ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಪಿ ಧರಿಸಲು ಮೋದಿ ನಕಾರ

Last Updated 19 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಅಹಮದಾಬಾದ್, (ಪಿಟಿಐ): ಸದ್ಭಾವನಾ ಉಪವಾಸದ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಮುಸ್ಲಿಂ ಧಾರ್ಮಿಕ ಮುಖಂಡರೊಬ್ಬರು ನೀಡಿದ ಟೋಪಿಯನ್ನು (ಸ್ಕಲ್ ಕ್ಯಾಪ್) ಧರಿಸಲು ನಿರಾಕರಿಸಿ ಮುಜುಗರ ಉಂಟು ಮಾಡಿದ ಘಟನೆ ಭಾನುವಾರ ನಡೆದಿದೆ.

ಕಾರ್ಯಕ್ರಮದಲ್ಲಿ ಮೋದಿ ಅವರನ್ನು ಅಭಿನಂದಿಸಲು ತೆರಳಿದ್ದ ದರ್ಗಾವೊಂದರ ಮುಖಂಡ ಸೈಯ್ಯದ್ ಇಮಾಮ್ ಶಾಹಿ ಸೈಯದ್ ಅವರು ಮುಸ್ಲಿಮರು ಧರಿಸುವ ಟೋಪಿಯನ್ನು ನೀಡಿದರು. ಆದರೆ ಟೋಪಿ ಧರಿಸಲು ನಯವಾಗಿ ನಿರಾಕರಿಸಿದ ಮೋದಿ, ಅದರ ಬದಲಾಗಿ ಶಾಲ್ ನೀಡುವಂತೆ ಕೋರಿದರು. ನಂತರ ನೀಡಲಾದ ಶಾಲನ್ನು ಸ್ವೀಕರಿಸಿದರು. `ಟೋಪಿ ಧರಿಸಲು ನಿರಾಕರಿಸುವ ಮೂಲಕ ಅವರು ತನಗಲ್ಲ, ಇಸ್ಲಾಂ ಧರ್ಮಕ್ಕೆ ಅವಮಾನ ಮಾಡಿದ್ದಾರೆ~ಎಂದು ಸೈಯದ್ ಪ್ರತಿಕ್ರಿಯೆ ನೀಡಿದ್ದಾರೆ.

`ಟೋಪಿ ಧರಿಸಲು ಕೋರಿದಾಗ ಅವರು ಸ್ಪಷ್ಟವಾಗಿ ನಿರಾಕರಿಸಿದರು. ಟೋಪಿ ಧರಿಸುವುದರಿಂದ ತಮ್ಮ ವರ್ಚಸ್ಸಿಗೆ ಧಕ್ಕೆಯಾಗಬಹುದು ಎಂದು ಅವರು ಭಾವಿಸಿದಂತಿದೆ~ ಎಂದು ಅವರು ಟೀಕಿಸಿದ್ದಾರೆ. ಇದೊಂದು ಕ್ಷುಲ್ಲಕ ವಿಷಯ ಎಂದು ಬಿಜೆಪಿ ಘಟನೆಗೆ ಪ್ರತಿಕ್ರಿಯಿಸಿದೆ.

ಪಂಡಿತರ ವ್ಯಂಗ್ಯ: ಉಪವಾಸ ಮಾಡಿದ ತಕ್ಷಣ ಎಲ್ಲ ಅಪರಾಧಗಳನ್ನೂ ಮನ್ನಿಸುವುದಾದರೆ ಪಾಕಿಸ್ತಾನದ ಭಯೋತ್ಪಾದಕ ಅಜ್ಮಲ್ ಕಸಾಬ್‌ಗೂ ಈ ನೀತಿಯನ್ನೇ ಅನುಸರಿಸಬಹುದೇನೋ ಎಂದು ಲಖನೌ ಮೂಲದ ಶಿಯಾ ಪಂಡಿತ ಮೌಲಾನಾ ಕಲ್ಬೆ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT