ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಿಪಲ್ ದಾಖಲೆ: ಮಹಿಳಾ ವಿವಿ ಚಾಂಪಿಯನ್

Last Updated 21 ಅಕ್ಟೋಬರ್ 2012, 12:40 IST
ಅಕ್ಷರ ಗಾತ್ರ

ಬಾಗಲಕೋಟೆ: ಟ್ರಿಪಲ್ ಜಂಪ್, 800 ಮೀಟರ್ ಓಟ ಹಾಗೂ 4,100 ಮೀಟರ್ ರಿಲೇಯಲ್ಲಿ ನೂತನ ಕೂಟ ದಾಖಲೆಗಳನ್ನು ಬರೆದ ವಿಜಾಪುರದ ಮಹಿಳಾ ವಿವಿ ತಂಡ ಒಟ್ಟು 102 ಪಾಯಿಂಟ್ ಗಳಿಸಿ ನಗರದ ಬಿವಿವಿ ಕ್ರೀಡಾಂಗಣದಲ್ಲಿ ಶನಿವಾರ ಮುಕ್ತಾಯಗೊಂಡ ರಾಜ್ಯ ಮಹಿಳಾ ವಿವಿಯ 9ನೇ ಅಂತರ ಕಾಲೇಜು ಅಥ್ಲೆಟಿಕ್ಸ್‌ನಲ್ಲಿ  ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು.

13 ಚಿನ್ನ,  8 ಬೆಳ್ಳಿ ಮತ್ತು 6 ಕಂಚಿನ ಪದಕಗಳು ವಿಜಾಪುರ ವಿವಿ ಅಥ್ಲೀಟ್‌ಗಳ ಪಾಲಾದರೆ 3 ಚಿನ್ನ ಮತ್ತು 4 ಕಂಚಿನ ಪದಕ ಗಳಿಸಿದ ಬಾಗಲಕೋಟೆಯ ಅಕ್ಕಮಹಾದೇವಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ರನ್ನರ್ ಅಪ್ ಆಯಿತು.

1 ಚಿನ್ನ, 2 ಬೆಳ್ಳಿ ಮತ್ತು 3 ಕಂಚಿನ ಪದಕ ಗಳಿಸುವ ಮೂಲಕ ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠದ ಎಸ್.ಎಂ.ಜೆ.ಕೆ.ಎಸ್ ಮಹಿಳಾ ಕಾಲೇಜು ತೃತೀಯ ಸ್ಥಾನ ಪಡೆದುಕೊಂಡಿತು.

ನೂತನ ದಾಖಲೆ: ವಿಜಾಪುರ ಮಹಿಳಾ ವಿವಿಯ ತಿಶೋನಿ ವೈ. ಎನ್. 800 ಮೀಟರ್ ಓಟದಲ್ಲಿ (3:31.40 ಸೆಕೆಂಡ್ಸ್) ದಾಖಲೆ (ಹಳೆಯ ದಾಖಲೆ 2.:37.06 ಸೆಕೆಂಡ್ಸ್) ಬರೆದರು. ಟ್ರಿಪಲ್ ಜಂಪ್‌ನಲ್ಲಿ ಹರ್ಷಿತಾ ಎನ್. (10.75 ಮೀಟರ್ಸ್‌) ದಾಖಲೆ (ಹಳೆಯದು 9.77 ಮೀಟರ್ಸ್‌) ಒಡತಿಯಾದರು.

4, 100 ಮೀಟರ್ ರಿಲೇಯಲ್ಲಿ ಮಂಜವ್ವ ದಾಸರ (56.15 ಸೆಕೆಂಡ್ಸ್) (ಹಳೆಯ ದಾಖಲೆ 57.50 ಸೆಕೆಂಡ್ಸ್)  ದಾಖಲೆ ಬರೆದರು.

ಉತ್ತಮ ಅಥ್ಲೀಟ್: ಬಾಗಲಕೋಟೆ ಅಕ್ಕಮಹಾದೇವಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಶಿವಲೀಲಾ ಕರೆಪ್ಪನವರ, ವಿಜಾಪುರ ಮಹಿಳಾ ವಿವಿದ ಮಂಜವ್ವ ದಾಸರ, ತಿಶೋನಿ ವೈ.ಎನ್. ಮತ್ತು ಕೆ.ಪಿ.ಸೌಮ್ಯೋ ಉತ್ತಮ ಅಥ್ಲೀಟ್ ಹೆಗ್ಗಳಿಕೆಗೆ ಪಾತ್ರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT