ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಾಯ್ ಸಹಕಾರ ಕೋರಿದ ಸಿಬಿಐ

Last Updated 20 ಫೆಬ್ರುವರಿ 2011, 17:40 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಸರ್ಕಾರಕ್ಕೆ ಉಂಟಾಗಿರುವ ನಷ್ಟದ ವಿವರಗಳನ್ನು ಸಮರ್ಪಕವಾಗಿ ಲೆಕ್ಕ ಹಾಕಿಕೊಡುವಂತೆ ಸಿಬಿಐ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವನ್ನು (ಟ್ರಾಯ್) ಕೋರಿದೆ.

2001ರಿಂದ 2008ರ ನಡುವಿನ ಅವಧಿಯಲ್ಲಿ ವಿತರಿಸಲಾಗಿರುವ 2ಜಿ ಸ್ಪೆಕ್ಟ್ರಂ ಪರವಾನಗಿಯಿಂದಾಗಿ ಸರ್ಕಾರ ಬೊಕ್ಕಸಕ್ಕೆ ವಾಸ್ತವದಲ್ಲಿ ಆಗಿರುವ ನಷ್ಟವೆಷ್ಟು ಎಂಬುದನ್ನು ವಿವರಿಸುವಂತೆ ಸಿಬಿಐ ಮನವಿ ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐನ ಈ ಮನವಿಯನ್ನು ಟ್ರಾಯ್ ಸ್ವೀಕರಿಸಿದೆ ಮತ್ತು ಇದನ್ನು ತಜ್ಞರ ಸಮಿತಿಗೆ ಒಪ್ಪಿಸಿದೆ ಎಂದು ತಿಳಿದು ಬಂದಿದೆ.

ಟ್ರಾಯ್‌ನ ತಜ್ಞರ ಸಮಿತಿ ಈ ಕುರಿತಂತೆ ಸ್ಪಷ್ಟ ವಿವರಗಳನ್ನು ನೀಡಲಿದೆ. ಇದರಿಂದ ಕೋರ್ಟಿನಲ್ಲಿ ಸಾಕ್ಷಿಗಳನ್ನು ನಿಖರವಾಗಿ ಸಲ್ಲಿಸಲು ತನಗೆ ಅನುಕೂಲವಾಗಲಿದೆ ಎಂದು ಸಿಬಿಐ ಮೂಲಗಳು ತಿಳಿಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಷಯವನ್ನು ಟ್ರಾಯ್ ಕೂಡಾ ದೃಢಪಡಿಸಿದೆ. ಈ ಸಂಬಂಧ ಸಿಬಿಐ  ತನ್ನನ್ನು ಸಂಪರ್ಕಿಸಿರುವುದು ನಿಜವೆಂದು ಅದು ಹೇಳಿರುವುದಾಗಿ ಎಂದು ಮೂಲಗಳು ಸ್ಪಷ್ಟಪಡಿಸಿವೆ. 2008ರಲ್ಲಿ 2ಜಿ ಸ್ಪೆಕ್ಟ್ರಂ ಪರವಾನಗಿ ಹಂಚಿಕೆಯಲ್ಲಿ ಸರ್ಕಾರದ ಬೊಕ್ಕಸಕ್ಕೆ ಉಂಟಾಗಿರುವ ನಷ್ಟ 22,000 ಕೋಟಿ ರೂಪಾಯಿಗಳಿರಬಹುದು ಎಂದು ಸಿಬಿಐ ಈ ಮುನ್ನ ತಿಳಿಸಿತ್ತು. ತದನಂತರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಮೊತ್ತ 50,000 ಕೋಟಿ ರೂಪಾಯಿಗಳಷ್ಟಾಗಬಹುದು ಎಂದು ಅಂದಾಜಿಸಿದ್ದರು. ಇದರಿಂದಾಗಿ ಸಿಬಿಐ ಈ ಕುರಿತಂತೆ ನಿಖರ ವಿವರಗಳನ್ನು ಕಲೆ ಹಾಕುವಲ್ಲಿ ಈಗ ಟ್ರಾಯ್‌ನ ಮೊರೆ ಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT