ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊರಾಂಟೊದಲ್ಲಿ ಭಾರಿ ಮಳೆ: ಕತ್ತಲೆಯಲ್ಲಿ 3 ಲಕ್ಷ ಜನ

Last Updated 9 ಜುಲೈ 2013, 19:59 IST
ಅಕ್ಷರ ಗಾತ್ರ

ಟೊರಾಂಟೊ (ಎಪಿ): ಬಿರುಗಾಳಿಯೊಂದಿಗೆ ಸುರಿದ ಬಿರುಸು ಮಳೆಯಿಂದಾಗಿ ಕೆನಡಾದ ಅತಿದೊಡ್ಡ ನಗರ ಟೊರಾಂಟೊದಲ್ಲಿ ಹಠಾತ್ ಪ್ರವಾಹ ಉಂಟಾಗಿ ಸುಮಾರು ಮೂರು ಲಕ್ಷ ಜನರು ಕತ್ತಲಲ್ಲಿ ದಿನ ದೂಡುವಂತಾಗಿದೆ.

ಪ್ರವಾಹದಿಂದ ಅನೇಕ ರಸ್ತೆಗಳು ಮುಚ್ಚಿ ಹೋಗಿವೆ. ಪ್ರವಾಹದ ನೀರು ರೈಲಿಗೆ ನುಗ್ಗಿ ಒಂದು ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಕೆಲ ಗಂಟೆ ಕಾಲ ಅದರಲ್ಲೇ ಸಿಲುಕಿದ್ದರು.

ಪರಿಸರ ಇಲಾಖೆ  ಹೇಳುವಂತೆ ನಗರದ ಕೆಲವಡೆ 10 ಸೆಂ.ಮೀ.ಗಿಂತ ಅಧಿಕ ಮಳೆಯಾಗಿದೆ.  ಮಳೆಯ ನೀರಿನಲ್ಲಿ ಭಾಗಶಃ ಮುಳುಗಿದ್ದ ಹತ್ತು ಕಾರುಗಳು ಮತ್ತು ಡಬಲ್ ಡೆಕ್ಕರ್ ರೈಲಿನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು  ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ದೋಣಿಗಳನ್ನು ಬಳಸಿ ರಕ್ಷಿಸಿದರು.

`ಒಂದು ಸಾವಿರ ಪ್ರಯಾಣಿಕರಿದ್ದ ರೈಲು ಮಳೆ ನೀರಿನಲ್ಲಿ ಸಿಲುಕಿಕೊಂಡಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು ಎಂದು ಟೊರಂಟೊ ಮೆಟ್ರೊಲಿಂಕ್ಸ್ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT