ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮಾಟೊ ಉತ್ಸವ: ಅನುಮತಿ ಇಲ್ಲ

Last Updated 16 ಸೆಪ್ಟೆಂಬರ್ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಶನಿವಾರ ಮತ್ತು ಭಾನುವಾರ ನಡೆಯಬೇಕಿದ್ದ ಮೋಜಿ ಗಾಗಿ ಒಬ್ಬರ ಮೇಲೆ ಇನ್ನೊಬ್ಬರು ಟೊಮಾಟೊ ಹಣ್ಣುಗಳನ್ನು ಎಸೆ ಯುವ `ಲಾ ಟೊಮಾಟಿನಾ~ ಉತ್ಸ ವವನ್ನು ರದ್ದು ಮಾಡುವಂತೆ ಮುಖ್ಯ ಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಬೆಂಗಳೂರು ಮತ್ತು ಮೈಸೂರು ಪೊಲೀಸ್ ಆಯುಕ್ತರಿಗೆ ಆದೇಶಿಸಿದ್ದಾರೆ.

`ರೈತರು ಬೆಳೆದ ಟೊಮಾಟೊ ಹಣ್ಣುಗಳನ್ನು ಮೋಜಿಗಾಗಿ ಒಬ್ಬರ ಮೇಲೆ ಒಬ್ಬರು ಎಸೆದುಕೊಳ್ಳುವ `ಲಾ ಟೊಮಾಟಿನಾ~ ಉತ್ಸವದ ಹೆಸರಿನಲ್ಲಿ ಬೆಳೆಯನ್ನು ಹಾಳುಮಾಡಲು ಅವಕಾಶ ನೀಡಬಾರದು~ ಎಂದು ಕೋಲಾರ ಜಿಲ್ಲೆಯ ಟೊಮಾಟೊ ಬೆಳೆಗಾರರು, ಪರಿಸರವಾದಿಗಳು ಹಾಗೂ ಸರ್ಕಾ ರೇತರ ಸಂಘ ಸಂಸ್ಥೆಗಳ ನಿಯೋಗವು ಮುಖ್ಯಮಂತ್ರಿಗಳನ್ನು ಗೃಹ ಕಚೇರಿ `ಕೃಷ್ಣಾ~ದಲ್ಲಿ ಶುಕ್ರವಾರ ಭೇಟಿ ಮಾಡಿ ಮನವಿ ಸಲ್ಲಿಸಿತು.

`ಲಾ ಟೊಮಾಟಿನಾ ಉತ್ಸವದಲ್ಲಿ ಐದು ಸಾವಿರ ಜನ ಪಾಲ್ಗೊಳ್ಳಲಿದ್ದಾರೆ. ಪ್ರತಿಯೊಬ್ಬರೂ ಕನಿಷ್ಠ 80ರಿಂದ 100 ಟೊಮಾಟೊ ಹಣ್ಣುಗಳನ್ನು ಮೋಜಿ ಗಾಗಿ ಎಸೆದುಕೊಳ್ಳುತ್ತಾರೆ. ಇದರಿಂದ 5 ಲಕ್ಷ ಟೊಮಾಟೊ ಹಣ್ಣು ಮಣ್ಣು ಪಾಲಾಗಲಿದೆ. ಏನಿಲ್ಲವೆಂದರೂ 62 ಸಾವಿರ ಕೆ.ಜಿ. ಟೊಮಾಟೊ ಶ್ರಿಮಂತರ ಮೋಜಿಗೆ ಹಾಳಾಗುವುದು ಸರಿಯಲ್ಲ~ ಎಂದು ನಿಯೋಗದ ನೇತೃತ್ವ ವಹಿಸಿದ್ದ ಜಯನಗರ ಶಾಸಕ ಬಿ.ಎನ್. ವಿಜಯ ಕುಮಾರ್ ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಮುಖ್ಯ ಮಂತ್ರಿಗಳು ಈ ಉತ್ಸವವನ್ನು ರದ್ದು ಮಾಡುವಂತೆ ಆದೇಶಿಸಿ ಮೈಸೂರು ಮತ್ತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

`ಡಾಟ್~ ಎಂಬ ಸಂಸ್ಥೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ `ಟೊಮಾಟೊ ಸ್ಕ್ವಾಷ್~ ಹೆಸರಿನಲ್ಲಿ `ಲಾ ಟೊಮಾಟಿನಾ~ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಿತ್ತು. ಪ್ಯಾಷ ನೇಟ್ ಪ್ರೊಫೆಷನಲ್ಸ್ ಸಂಸ್ಥೆ ಅರಮನೆ ಮೈದಾನದ ಪ್ರಿನ್ಸಸ್ ಅಕಾಡೆಮಿಯಲ್ಲಿ ಭಾನುವಾರ `ಲಾ ಟೊಮಾಟಿನಾ ಫೆಸ್ಟಿವಲ್~ ಹೆಸರಿನಲ್ಲಿ ಇದೇ ಉತ್ಸವ ಆಯೋಜಿಸಲು ಉದ್ದೇಶಿಸಿತ್ತು.

ಅನುಮತಿ ನಿರಾಕರಣೆ: ಡಾಟ್ ಸಂಸ್ಥೆಯ `ಟೊಮಾಟೊ ಸ್ಕ್ವಾಷ್~ ಕಾರ್ಯಕ್ರಮಕ್ಕೆ ಅನುಮತಿ ನಿರಾಕ ರಿಸಲಾಗಿದೆ. ಪ್ಯಾಷನೇಟ್ ಪ್ರೊಫೆ ಷನಲ್ಸ್ ಸಂಸ್ಥೆ ಪ್ರಿನ್ಸಸ್ ಅಕಾಡೆಮಿ ಯಲ್ಲಿ ಭಾನುವಾರ ಏರ್ಪಡಿಸಲು ಉದ್ದೇಶಿಸಿದ್ದ `ಲಾ ಟೊಮಾಟಿನಾ ಫೆಸ್ಟಿ ವಲ್~  ಕಾರ್ಯಕ್ರಮಕ್ಕೂ ಅನು ಮತಿ ನಿರಾಕರಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನುಮತಿ ನಿರಾಕರಿಸಿರುವ ಹಿನ್ನೆಲೆ ಯಲ್ಲಿ ಈ ಕಾರ್ಯಕ್ರಮದಲ್ಲಿ ಸಾರ್ವ ಜನಿಕರು ಪಾಲ್ಗೊಳ್ಳಬಾರದು ಎಂದು ಮಿರ್ಜಿ ಮನವಿ ಮಾಡಿದ್ದಾರೆ. ಲಾ ಟೊಮಾಟಿನಾ ಉತ್ಸವದ ವಿರುದ್ಧ ಪಾಪ್ಯುಲರ್ ಸಿಟಿಜನ್ಸ್ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿ, ಇಂತಹ ಕಾರ್ಯಕ್ರಮಕ್ಕೆ ಅನುಮತಿ ನೀಡ ಬಾರದು ಎಂದು ನಗರ ಪೊಲೀಸರಿಗೆ ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT