ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬ್ಬಿಂಗ್: ಬಹಿರಂಗ ಚರ್ಚೆ ಅಗತ್ಯ

Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಯಾವುದೋ ಸನ್ನಿವೇಶ ಮತ್ತು ಸಂದರ್ಭದಲ್ಲಿ ಡಬ್ಬಿಂಗ್‌ಗೆ ವ್ಯಕ್ತವಾಗಿದ್ದ ವಿರೋಧವನ್ನು, ಬದಲಾಗಿರುವ ಇಂದಿನ ಸಂದರ್ಭಕ್ಕೂ ಅದು ಸಾರ್ವಕಾಲಿಕವಾಗಬೇಕೆಂದು ಬಯಸುವುದು ಎಷ್ಟು ಸರಿ? ಚಲನಚಿತ್ರ ಕ್ಷೇತ್ರವನ್ನು ಒಂದು ಉದ್ದಿಮೆಯೆಂದು ಒಪ್ಪಿಕೊಂಡ ಮೇಲೆ, ಹಣ ಕೊಟ್ಟು ವೀಕ್ಷಿಸುವ ಪ್ರೇಕ್ಷಕ ಒಬ್ಬ ಗ್ರಾಹಕನಾಗುವುದಿಲ್ಲವೆ? ತಾನು ಬಯಸಿದ್ದನ್ನು ತನಗೆ ಅರ್ಥವಾಗುವ ಭಾಷೆಯಲ್ಲಿ ಗ್ರಹಿಸುವ ಸ್ವಾತಂತ್ರ್ಯ ಅವನಿಗೆ ಇಲ್ಲವೇ? ಡಬ್ಬಿಂಗ್ ಪ್ರಕ್ರಿಯೆಯಲ್ಲಿ ಅನುವಾದಕರು, ಸಂಭಾಷಣಾಕಾರರು, ಕಂಠದಾನ ಕಲಾವಿದರು, ತಂತ್ರಜ್ಞರು, ಗೀತರಚನಾಕಾರರು ಮುಂತಾದವರುಗಳಿಗೆ ಅವಕಾಶ ಕಲ್ಪಿಸಿಕೊಡುವುದು ಮತ್ತು ಅವರ ಸೇವೆಯನ್ನು ಬಳಸಿಕೊಳ್ಳುವುದರ ಜೊತೆಗೆ ಕನ್ನಡ ಭಾಷೆ ಮತ್ತು ಅದರ ಪಾರಿಭಾಷಿಕ ಪದಕೋಶಗಳ ಬಳಕೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಟ್ಟಂತಾಗುವುದಿಲ್ಲವೆ?

ದಿನ ನಿತ್ಯವೂ ಪರಭಾಷಿಕರನ್ನು ಚಲನಚಿತ್ರ ಕ್ಷೇತ್ರಕ್ಕೆ ಸೆಳೆದುಕೊಳ್ಳುತ್ತಿರುವ ಇವರುಗಳು, ಯಾವ ನೈತಿಕ ನೆಲೆಗಟ್ಟಿನಲ್ಲಿ ಡಬ್ಬಿಂಗನ್ನು ವಿರೋಧಿಸುತ್ತಿದ್ದಾರೋ ತಿಳಿಯದು. ಈ ನಿಟ್ಟಿನಲ್ಲಿ ದಿನೇ ದಿನೇ ವ್ಯಕ್ತವಾಗುತ್ತಿರುವ ಡಬ್ಬಿಂಗ್ ಪರವಾದ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಬಹಿರಂಗ ಚರ್ಚೆ ಅತ್ಯಂತ ಅವಶ್ಯಕವೆಂದು ನನ್ನ ಅಭಿಪ್ರಾಯ. ಕಾನೂನು ಹೋರಾಟ ಹಾಗೂ ಚಳವಳಿ ಬಗ್ಗೆ ಮಾತನಾಡುವುದು ಮತ್ತು ಯೋಚಿಸುವುದನ್ನು ಬಿಟ್ಟು ಅಸಂಖ್ಯಾತ ಚಿತ್ರರಸಿಕರು ಹಾಗೂ ಸಮಸ್ತ ಕನ್ನಡಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯುವುದು ಸೂಕ್ತ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT