ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೀಟುಲೋಕ ಸ್ನೇಹಲೋಕ

Last Updated 6 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಬಿ-ಟೌನ್‌ನಲ್ಲಿ `ಫ್ರೆಂಡ್‌ಶಿಪ್ ಡೇ~ ದಿನದ ಗುಂಗು ಜೋರಾಗಿಯೇ ಇತ್ತು. ಬಾಲಿವುಡ್‌ನ ಖ್ಯಾತನಾಮರೆಲ್ಲರೂ ಸ್ನೇಹಿತರ ದಿನ ನೆಚ್ಚಿನ ಗೆಳೆಯ, ಗೆಳತಿಯರು ಹಾಗೂ ಅಭಿಮಾನಿಗಳ ಜೊತೆ ಟ್ವೀಟ್ ಮಾಡಿ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.
ಅಂದಹಾಗೆ, ಬಿಪಾಶಾ ಬಸು ಸ್ನೇಹದ ಬಗ್ಗೆ ತುಂಬಾ ಭಾವುಕರಾಗಿ ಮಾತನಾಡಿದ್ದಾರೆ.
 
`ನನ್ನ ಪ್ರಕಾರ ಸ್ನೇಹದ ಬಾಂಧವ್ಯ ಎಲ್ಲಕ್ಕಿಂತ ಮಿಗಿಲು. ಪ್ರತಿಯೊಬ್ಬರಿಗೂ ಗೆಳೆಯರು ಬೇಕೇಬೇಕು. ಸ್ನೇಹ ಎಲ್ಲರಿಗೂ ಅನಿವಾರ್ಯ. ನಾನು ನನ್ನೆಲ್ಲಾ ಸ್ನೇಹಿತರನ್ನು ತುಂಬಾ ಪ್ರೀತಿಸುತ್ತೇನೆ~ ಅಂತ ಸ್ನೇಹಕ್ಕೆ ತಮ್ಮದೇ ವ್ಯಾಖ್ಯಾನ ನೀಡಿದ್ದಾರೆ.

ಇನ್ನು, `ಎಲ್ಲರಿಗೂ ಸ್ನೇಹಿತರ ದಿನದ ಶುಭಾಶಯಗಳು. ಒಳ್ಳೆಯ ಸ್ನೇಹಿತರನ್ನು ಅವರ ಗೆಳೆತನವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜೀವನದ ಫುಲ್‌ಟೈಮ್ ಜಾಬ್. ಆದರೆ ಎಲ್ಲರೂ ಈ ವಿಷಯದಲ್ಲಿ ಸಮರ್ಥರಿರುವುದಿಲ್ಲ~ ಎಂದು ಟ್ವೀಟ್ ಮಾಡಿದ್ದಾರೆ ಕರಣ್ ಜೋಹರ್.

ಫರ‌್ಹಾ ಖಾನ್ ಗೆಳೆಯರ ದಿನದ ಶುಭಾಶಯ ತಿಳಿಸುತ್ತಾ, `ನನ್ನೆಲ್ಲಾ ಟ್ವೀಟ್ ಸಂಗಡಿಗರಿಗೆ ವಿಶೇಷ ಧನ್ಯವಾದ. ಈ ಭಾನುವಾರ ನಿಮ್ಮೆಲ್ಲರಿಗೂ ಶುಭ ತರಲಿ. ಸ್ನೇಹಿತರೊಂದಿಗೆ ಕಾಲ ಕಳೆಯಿರಿ. ನಾನು ನನ್ನ ಮಕ್ಕಳೊಂದಿಗೆ ಈ ದಿನ ಕಳೆಯುತ್ತೇನೆ~ ಅಂತ ಟ್ವೀಟ್ ಮಾಡಿದ್ದಾರೆ.

`ನನ್ನ ನೆಚ್ಚಿನ ಟ್ವಿಟರ್ ಗೆಳೆಯರೇ, ನಿಮಗೆಲ್ಲರಿಗೂ ಫ್ರೆಂಡ್‌ಶಿಪ್ ಡೇ ಶುಭಾಶಯ. ದೇವರು ನನಗಾಗಿ ನೀಡಿದ ವಿಶೇಷ ಗೆಳೆಯರು ನೀವು~ ಅಂತ ಸ್ನೇಹಕ್ಕೆ ತಮ್ಮ ರುಜು ಹಾಕಿದ್ದಾರೆ ಅರ್ಜುನ್ ರಾಮ್‌ಪಾಲ್. 

`ಹ್ಯಾಪಿ ಫ್ರೆಂಡ್‌ಶಿಪ್ ಡೇ ಯಾರ್ಸ್‌, ದೋಸ್ತ್, ಸಹೇಲಿಸ್, ಪಾಲ್ ಅಂಡ್ ಅಮಿಗೋಸ್~ ಅಂತ ಅವರಿಗಿಷ್ಟವಾದ ಎಲ್ಲ ಭಾಷೆಯಲ್ಲೂ ಶುಭಾಶಯ ಕೋರಿದ್ದಾರೆ ಫರ‌್ಹಾನ್ ಅಖ್ತರ್. ಇನ್ನುಳಿದಂತೆ, ಶ್ರೇಯಾ ಘೋಷಾಲ್, ನೇಹಾ ದುಪಿಯಾ ಮತ್ತು ತುಷಾರ್ ಕಪೂರ್ ಸ್ನೇಹಿತರ ದಿನದ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT