ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರ್ಯಾಕ್ಟರ್‌ ದರ್ಬಾರ್‌: ಸಂಚಾರಕ್ಕೆ ಸಂಚಕಾರ

Last Updated 4 ಡಿಸೆಂಬರ್ 2013, 8:57 IST
ಅಕ್ಷರ ಗಾತ್ರ

ಮುಧೋಳ: ಮುಧೋಳ ತಾಲ್ಲೂಕಿನಲ್ಲಿ ಕಬ್ಬಿಣ ಟ್ರ್ಯಾಕ್ಟರ್‌ಗಳು ಮೀತಿಮಿರಿ ಸಂಚರಿಸುತ್ತಿರುವುದರಿಂದ ಅಪಾಯ ಎದುರಾಗಿದೆ.

ಜಮಖಂಡಿ ಹಾಗೂ ತಾಲ್ಲೂಕಿನಲ್ಲಿ 2 ಸೇರಿದಂತೆ ಜಮಖಂಡಿ ಕಂದಾಯ ಹಾಗೂ ಪೊಲೀಸ್ ಉಪವಿಭಾಗದಲ್ಲಿ ಒಟ್ಟು 8 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಕಾರ್ಖಾನೆ ಗಳಿಗೆ ಶೇ. 90ರಷ್ಟು ಕಬ್ಬು ಟ್ರ್ಯಾಕ್ಟರ್ ಮೂಲಕ ಬರುತ್ತದೆ. ಒಂದು ಟ್ರ್ಯಾಕ್ಟರ್ ಎರಡು ಟ್ರೈಲರ್‌ಗಳೊಂದಿಗೆ ಕಬ್ಬು ತರುತ್ತದೆ. ಪ್ರತಿ ಸಾರಿಗೆಯಲ್ಲಿ ಕನಿಷ್ಠ 15 ಟನ್ನಿಂದ 25 ಟನ್ ವರೆಗೆ ಕಬ್ಬನ್ನು ಸಾಗಿಸುತ್ತಾರೆ. ಸಾವಿರಾರು ಟ್ರ್ಯಾಕ್ಟರ್‌ ಗಳು ಈ ಸಾಗಾಣಿಕೆ ಮಾಡುತ್ತವೆ.

ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮ ಆರಂಭವಾದರೆ ವಾಹನಗಳ ದಟ್ಟಣೆ ಅಧಿಕವಾಗುತ್ತದೆ. ನಿತ್ಯ ಹಲ ವಾರು ಸ್ಥಳಗಳಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆ. ಸಂಜೆಯಾಗುತ್ತಲೇ ಮುಖ್ಯ ರಸ್ತೆಯ ದಾಬಾ ಹೋಟೆಲ್‌ಗಳ ಮುಂದೆ ಖಾಲಿ ಹಾಗೂ ಕಬ್ಬು ತುಂಬಿದ  ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ಚಾಲಕರು ಊಟಕ್ಕೆ ಹೋಗುತ್ತಾರೆ. ಮುಖ್ಯ ರಸ್ತೆಯಲ್ಲಿ ಪಂಚರ್ ಆಗಿರುವ, ಹಾಗೂ ರಿಪೇರಿಗಿರುವ ಟ್ರ್ಯಾಕ್ಟರ್ ಗಳು ನಿಂತಿರುತ್ತವೆ. ಭಾಗಶಃ ಟ್ರ್ಯಾಕ್ಟರ್ ಹಾಗೂ ಟ್ರೈಲರ್‌ಗಳಿಗೆ ನಿಲುಗಡೆ ದೀಪ ಇಲ್ಲ ಹಾಗೂ ರೇಡಿಯಂ ಸ್ಟಿಕ್ಕರ್‌ಗಳನ್ನು ಹಚ್ಚಿರುವುದಿಲ್ಲ.  ಕತ್ತಲಲ್ಲಿ ನಿಂತಿರುವ ಈ ವಾಹನಗಳಿಗೆ ಡಿಕ್ಕಿಹೊಡೆದು ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ.

ವಾಹನ ಚಾಲಕರಿಗೆ ಎದುರಿನಿಂದ ಬರುವ ವಾಹಗಳ ಪ್ರಖರ ಬೆಳಕಿನಲ್ಲಿ ನಿಂತಿರುವ ವಾಹನಗಳು ಗೋಚರಿಸುವು ದಿಲ್ಲ. ಹಾಗೂ ಈ ವಾಹನಗಳಿಗೆ ನಿಲು ಗಡೆ ದೀಪ ಹಾಗೂ ರೇಡಿಯಂ ಸ್ಟಿಕ್ಕರ್ ಇರದೇ ಇರುವುದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ. ಪ್ರತಿ ವರ್ಷ ಕಬ್ಬಿನ ಹಂಗಾಮಿನಲ್ಲಿ ಈ ರೀತಿಯ ಅಪಘಾತಗಳು ಸಾಮಾನ್ಯ. ಈ ರೀತಿ ಅಪಘಾತಗಳಿಂದ ಹಲವಾರು ಜನರು ಮರಣಹೊಂದಿದ್ದಾರೆ. ಹಲ ವಾರು ಜನರು ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಇದಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಪೊಲೀಸ್, ಕಂದಾಯ ಹಾಗೂ ಸಾರಿಗೆ ಅಧಿ ಕಾರಿಗಳು ಮುಂದಾಗಬೇಕು ಎಂದು ಬಿಜೆಪಿ ಮುಧೋಳ ಮಂಡಲ ಪ್ರಧಾನ ಕಾರ್ಯದರ್ಶಿ ವಕೀಲ ಡಿ.ಎಚ್. ಶಿರೋಳ ಆಗ್ರಹಿಸಿದ್ದಾರೆ.

ಕಾರ್ಖಾನೆಗಳು ರೇಡಿಯಂ ಸ್ಟಿಕರ್ ಅಳವಡಿಕೆಗೆ ಮುಂದಾಗದಿದ್ದರೆ. ಪೊಲೀಸ್ ಇಲಾಖೆ ಎನ್‌ಜಿಒ ಅಥವಾ ಸಾರ್ವಜನಿಕ ಸೇವಾ ಸಂಸ್ಥೆಗಳಿಂದ ಈ ಕಾರ್ಯ ಮಾಡಿಸಲು ಮುಂದಾಗ ಬೇಕು. ಈ ಕುರಿತು ಸಕ್ಕರೆ ಕಾರ್ಖಾನೆ ಗಳು, ಪೊಲೀಸ್, ಕಂದಾಯ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಲು ಪುರಸಭೆ ಮಾಜಿ ಸದಸ್ಯ ರಾಜೇಂದ್ರ ಟಂಕಸಾಲಿ ಆಗ್ರಹಿಸುತ್ತಾರೆ.

ಅಸಹನೀಯ ಶಬ್ದ ಮಾಲಿನ್ಯ: ದಿನದ 24 ಗಂಟೆ ಸಾವಿರಾರು ಟ್ರ್ಯಾಕ್ಟರ್ ಕಬ್ಬು ಸಾಗಾಣಿಕೆ ಮಾಡುತ್ತವೆ. ಎಲ್ಲ ಟ್ಯಾಕ್ಟರ್‌ಗಳಲ್ಲಿ ಏನಿರದಿದ್ದರೂ ಖಂಡಿತ ವಾಗಿ ಟೇಪ್ (ಸೌಂಡ್ ಸಿಸ್ಟಮ್) ಇದ್ದೇ ಇರುತ್ತದೆ. ಒಂದು ಕಿ.ಮಿ ಅಂತರದಲ್ಲಿ ಕೇಳುವಂತೆ ಹೆಚ್ಚಿನ ಸೌಂಡ್ ಹಚ್ಚಿ ಎಲ್ಲ ಟ್ರ್ಯಾಕ್ಟರ್ ಸಾಗು ತ್ತವೆ. ಶಾಲೆ, ಕಾಲೇಜ್, ಆಸ್ಪತ್ರೆ, ಪಟ್ಟಣ ಬಂದಾಗಲೂ ಈ ಸೌಂಡ್‌ ಕಡಿಮೆಯಾಗುವುದಿಲ್ಲ. ರಾತ್ರಿ 11 ರಿಂದ ಬೆಳಗಿನ 6 ಅವಧಿಯ ಪ್ರಶಾಂತವಾದ ವಾತಾವರಣ ದಲ್ಲಿ ಈ ಧ್ವನಿ ಇನ್ನೂ ಹೆಚ್ಚಿಗೆ ಕೇಳುತ್ತದೆ.

ಮುಖ್ಯರಸ್ತೆಯ ಹತ್ತಿರ ಇರುವ ಮನೆ ಗಳ ಕುಟುಂಬದವರ ಪಾಡು ಹೇಳ ತೀರದು. ಶಬ್ದ ಮಾಲಿನ್ಯ ದಿಂದ ಮಲ ಗಿದ ಮಕ್ಕಳು ಬೆಚ್ಚಿ ಬೀಳುತ್ತವೆ. ವೃದ್ಧರು, ರೋಗಿಗಳು, ಹಾಗೂ ವಿದ್ಯಾ ರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದ್ದು ಈ ಕುರಿತು ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುವುದರ ಮೂಲಕ ಶಬ್ದ ಮಾಲಿನ್ಯ ತಪ್ಪಿಸಬೇಕು. ಈ ಎರಡು ಸಮಸ್ಯೆಗಳನ್ನು ಅಧಿಕಾರಿಗಳು ಬಗೆಹರಿಸ ಬಹುದು. ಅಧಿಕಾರಿಗಳು ತಮ್ಮ ಇಚ್ಛಾ ಶಕ್ತಿ ಪ್ರದರ್ಶಿಸಿ ಸಮಸ್ಯೆ ನೀಗಿಸಬೇಕು ಎಂದು ಬಿಜೆಪಿ ಮುಖಂಡ ಪುರ ಸಭೆ ಮಾಜಿ ಸದಸ್ಯ ರಾಜೇಂದ್ರ ಟಂಕಸಾಲಿ ಆಗ್ರಹಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT