ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ ಬೆಲೆ ಪಾತಾಳಕ್ಕೆ!

Last Updated 7 ಜನವರಿ 2012, 9:50 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಟೊಮೆಟೊ ಬೆಲೆ ಪಾತಾಳ ಕಂಡಿದೆ! ಈ ಬೆಳೆ ಬೆಳೆದ ರೈತ ಬರಗಾಲದಲ್ಲಿ ಆಸರೆಯಾಗುವುದೆಂದು ನಂಬಿದ ರೈತ ಕಂಗಾಲಾಗಿದ್ದಾನೆ.

ಒಂದು ಕೆಜಿ ಟೊಮೆಟೊವನ್ನು 75ಪೈಸೆಗೆ 1ರೂಪಾಯಿವರೆಗೆ ಮಾತ್ರ ಬರುತ್ತದೆ. ತಾಲ್ಲೂಕಿನ ಕಡಗಂದೊಡ್ಡಿ, ಸಿದ್ಧರಾಮಪುರ, ರಾಳದೊಡ್ಡಿ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳಲ್ಲಿನ  ರೈತರು ತೋಟಗಾರಿಕೆ ಬೆಳೆಯಾದ ಟೊಮಾಟೊ ಬೆಳೆ ಹೆಚ್ಚಿನ ಪ್ರಮಾಣದಲ್ಲಿ  ಬೆಳೆಯುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಟೊಮೆಟೊ ಇಳುವರಿ ಹೆಚ್ಚಿನ ಪ್ರಮಾಣದಲ್ಲಿ ಬಂದಿದೆ. ಅಲ್ಲದೇ ಟೊಮೆಟೊ ಗುಣಮಟ್ಟವೂ ಉತ್ತಮವಾಗಿದೆ. ಆದರೆ, ಅದೇ ಟಮಾಟೊಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ಸಂದರ್ಭದಲ್ಲಿ 5ರಿಂದ 10 ರೂಪಾಯಿಗಳವರೆಗೆ ಲಾಭವನ್ನು ವರ್ತಕರು ಪಡೆಯುತ್ತಾರೆ ಎಂದು ರೈತರು ತಿಳಿಸುತ್ತಾರೆ.

ಪ್ರತಿ ಎಕರೆಗೆ 20ರಿಂದ 25 ಸಾವಿರ ರೂಪಾಯಿಗಳಷ್ಟು ಹಣ ಖರ್ಚು ಮಾಡಿ ಟೊಮೆಟೊ ಬೆಳೆದ ರೈತರಿಗೆ ಮಾತ್ರ ಯಾವುದೇ ರೀತಿಯಲ್ಲಿ ಲಾಭವಾಗುತ್ತಿಲ್ಲ. ಮಧ್ಯವರ್ತಿಗಳಿಗೆ ಹಾಗೂ ವರ್ತಕರಿಗೆ ಮಾತ್ರ ಲಾಭಾಂಶ ದೊರಕುತ್ತದೆ.

ಈ ವರ್ಷ ರೈತರು ಬೆಳೆದಿರುವ ಟೊಮೆಟೊ ಉತ್ತಮ ಗುಣಮಟ್ಟವನ್ನು ಹೊಂದಿದ್ದು, ಸುಮಾರು 15ದಿನಗಳವರೆಗೂ ಕೆಡುವುದಿಲ್ಲ. ಈ ಟೊಮೆಟೊವನ್ನು ಬೇರೆ ರಾಜ್ಯಗಳಿಗೆ ರಪ್ತು ಮಾಡುವುದರ ಮೂಲಕ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರ ಮುಂದಾಗಬೇಕು ಎಂಬುದು ರೈತರ ಒತ್ತಾಯವಾಗಿದೆ.
 
ಈ ವರ್ಷ ನಾದಾರಿ ಕಂಪನಿಯ ಟೊಮೆಟೊ ಬೀಜವು ಉತ್ತಮ ಇಳುವರಿ ಬಂದಿವೆ. ಆದರೆ,  ಸೂಕ್ತ ಬೆಲೆ ದೊರಕಿಸಿಕೊಡಬೇಕು. ಗುಣಮಮಟ್ಟದ ಟಮಾಟೊ ಬೆಳೆಗೆ ಸರ್ಕಾರ ತೋಟಗಾರಿಕೆ ಬೆಂಬಲ ಬೆಲೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT