ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ ಕೆ.ಜಿ ರೂ. 40

Last Updated 24 ಡಿಸೆಂಬರ್ 2010, 6:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕರ್ನಾಟಕದ ಪ್ರಮುಖ ಈರುಳ್ಳಿ ಮಾರುಕಟ್ಟೆಯಾದ ಹುಬ್ಬಳ್ಳಿಯಲ್ಲಿ ರೈತ ದಿನಾಚರಣೆ ದಿನವಾದ ಗುರುವಾರ ಬೆಲೆ ಮತ್ತಷ್ಟು ಕುಸಿದರೆ ಪ್ರಮುಖ ಟೊಮೆಟೊ ಮಾರುಕಟ್ಟೆಯಾದ ಕೋಲಾರದಲ್ಲಿ  ಬೆಲೆ ದಿಢೀರ್ ಏರಿದೆ.

ಬುಧವಾರ ಉತ್ತಮ ಗುಣಮಟ್ಟದ ಈರುಳ್ಳಿ ಕ್ವಿಂಟಲ್‌ಗೆ ಗರಿಷ್ಠ ರೂ 5000ಕ್ಕೆ ಮಾರಾಟವಾದರೆ, ಗುರುವಾರ ಈ ಬೆಲೆ ರೂ 3,800ಕ್ಕೆ ಕುಸಿಯಿತು. ಬೆಲೆ ಮತ್ತಷ್ಟು ಕುಸಿಯುವುದರೊಂದಿಗೆ ರೈತರು ನಿರಾಸೆಗೊಂಡರು. ನಗರದ ಚಿಲ್ಲರೆ ಮಾರುಕಟ್ಟೆಯಲ್ಲಿ ಕೂಡ ಈರುಳ್ಳಿ ಕಡಿಮೆ ಬೆಲೆಗೆ ಮಾರಾಟವಾಯಿತು. ಬುಧವಾರ ಕೆ.ಜಿ.ಗೆ ರೂ. 40-50 ಇದ್ದ ಈರುಳ್ಳಿ ಬೆಲೆ ಗುರುವಾರ ರೂ. 30-40ಕ್ಕೆ ಇಳಿಯಿತು. ದಾವಣಗೆರೆಯಲ್ಲಿ ಕೂಡ ಈರುಳ್ಳಿ ಬೆಲೆ ಇಳಿಮುಖವಾಗಿದ್ದು,  ಗರಿಷ್ಠ ರೂ 3,500 ಇದ್ದ ಬೆಲೆ ರೂ 3,000ಕ್ಕೆ ಇಳಿದಿದೆ. ಈರುಳ್ಳಿ ಬೆಲೆ ಗುರುವಾರ ಕ್ವಿಂಟಲ್‌ಗೆ ಕನಿಷ್ಠ ರೂ 850 ಹಾಗೂ ಗರಿಷ್ಠ ರೂ 3,000 ಇತ್ತು. ಸರಾಸರಿ ಬೆಲೆ 1,500 ಇತ್ತು. ಇಲ್ಲಿ ಮಾರುಕಟ್ಟೆಗೆ 700 ಕ್ವಿಂಟಲ್ ಈರುಳ್ಳಿ ಬಂದಿದೆ. ಶುಕ್ರವಾರ ಬೆಲೆ ಏರಬಹುದೇ ಎಂಬ ಲೆಕ್ಕಾಚಾರದಲ್ಲಿ ರೈತರು ತೊಡಗಿದ್ದಾರೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಆರ್.ಎಂ. ಪಾಟೀಲ್ ತಿಳಿಸಿದರು.

ಏರಿದ ಟೊಮೆಟೊ ಬೆಲೆ: ಕೋಲಾರ ಜಿಲ್ಲೆಯಲ್ಲಿ ಬೆಳೆಗಾರರಿಗೆ ಬಂಪರ್ ಬೆಲೆ ದೊರಕುತ್ತಿದೆ. 20 ದಿನಗಳಿಂದ 15 ಕೆ.ಜಿ ಬಾಕ್ಸ್‌ಗೆ 200ರಿಂದ 300 ರೂಪಾಯಿ ನಡುವೆ ಬೆಲೆ ಕುದುರುತ್ತಿತ್ತು. ಆದರೆ ಗುರುವಾರ ಏಕಾಏಕಿ ಅದು 400ಕ್ಕೆ ಏರಿದೆ. ಅದರಂತೆ ಕೆ.ಜಿ ಟೊಮೆಟೊ ಸಗಟು ಬೆಲೆ ಸರಾಸರಿ ರೂ 26.50 ಇದೆ.

ಸಾಮಾನ್ಯ ಗ್ರಾಹಕರಿಗೆ ಮಾತ್ರ ಈ ಬೆಲೆ ಏರಿಕೆ ಚಿಂತೆ ಮೂಡಿಸಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ಟೊಮೆಟೊ ರೂ 40 ಇತ್ತು. ಸಾಧಾರಣ ಗುಣಮಟ್ಟದ ಟೊಮೆಟೊ ರೂ 30ರಿಂದ 35 ಇದೆ. ಮಾರುಕಟ್ಟೆಗೆ ಬಂದ ಬಹಳ ಮಂದಿ ಟೊಮೆಟೊ ಬೆಲೆ ಕೇಳಿ ವಾಪಸಾಗುತ್ತಿದ್ದ ದೃಶ್ಯ ಕಂಡು ಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT