ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್ನಲ್ಲಿ ಫೋಟೊ ಪ್ರಕಟಿಸಿದ ಯುವಿ

Last Updated 10 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವ ಯುವರಾಜ್ ಸಿಂಗ್ `ಟ್ವಿಟರ್~ನಲ್ಲಿ ತಮ್ಮ ಫೋಟೋ ಪ್ರಕಟಿಸಿದ್ದಾರೆ. ಅವರು ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದು, ತಲೆಕೂದಲನ್ನು ಪೂರ್ಣವಾಗಿ ತೆಗೆಸಿದ್ದಾರೆ. ಕಿಮೋಥೆರಪಿ ಚಿಕಿತ್ಸೆಯ ಪ್ರಭಾವ ಇದು ಎಂದಿದ್ದಾರೆ.

ಯುವರಾಜ್ ಎರಡು ದಿನಗಳ ಹಿಂದೆ ಕೂಡಾ `ಟ್ವಿಟರ್~ನಲ್ಲಿ ತಮ್ಮ ಅಭಿಪ್ರಾಯಗಳನ್ನು ಬರೆದಿದ್ದರು. ಈ ಬಾರಿ ಫೋಟೋ ಕೂಡಾ ಪ್ರಕಟಿಸಿದ್ದು, ತಾವು ಮಾನಸಿಕವಾಗಿ ಕುಗ್ಗಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
`ಕೊನೆಗೂ ತಲೆಕೂದಲು ಉದುರಿವೆ~ ಎಂದು ಬರೆದಿರುವ ಅವರು ಫೋಟೊ ಇರುವ ಪುಟ ತೆರೆಯಲು `ಲಿಂಕ್~ನ್ನು ಕೂಡಾ ನೀಡಿರುವರು.

ಈ ಎಡಗೈ ಬ್ಯಾಟ್ಸ್‌ಮನ್ ಅಮೆರಿಕದ ಬಾಸ್ಟನ್‌ನ ಕ್ಯಾನ್ಸರ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿಮೋಥೆರಪಿ ಚಿಕಿತ್ಸೆಯ ಪರಿಣಾಮ ತಲೆಕೂದಲು ಉದುರುವುದು ಸಹಜ. ಈ ಕಾರಣ ತಲೆಯನ್ನು ಬೋಳು ಮಾಡಿಸಿದ್ದಾರೆ. ಯುವರಾಜ್ ಸಾಕಷ್ಟು ಬಳಲಿರುವುದು ಕೂಡಾ ಫೋಟೋದಲ್ಲಿ ಕಂಡುಬರುತ್ತದೆ.

`ಜಿಮ್‌ನಲ್ಲಿ 20 ನಿಮಿಷಗಳನ್ನು ಕಳೆದೆ. ಇದು ಹೊಸ ಅನುಭವ ನೀಡಿತು~ ಎಂದು ಕೂಡಾ ತಿಳಿಸಿದ್ದಾರೆ. `ಇಡೀ ದೇಶದ ಜನರ ಪ್ರಾರ್ಥನೆಯ ಬಲ ನನ್ನ ಜೊತೆಗಿದೆ. ಈ ಕಾರಣ ಇನ್ನಷ್ಟು ಬಲಿಷ್ಠನಾಗಿ ಮರಳುವೆ. ನನಗೆ ಬೆಂಬಲ ನೀಡಿದ್ದಕ್ಕೆ ಮತ್ತು ನನ್ನ ಖಾಸಗಿ ಜೀವನ ಗೌರವಿಸಿದ್ದಕ್ಕೆ ಮಾಧ್ಯಮಗಳಿಗೆ ಕೃತಜ್ಞತೆಗಳು~ ಎಂದು ಬರೆದಿದ್ದಾರೆ.

ಯುವರಾಜ್ ಸಿಂಗ್ ಕಠಿಣ ಪರಿಸ್ಥಿತಿ ಎದುರಿಸುತ್ತಿರುವ ಕಾರಣ ಅವರ ಖಾಸಗಿ ಜೀವನವನ್ನು ಗೌರವಿಸುವಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮಾಧ್ಯಮಗಳಲ್ಲಿ ಕೇಳಿಕೊಂಡಿತ್ತು.
`ಭಾರತ ತಂಡದ ಪೋಷಾಕು ತೊಟ್ಟು ಮತ್ತೆ ದೇಶವನ್ನು ಪ್ರತಿನಿಧಿಸುವುದನ್ನು ಎದುರು ನೋಡುತ್ತಿದ್ದೇನೆ~ ಎಂದು ಯುವರಾಜ್ ಈ ಹಿಂದೆ ಬರೆದಿದ್ದರು. `ನಾನು ಅಮೆರಿಕದಲ್ಲಿ ಚಿಕಿತ್ಸೆ ಪಡೆಯಲು ಆರಂಭಿಸಿದ ಬಳಿಕ ಯಾವುದೇ ಪತ್ರಿಕೆಗೂ ಸಂದರ್ಶನ ನೀಡಿಲ್ಲ~ ಎಂಬುದನ್ನು ಕೂಡಾ ಅವರು ಸ್ಪಷ್ಟಪಡಿಸಿದ್ದಾರೆ.

ಭಾರತ ತಂಡ ವಿಶ್ವಕಪ್ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಯುವರಾಜ್ ಅತಿ ವಿರಳವಾದ `ಜರ್ಮ್ ಸೆಲ್~ ಕ್ಯಾನ್ಸರ್‌ನಿಂದ ಬಳಲುತ್ತಿರುವರು. ಅವರ ಎಡ ಮತ್ತು ಬಲ ಶ್ವಾಸಕೋಶದ ನಡುವಿನ ಭಾಗದಲ್ಲಿ ಕ್ಯಾನ್ಸರ್ ಗೆಡ್ಡೆ ಕಾಣಿಸಿಕೊಂಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT