ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕನ್ ಮ್ಯಾನೇಜ್‌ಮೆಂಟ್ ಆರಂಭ

Last Updated 9 ಸೆಪ್ಟೆಂಬರ್ 2011, 10:35 IST
ಅಕ್ಷರ ಗಾತ್ರ

ಶಿವಮೊಗ್ಗ: ರೈಲುನಿಲ್ದಾಣದಲ್ಲಿ ಮುಂಗಡ ಕಾಯ್ದಿರಿಸುವಿಕೆಯ ಒತ್ತಡ ತಡೆಯುವುದಕ್ಕಾಗಿ ನಗರದಲ್ಲಿ ನಾಲ್ಕು ಕಡೆಗಳಲ್ಲಿ ಮುಂಗಡ ಬುಕ್ಕಿಂಗ್ ಕೌಂಟರ್ ತೆರೆಯಲಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಹಿರಿಯ ವಾಣಿಜ್ಯ ಅಧಿಕಾರಿ ಡಾ.ಅನೂಪ್ ದಯಾನಂದ್ ತಿಳಿಸಿದರು.

ನಗರದ ರೈಲುನಿಲ್ದಾಣದಲ್ಲಿ ರೈಲು ಪ್ರಯಾಣದ ಕಾದಿರಿಸುವಿಕೆ ಹಾಗೂ ಟೆಕೆಟ್ ಖರೀದಿಸಲು ಬರುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಗುರುವಾರ ಟೋಕನ್ ಮ್ಯಾನೇಜ್‌ಮೆಂಟ್ ವ್ಯವಸ್ಥೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರದ ಪೊಲೀಸ್‌ಚೌಕಿ, ಕೋಟೆ ಅಂಚೆ ಕಚೇರಿ, ನಂಜಪ್ಪ ಆಸ್ಪತ್ರೆ ಎದುರು ಹಾಗೂ ಹಳೆ ರೈಲುನಿಲ್ದಾಣದ ಎದುರು ಈ ಮುಂಗಡ ಕಾಯ್ದಿರಿಸುವಿಕೆ ಈಗಾಗಲೇ ಜಾರಿಯಲ್ಲಿದೆ ಎಂದರು.

ರೈಲುನಿಲ್ದಾಣದಲ್ಲಿ ಟಿಕೆಟ್ ಪಡೆದುಕೊಳ್ಳಲು ಪ್ರಯಾಣಿಕರು ಪ್ರತಿ ಸಲವೂ ಕ್ಯೂನಲ್ಲಿ ನಿಂತು ವೃಥಾ ಕಾಯುವುದನ್ನು ತಪ್ಪಿಸಲು ಈ ಟೋಕನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದರು.

ಮೈಸೂರು ವಿಭಾಗದ `ಎ~ ಶ್ರೇಣಿ ರೈಲುನಿಲ್ದಾಣಗಳಾದ ಶಿವಮೊಗ್ಗ, ದಾವಣಗೆರೆ ರೈಲುನಿಲ್ದಾಣಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ `ಬಿ~ ಶ್ರೇಣಿ ರೈಲುನಿಲ್ದಾಣಗಳಲ್ಲಿಯೂ ಈ ವ್ಯವಸ್ಥೆ ಅಳವಡಿಸಲು ಚಿಂತನೆ ಇದೆ ಎಂದರು.

ಸಮಾರಂಭದಲ್ಲಿ ನೈರುತ್ಯ ರೈಲ್ವೆ ವಲಯ ಮೈಸೂರು ವಿಭಾಗೀಯ ವ್ಯವಸ್ಥಾಪಕ ಡಿ.ಬಿ. ವರ್ಮಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT