ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಾಯ್ ವರದಿ ಪರಿಶೀಲನೆ: ಸುಪ್ರೀಂಕೋರ್ಟ್ ಸ್ಪಷ್ಟನೆ

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೂರಸಂಪರ್ಕ ಖಾತೆ ಮಾಜಿ ಸಚಿವ ಎ.ರಾಜಾ ಅವಧಿಯಲ್ಲಿ 2ಜಿ ತರಂಗಾಂತರ ಹಂಚಿಕೆಯಲ್ಲಿ ಬೊಕ್ಕಸಕ್ಕೆ ನಷ್ಟವಾಗಿಲ್ಲ ಎಂದಿರುವ ಟ್ರಾಯ್ (ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ) ವರದಿಯನ್ನು ಪರಿಶೀಲಿಸಲು ತಾನು ಇಚ್ಛಿಸಿರುವುದಾಗಿ ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ.
 
ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿಮತ್ತು ಎಚ್.ಎಲ್. ದತ್ತು ಅವರನ್ನೊಳಗೊಂಡ ಪೀಠವು ಸಿಬಿಐಗೆ ಈ ಬಗ್ಗೆ ಪ್ರಶ್ನಿಸಿದಾಗ, ಇದು ಎರಡು ಇಲಾಖೆಗಳ ನಡುವಣ ವ್ಯವಹಾರವಾಗಿದ್ದು ಈ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವುದಾಗಿ ಸಿಬಿಐ ತಿಳಿಸಿದೆ. 
 
ಚಂದ್ರ ಮತ್ತು ಸ್ವಾನ್ ಟೆಲಿಕಾಂನ ನಿರ್ದೇಶಕ ವಿನೋದ್ ಗೋಯೆಂಕಾ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಪೀಠ ಈ ಮಾಹಿತಿ ಬಯಸಿದೆ. ಸಿಬಿಐ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಹರೀನ್ ರಾವಲ್, `ಇದು ಸಾರ್ವಜನಿಕ ದಾಖಲೆಯಲ್ಲ ಮತ್ತು ಇದು ರಹಸ್ಯ ವಿಚಾರ~ ಎಂದು ಹೇಳಿದರು.
 
ಸಾರ್ವಜನಿಕ ಬೊಕ್ಕಸಕ್ಕೆ ಯಾವುದೇ ನಷ್ಟ ಆಗಿಲ್ಲವೆಂದು ಟ್ರಾಯ್ ನಿರ್ಣಯಿಸಿದೆ ಎಂದು ಪತ್ರಿಕೆಗಳಲ್ಲಿ ವರದಿಯಾದ ಬಗ್ಗೆ ಹಿರಿಯ ವಕೀಲ ರಾಂಜೇಠ್ಮಲಾನಿ ಹೇಳಿದ್ದನ್ನು ಪೀಠವು ಸಿಬಿಐಗೆ ತಿಳಿಸಿ ಈ ಬಗ್ಗೆ ವಿಚಾರಿಸಿತು. `ಪತ್ರಿಕೆಗಳೇ ವರದಿಯನ್ನು ಪಡೆಯುವಾಗ ಅದನ್ನು ನಮ್ಮ ಮುಂದಿಡಲು ನಿಮ್ಮ ಆಕ್ಷೇಪವೇನು~ ಎಂದು ಪೀಠ ಕೇಳಿತು.

`ಟ್ರಾಯ್ ಹೇಳಿರುವುದು ಸರಿಯೇ ತಪ್ಪೇ ಎಂಬುದನ್ನು ಅರಿಯಬೇಕಿದೆ. ಅದು ಸಾರ್ವಜನಿಕ ದಾಖಲೆಯಲ್ಲವೇ? ಎಂದು ಪೀಠ ಪ್ರಶ್ನಿಸಿದಾಗ ಹೆಚ್ಚುವರಿ ಸಾಲಿಸಿಟರ್ ಜನರಲ್, `ಅದು ಸಾರ್ವಜನಿಕ ದಾಖಲೆ ಅಲ್ಲ~ ಎಂದು ಉತ್ತರಿಸಿದರು. `ಹಾಗಾದರೆ ಪತ್ರಿಕೆಗಳು ಹೇಗೆ ಟ್ರಾಯ್ ವರದಿ ಪಡೆದವು. ವರದಿ ಬಹಿರಂಗವಾಗಿದ್ದಾಗ ನಮಗೆ ತಿಳಿಸುವುದನ್ನು ತಡೆಯಲು ಸಾಧ್ಯವಿಲ್ಲ~ ಎಂದು ಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT