ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ. ಹನೀಫ್‌ಗೆ ಕಿರುಕುಳ: ರೂ 5 ಕೋಟಿ ಪರಿಹಾರ?

Last Updated 22 ಡಿಸೆಂಬರ್ 2010, 5:30 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ): ಗ್ಲಾಸ್ಗೊ ವಿಮಾನ ನಿಲ್ದಾಣದ ಮೇಲೆ ದಾಳಿ ಎಸಗಲು ಸಂಚು ರೂಪಿಸಿದ್ದವರಲ್ಲಿ ಒಬ್ಬರೆಂಬ ಶಂಕೆ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಪೊಲೀಸರಿಂದ ವಿನಾಕಾರಣ ಬಂಧನಕ್ಕೊಳಗಾಗಿ ಸಾಕಷ್ಟು ಮಾನಸಿಕ ಕ್ಷೋಭೆಗೆ ತುತ್ತಾಗಿದ್ದ ಬೆಂಗಳೂರಿನ ವೈದ್ಯ ಮೊಹಮ್ಮದ್ ಹನೀಫ್ ಅವರಿಗೆ ಆಸ್ಟ್ರೇಲಿಯಾ ಸರ್ಕಾರದಿಂದ ಸುಮಾರು ್ಙ5 ಕೋಟಿ ಪರಿಹಾರ ಸಿಗುವ ಸಂಭವವಿದೆ.

31 ವರ್ಷದ ಹನೀಫ್ ತಮ್ಮ ವಕೀಲರ ಸಮ್ಮುಖದಲ್ಲಿ ಬ್ರಿಸ್ಬೇನ್‌ನಲ್ಲಿ   ಸರ್ಕಾರದ ಪ್ರಮುಖರೊಂದಿಗೆ ಎರಡು ದಿನಗಳ ಮಾತುಕತೆ ನಡೆಸಿದ ನಂತರ ಪರಸ್ಪರ ಸಮ್ಮತಿಯೊಂದಿಗೆ ಈ ಪರಿಹಾರ ಮೊತ್ತ ನಿಗದಿಯಾಗಿದೆ. ಇದು ಆಸ್ಟ್ರೇಲಿಯಾದ ಕಾನೂನು ಚರಿತ್ರೆಯಲ್ಲೇ ಅತ್ಯಂತ ಹೆಚ್ಚಿನದು  ಎನ್ನಲಾಗಿದೆ.

2007ರಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿ ಮಾನಸಿಕ ಯಾತನೆ ಅನುಭವಿಸಿದ ತಮ್ಮ ಕಕ್ಷಿದಾರ 10 ಲಕ್ಷ ಡಾಲರ್ (ರೂ 5 ಕೋಟಿ) ಪರಿಹಾರ ಪಡೆಯುವ ಸಾಧ್ಯತೆ ಇದೆ ಎಂದು ಹನೀಫ್ ಪರ ವಕೀಲರು ಮೊದಲೇ ಹೇಳಿದ್ದರಾದರೂ ಇದೀಗ  ಅವರು ಪಡೆಯಲಿರುವ ನಿರ್ದಿಷ್ಟ ಮೊತ್ತ ಎಷ್ಟೆಂಬುದನ್ನು ಖಚಿತ  ಪಡಿಸಿಲ್ಲ.

 ‘ಒಪ್ಪಂದದ ವಿವರಗಳನ್ನು ಬಹಿರಂಗ ಮಾಡಬಾರದೆಂಬ ನಿಬಂಧನೆಯನ್ನೂ ಕರಾರು ಒಳಗೊಂಡಿದೆ’ ಎಂದು ಹನೀಫ್ ವಕೀಲರಾದ ರಾಡ್ ಹಾಡ್ಜ್‌ಸನ್ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ. ಈ ಸಂಧಾನದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಪುನಃ ಆಸ್ಟ್ರೇಲಿಯಾಕ್ಕೇ ಬಂದು ನೆಲೆಸುವ ಯೋಚನೆಯಲ್ಲಿರುವ ಅವರು, ಗೋಲ್ಡ್ ಕೋಸ್ಟ್‌ನಲ್ಲಿ ತಾವು ಮುಂಚೆ ಮಾಡುತ್ತಿದ್ದ ಕೆಲಸವನ್ನೇ ಅಪೇಕ್ಷಿಸಿ ಹೊಸದಾಗಿ ಅರ್ಜಿ ಹಾಕುವ ಚಿಂತನೆಯನ್ನೂ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT