ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊರೆಸ್‌ಗೆ ಚಿನ್ನದ ಬೂಟ್

Last Updated 2 ಜುಲೈ 2012, 19:30 IST
ಅಕ್ಷರ ಗಾತ್ರ

ಕೀವ್ (ಎಎಫ್‌ಪಿ): ಸ್ಪೇನ್ ಸ್ಟ್ರೈಕರ್ ಫೆರ್ನಾಂಡೊ ಟೊರೆಸ್ ಅವರು ಯೂರೊ-2012ನಲ್ಲಿ `ಗೋಲ್ಡನ್ ಬೂಟ್~ ಗೌರವ ಪಡೆದುಕೊಂಡರು.

ಈ ಟೂರ್ನಿಯಲ್ಲಿ ಟೊರೆಸ್ ಗಳಿಸಿದ್ದು ಮೂರು ಗೋಲು. ಜರ್ಮನಿಯ ಮಾರಿಯೊ ಗೊಮೇಜ್, ರಷ್ಯಾದ ಆ್ಯಲನ್ ಜಾಗೊಯೆವಾ, ಕ್ರೊವೇಷಿಯಾದ ಮಾರಿಯೊ ಮಾಂಜುಕಿಕ್, ಇಟಲಿಯ ಮಾರಿಯೊ ಬಾಲೊಟೆಲ್ಲಿ ಹಾಗೂ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರೂ ಇಷ್ಟೇ ಗೋಲು ಗಳಿಸಿದ್ದಾರೆ.

ಆದರೆ ಕ್ಷೇತ್ರದಲ್ಲಿದ್ದ ಅವಧಿಯ ಲೆಕ್ಕಾಚಾರದಲ್ಲಿ ನಿಕಟ ಪೈಪೋಟಿ ಇದ್ದದ್ದು ಟೊರೆಸ್ ಮತ್ತು ಗೊಮೇಜ್ ನಡುವೆ. ಟೊರೆಸ್ ಆಡಿದ್ದು 189 ನಿಮಿಷ. ಅದೇ ಗೊಮೇಜ್ ಅಂಗಳದಲ್ಲಿದ್ದ ಸಮಯ 280 ನಿಮಿಷ. ಇದೇ ಅಂಶದಲ್ಲಿ ಟೊರೆಸ್‌ಗೆ `ಗೋಲ್ಡನ್ ಬೂಟ್~ ಸಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT