ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠರಾವು ವಿರೋಧಿಸಿದವರೇ ಇಲ್ಲಿ ಸೂಚಕರು...!

Last Updated 1 ಅಕ್ಟೋಬರ್ 2011, 9:20 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾ ರಂಗಮಂದಿರ ನಿರ್ಮಾಣಕ್ಕೆ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಜಾಗೆ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ನಗರಸಭೆ ಸದಸ್ಯನನ್ನೇ ಜಾಗೆ ನೀಡುವ ಠರಾವಿಗೆ ನಗರಸಭೆ ಸೂಚಕರನ್ನಾಗಿ ಮಾಡಿದ ಅವಾಂತರ ತಡವಾಗಿ ಬೆಳಕಿಗೆ ಬಂದಿದೆ.

ಕಾಂಗ್ರೆಸ್ ಪಕ್ಷದ ಹಾಗೂ ನಗರದ ನಾಗೇಂದ್ರನಮಟ್ಟಿಯ ನಾಲ್ಕನೇ ವಾರ್ಡಿನ ನಗರಸಭೆ ಸದಸ್ಯ ವೆಂಕಟೇಶ ಇಟಗಿ ಎಂಬುವರೇ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾ ರಂಗ ಮಂದಿರಕ್ಕೆ ಜಾಗೆ ನೀಡಲು ವಿರೋಧಿ ಸಿದ ಸದಸ್ಯ. ಆದರೆ, ನಗರಸಭೆ ಮಾತ್ರ ಸದಸ್ಯನ ವಿರೋಧವನ್ನು ಪರಿಗಣಿಸದೇ ಅವರ ಹೆಸರನ್ನೇ ಜಾಗ ನೀಡಲು ಒಪ್ಪಿ ಕೊಂಡಿರುವ ಠರಾವಿಗೆ ಸೂಚಕರನ್ನಾಗಿ ಮಾಡಲಾಗಿದೆ. ಈ ಮೂಲಕ ನಗರಸಭೆ ಠರಾವುಗಳ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ಮೂಡುವಂತಾಗಿದೆ.

2 ತಿಂಗಳ ನಂತರ ಬೆಳಕಿಗೆ: ನಗರಸಭೆ ಜೂನ್ 18 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ರಂಗ ಮಂದಿರ ನಿರ್ಮಾಣಕ್ಕೆ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಒಂದು ಎಕರೆ ಜಾಗೆ ನೀಡುವ ವಿಷಯದ ಚರ್ಚೆ ನಡೆಸಿದ ಸದಸ್ಯರು, ಅದೇ ಸಭೆಯಲ್ಲಿ ರಂಗ ಮಂದಿರಕ್ಕೆ ಜಾಗ ನೀಡಲು ಸದಸ್ಯ ಇಟಗಿ ಅವರ ವಿರೋಧ ಹೊರತುಪಡಿಸಿ ಸರ್ವಾನುಮತದಿಂದ ಠರಾವು ಪಾಸು ಮಾಡಲಾಯಿತು.

ಈ ವಿಷಯದ ಚರ್ಚೆ ನಡೆಸಿದ ಸಂದರ್ಭದಲ್ಲಿಯೇ ನಗರಸಭೆ ಸದಸ್ಯ ವೆಂಕಟೇಶ ಇಟಗಿ ಅವರು, ಹೈಸ್ಕೂಲ್ ಮೈದಾನದಲ್ಲಿ ಜಾಗ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿ, ಮೈದಾನದಲ್ಲಿ ಕಟ್ಟಡ ನಿರ್ಮಾಣಕ್ಕೆ ಜಾಗೆ ನೀಡುವುದರಿಂದ ನಗರದ ಜನರ ಹಾಗೂ ಕ್ರೀಡಾ ಪಟುಗಳಿಗೆ ತೀವ್ರ ತೊಂದರೆಯಾಗಲಿದೆ. ಅದಕ್ಕಾಗಿ ಅಲ್ಲಿ ಜಾಗ ನೀಡಬಾರದು. ತಮ್ಮ ವಿರೋಧದ ನಡುವೆಯೂ ನೀಡಿ ದರೆ, ತಮ್ಮ ವಿರೋಧವನ್ನು ದಾಖಲಿಸಿ ಕೊಳ್ಳಲು ಹೇಳಿದ್ದಾರೆ. ಅವರ ವಿರೋ ಧವು ನಗರಸಭೆಯಲ್ಲಿ ದಾಖಲು ಸಹ ಆಗಿದೆ.

`~ಇಟಗಿಯವರ ವಿರೋಧವನ್ನು ಬರೆದುಕೊಂಡ ಅಧಿಕಾರಿಗಳೇ, ನಂತರ ದಲ್ಲಿ ಠರಾವು ಪ್ರತಿ ತಯಾರಿಸುವಾಗ ವೆಂಕಟೇಶ ಇಟಗಿ ಅವರನ್ನೇ ಸೂಚಕರ ನ್ನಾಗಿ ನಮೂದಿಸಿದ್ದಾರೆ. ಆದರೆ, ಠರಾವು ಆದ ಎರಡು ತಿಂಗಳವರೆಗೆ ಈ ವಿಷಯ ನನಗೆ ಗೊತ್ತಿರಲಿಲ್ಲ. ನಂತರ ಕಟ್ಟಡ ನಿರ್ಮಾಣಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದಾಗ ಠರಾವು ಪ್ರತಿಯ ಸೂಚಕರಲ್ಲಿ ನನ್ನ ಹೆಸರು ಇದ್ದುದು ಗೊತ್ತಾಯಿತು~~ ಎಂದು ನಗರ ಸಭೆ ಸದಸ್ಯ ವೆಂಕಟೇಶ ಇಟಗಿ ತಿಳಿಸುತ್ತಾರೆ.

ಈ ವಿಷಯ ಗೊತ್ತಾಗುತ್ತಿದ್ದಂತೆ ಆಗಸ್ಟ್ 27 ರಂದು ಪೌರಾಯುಕ್ತರಿಗೆ ತಕರಾರು ಅರ್ಜಿ ಸಲ್ಲಿಸಿದ್ದು, ಈಗಲೂ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ  ರಂಗಮಂದಿರ ನಿರ್ಮಾಣಕ್ಕೆ ಈಗಲೂ ತಮ್ಮ ಬಲವಾದ ವಿರೋಧವಿದೆ. ಸೂಚಕರ ಹೆಸರಿನಿಂದ ತಮ್ಮ ಹೆಸರು ತೆಗೆದುಹಾಕಬೇಕು. ತಕ್ಷಣವೇ ವಿವಾದಿತ ಠರಾವು ನಂ. 28(20) ಅನ್ನು ಹಿಂದಕ್ಕೆ ಪಡೆದುಕೊಳ್ಳಬೇಕು. ಇಲ್ಲವಾದರೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ಪೌರಾಯುಕ್ತರನ್ನು ಎಚ್ಚರಿಸಿದ್ದಾರೆ.

ವಿರೋಧ ವ್ಯಕ್ತಪಡಿಸಿದ ಸದಸ್ಯರನ್ನೇ ಸೂಚಕರು, ಅನುಮೋದಕರು ಎಂದು ನಮೂದಿಸಿ ಠರಾವು ಪಾಸು ಮಾಡಿದರೆ, ಸಾರ್ವಜನಿಕರು ನಗರಸಭೆ ಕೈಗೊಳ್ಳುವ ಠರಾವುಗಳ ಮೇಲೆಯೇ ಸಂಶಯಪಡು ವಂತಾಗುತ್ತದೆ. ನಿಜವಾಗಿಯೂ ಯಾರು ಸೂಚಿಸಿರುತ್ತಾರೆ. ಅನುಮೋದಿ ಸುತ್ತಾರೆ ಅವರ ಹೆಸರನ್ನು ಮಾತ್ರ ನಮೂದಿಸಿ ನಗರಸಭೆಯ ಘನತೆ, ಗೌರವ ಎತ್ತಿಹಿಡಿಯಬೇಕೆಂದು ವೆಂಕ ಟೇಶ ಇಟಗಿ ನಗರಸಭೆ ಆಯುಕ್ತರನ್ನು ಒತ್ತಾಯಿಸಿದ್ದಾರೆ.

ಮುನ್ಸಿಪಲ್ ಹೈಸ್ಕೂಲ್ ಮೈದಾನ ದಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡಬಾರದು ಎನ್ನುವ ನ್ಯಾಯಾ ಲಯದ ಆದೇಶವಿದ್ದಾಗಲೂ, ನಗರಸಭೆ ಸಾಮಾನ್ಯ ಸಭೆಯಲ್ಲಿ ಠರಾವು ಮಾಡುವ ಮೂಲಕ ಜಾಗೆ ನೀಡಿರು ವುದರ ವಿರುದ್ಧ ಸಾರ್ವಜನಿಕರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ರಂಗ ಮಂದಿರ ನಿರ್ಮಾಣ ಕಾಮಗಾರಿ ಸದ್ಯ ಸ್ಥಗಿತ ಗೊಳಿಸುವಲ್ಲಿ ಯಶಸ್ವಿ ಆಗಿರುವುದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT