ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಂ ಡಂ ಗುಂಡಿರುವ ಶಸ್ತ್ರಾಸ್ತ್ರ

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನಾಗರಿಕ ಉದ್ದೇಶದ ವಿಮಾನ ಒತ್ತೆ ಯತ್ನ ಅಥವಾ ಅಪಹರಣವನ್ನು ವಿಫಲಗೊಳಿಸುವ ಉದ್ದೇಶದಿಂದ ಅತ್ಯಾಧುನಿಕ `ಡಂ ಡಂ~ ಗುಂಡುಗಳನ್ನು ಹೊಂದಿರುವ ಶಸ್ತ್ರಾಸ್ತ್ರಗಳೊಂದಿಗೆ ಕಮಾಂಡೊಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ.

ಈ ಅತ್ಯಾಧುನಿಕ ಗುಂಡು ವಿಮಾನದಲ್ಲಿನ ದಾಳಿಕೋರನನ್ನು ಮಾತ್ರ ಸುಟ್ಟು ಬಿಡುತ್ತದೆ. ವಿಮಾನದ ಭಾಗ ಅಥವಾ ಪ್ರಯಾಣಿಕರಿಗೆ ಇದರಿಂದ ಯಾವುದೇ ಹಾನಿ ಮಾಡದಿರುವುದು ಇದರ ವಿಶೇಷ.

ಅಂತರರಾಷ್ಟ್ರೀಯ ಕಾನೂನಿನ ಅನ್ವಯ ಬೇರೆ ಉದ್ದೇಶಗಳಿಗಾಗಿ ಈ ಗುಂಡು ಬಳಸುವುದರ ಮೇಲೆ ನಿರ್ಬಂಧ ವಿಧಿಸಲಾಗಿದೆ. ದೇಶದಲ್ಲಿನ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಗೆ ಇರುವ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ), ಕಮಾಂಡೊ ಪಡೆ ಈ ಅತ್ಯಾಧುನಿಕ ಗುಂಡನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳಲು ತೀರ್ಮಾನಿಸಿದೆ. 2008ರಲ್ಲಿ ಮುಂಬೈ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ಬಳಿಕ ಉಗ್ರರ ವಿರುದ್ಧ ಹೋರಾಡಲು ಇಂತಹದ್ದೊಂದು ಅಸ್ತ್ರದ ಅವಶ್ಯಕತೆ ಎದುರಾಗಿತ್ತು.

ಈ ವಿಶೇಷ ಗುಂಡು ನಿರ್ದಿಷ್ಟ ವ್ಯಕ್ತಿಯನ್ನು ನಾಶ ಅಥವಾ ಆತ ಸ್ಥಳದಿಂದ ಕದಲದಂತೆ ಮಾಡಬಲ್ಲದು. ಇವುಗಳನ್ನು ಸದ್ಯದಲ್ಲೇ `ಮಿತ್ರ ರಾಷ್ಟ್ರ~ವೊಂದರಿಂದ ಆಮದು ಮಾಡಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಗುಂಡಿನ ಹಿನ್ನೆಲೆ: ಅತ್ಯಾಧುನಿಕ ಗುಂಡಿನ ಹೆಸರು `ಡಂ ಡಂ~. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ಈ ಗುಂಡನ್ನು ಕೋಲ್ಕತ್ತದ `ಡಂ ಡಂ~ ಸೇನಾ ನೆಲೆಯಲ್ಲಿ ಅಭಿವೃದ್ಧಿಪಡಿಸಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಜಾಗತಿಕ ಯುದ್ಧದ ಸಂದರ್ಭದಲ್ಲಿ ವಿಶೇಷ ಕಮಾಂಡೋಗಳಿಗೆ ಮಾತ್ರ ಇದನ್ನು ನೀಡಲಾಗುತ್ತಿತ್ತು. ಸೇನಾ ಕಾರ್ಯಾಚರಣೆ ವೇಳೆ ನಿರ್ದಿಷ್ಟ ವ್ಯಕ್ತಿಯನ್ನು ಹೊರತುಪಡಿಸಿ ಬೇರೆ ಭಾಗಕ್ಕೆ ಹಾನಿಯುಂಟು ಮಾಡದಿರಲಿ ಎಂಬ ಕಾರಣಕ್ಕಾಗಿ ಇದನ್ನು ಸಿದ್ಧಪಡಿಸಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT