ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಸ್ಸಾಲ್ಟ್‌ ಸಿಸ್ಟೆಂ ಪರಿಚಯಿಸಿದೆ 3ಡಿ ವಿನ್ಯಾಸ ತಂತ್ರಾಂಶ

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಅಮೆರಿಕ ಮೂಲದ  ಡಸಾಲ್ಟ್ ಸಿಸ್ಟೆಂ ಕಂಪೆನಿ ‘ಸಾಲಿಡ್‌ವರ್ಕ್ಸ್ ೨೦೧೪’ ವಿನ್ಯಾಸ ತಂತ್ರಾಂಶವನ್ನು ದೇಶದ ಮಾರುಕಟ್ಟೆಗೆ ಬುಧವಾರ ಪರಿಚಯಿಸಿದೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಸ್ಸಾಲ್ಟ್‌ ಸಿಸ್ಟೆಂನ ಹಿರಿಯ ತಾಂತ್ರಿಕ ವ್ಯವಸ್ಥಾಪಕ ರವಿ ವರದರಾಜನ್‌, ಇದು ಕಂಪೆನಿಯ 3ಡಿ ಕ್ಯಾಡ್‌ ತಂತ್ರಾಂಶದ 22ನೇ ಆವೃತ್ತಿ. ನೂತನ ಉತ್ಪನ್ನವು ಮೆಕ್ಯಾನಿಕಲ್‌, ಎಲೆಕ್ಟ್ರಿಕಲ್ ವಿಭಾಗಕ್ಕೆ ಅಗತ್ಯವಾದ ಪರಿಕರಗಳ ವಿನ್ಯಾಸಗಳನ್ನು  3ಡಿ ಶೈಲಿಯಲ್ಲಿ ರಚಿಸಿಕೊಳ್ಳಲು ನೆರವಾಗುತ್ತದೆ. ಎಂಜಿನಿಯರಿಂಗ್‌ ವಿದ್ಯಾರ್ಥಿಗಳು, ವೃತ್ತಿನಿರತರು, ಉದ್ಯಮ ಸಂಸ್ಥೆಗಳಿಗೆ ಪ್ರಯೋಜನಕಾರಿ ಯಾದ ತಂತ್ರಾಂಶವಾಗಿದೆ ಎಂದರು.

ಭಾರತ ಸಂಶೋಧನಾ ಕ್ಷೇತ್ರ ವಿಸ್ತಾರ ಗೊಳ್ಳುತ್ತಿದ್ದು, ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೂ ಈ ತಂತ್ರಾಂಶ ಬಹಳವಾಗಿ ನೆರವಾಗಲಿದೆ ಎಂದು ಕಂಪೆನಿಯ ಮಾರುಕಟ್ಟೆ ವಿಭಾಗದ ನಿರ್ದೇಶಕ ರವಿಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT