ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಚ್ ಫುಟ್‌ಬಾಲ್ ಸಂಸ್ಥೆಯೊಂದಿಗೆ ಒಪ್ಪಂದ

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದುಳಿದ ಹಾಗೂ ಶೋಷಿತ ಮಕ್ಕಳು ಸಹ ಕ್ರೀಡಾಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ಓಜೋನ್ ಗ್ರೂಪ್ ಫುಟ್‌ಬಾಲ್ ಅಕಾಡೆಮಿಯು ಡಚ್ ಫುಟ್‌ಬಾಲ್ ಸಂಸ್ಥೆಯೊಂದಿಗೆ (ಕೆಎನ್‌ವಿಬಿ) ಒಪ್ಪಂದ ಮಾಡಿಕೊಂಡಿದೆ.

`ಉದ್ಯಾನ ನಗರಿಯಲ್ಲಿ ಫುಟ್‌ಬಾಲ್ ಶಾಲೆ ತೆರೆಯುವ ಉದ್ದೇಶ ಹೊಂದಿರುವ ಓಜೋನ್ ಗ್ರೂಪ್ ಬಡ ಮಕ್ಕಳಿಗೆ ಸೂಕ್ತ ತರಬೇತಿ ನೀಡಲಿದೆ. ಎರಡೂ ಸಂಸ್ಥೆಗಳ ಒಪ್ಪಂದದ ಅನ್ವಯ ಸ್ಥಳೀಯ ಕೋಚ್‌ಗಳಿಗೆ ಅಂತರರಾಷ್ಟ್ರೀಯ ಗುಣಮಟ್ಟದ ವಿಶೇಷ ತರಬೇತಿ ದೊರೆಕಲಿದೆ~ ಎಂದು ಓಜೋನ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ವಾಸುದೇವನ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`7 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಈ ತರಬೇತಿಯ ಅವಕಾಶ ಲಭಿಸಲಿದೆ. 2009ರ ಅಕ್ಟೋಬರ್‌ನಲ್ಲಿ ಆರಂಭವಾದ `ವರ್ಲ್ಡ್ ಕೋಚಸ್~ ಕಾರ್ಯಕ್ರಮದ ಅಡಿ ಕೆಲ ಕೋಚ್‌ಗಳು ತರಬೇತಿ ಪಡೆಯತ್ತಿದ್ದಾರೆ. ಬೆಂಗಳೂರಿನಲ್ಲಿ ಗುರುವಾರದಿಂದ ಸ್ಥಳೀಯ ಫುಟ್‌ಬಾಲ್ ಕೋಚ್‌ಗಳಿಗೂ ನಗರದ ವೈಟ್‌ಫೀಲ್ಡ್‌ನಲ್ಲಿ ತರಬೇತಿ ಆರಂಭಿಸಿದ್ದೇವೆ~ ಎಂದು ಅವರು ವಿವರಿಸಿದರು.

`ಸ್ಥಳೀಯ ಫುಟ್‌ಬಾಲ್ ಕೋಚ್‌ಗಳು ಇಲ್ಲಿ ತರಬೇತಿ ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣರಾದರೆ, ಯುರೋಪಿಯನ್ ಫುಟ್‌ಬಾಲ್ (ಯುಇಎಫ್‌ಎ) ಕ್ಲಬ್‌ಗೆ `ಸಿ~ ಮಾದರಿಯ ಅರ್ಹತೆ ಪಡೆಯುತ್ತಾರೆ. ಇಲ್ಲಿನ ಕೋಚ್‌ಗಳಿಗೆ ಡಚ್ ಫುಟ್‌ಬಾಲ್ ಸಂಸ್ಥೆಯ ಕೋಚ್ ನಿಕೊ ಲಿಬಾಮ್ ತರಬೇತಿ ನೀಡಲಿದ್ದಾರೆ~ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಉಪಾಧ್ಯಕ್ಷ ಎಂ. ಮೋಹನ್ ರಾಜ್, ಉಪ ಕಾರ್ಯದರ್ಶಿ ಕೃಷ್ಣಾಜೀ ರಾವ್, ಪ್ರಧಾನ ಕಾರ್ಯದರ್ಶಿ ಕೃಷ್ಣನಾರಾಯಣ್, ಕೋಚ್ ಜೊಹಾನ್ ವಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT