್ಸ್ ವಿರುದ್ಧ ಜಯ ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಟೈಟಾನ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 163 ರನ್ ಪೇರಿಸಿದರೆ, ಎದುರಾಳಿ ತಂಡ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ಗೆ 124 ರನ್ ಗಳಿಸಲಷ್ಟೇ ಶಕ್ತವಾಯಿತು. ಸವಾಲಿನ ಗುರಿ ಬೆನ್ನಟ್ಟಿದ ಸ್ಕಾಚರ್ಸ್ ತಂಡ 17 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿತು.

ಆ ಬಳಿಕ ಮಿಚೆಲ್ ಮಾರ್ಷ್ (ಅಜೇಯ 52, 41 ಎಸೆತ, 5 ಬೌಂ, 1 ಸಿಕ್ಸರ್) ಮತ್ತು ಸೈಮನ್ ಕ್ಯಾಟಿಚ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಪ್ರಯತ್ನ ನಡೆಸಿದರಾದರೂ ಯಶ ಕಾಣಲಿಲ್ಲ. 16 ರನ್‌ಗಳಿಗೆ ಮೂರು ವಿಕೆಟ್ ಪಡೆದ ಕನೇಲಿಯಸ್ ಡಿವಿಲಿಯರ್ಸ್ ಟೈಟಾನ್ಸ್ ಪರ ಮಿಂಚಿದರು.

ಇದಕೂ ಮುನ್ನ ರುಡಾಲ್ಫ್ ಮತ್ತು ಹೆನ್ರಿ ಡೇವಿಡ್ಸ್ (54, 38 ಎಸೆತ, 4 ಬೌಂ, 4 ಸಿಕ್ಸರ್) ಮೊದಲ ವಿಕೆಟ್‌ಗೆ 109 ರನ್ ಸೇರಿಸಿ ಟೈಟಾನ್ಸ್ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು.

ಸಂಕ್ಷಿಪ್ತ ಸ್ಕೋರ್: ಟೈಟಾನ್ಸ್
: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 163 (ಜಾಕ್ ರುಡಾಲ್ಫ್ 83, ಹೆನ್ರಿ ಡೇವಿಡ್ಸ್ 54, ನಥಾನ್ ರಿಮಿಂಗ್ಟನ್ 20ಕ್ಕೆ 2). ಪರ್ತ್ ಸ್ಕಾಚರ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 124 (ಮಿಚೆಲ್ ಮಾರ್ಷ್ ಔಟಾಗದೆ 52, ಸೈಮನ್ ಕ್ಯಾಟಿಚ್ 23, ಹರ್ಷೆಲ್ ಗಿಬ್ಸ್ 19, ಕನೇಲಿಯಸ್ ಡಿವಿಲಿಯರ್ಸ್ 16ಕ್ಕೆ 3). ಫಲಿತಾಂಶ: ಟೈಟಾನ್ಸ್‌ಗೆ 39 ರನ್ ಜಯ ಹಾಗೂ ನಾಲ್ಕು ಪಾಯಿಂಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT