ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಟ್ ಕಾಮ್ ಯುಗ ಅಂತ್ಯ?

Last Updated 20 ಜೂನ್ 2011, 19:30 IST
ಅಕ್ಷರ ಗಾತ್ರ

ಸಿಂಗಪುರ (ಎಪಿ):  ಇನ್ನು ಎಲ್ಲ ಅಂತರ್ಜಾಲ ತಾಣಗಳು `ಡಾಟ್ ಕಾಮ್~ `ಡಾಟ್ ನೆಟ್~ ಎಂದೇ ಅಂತ್ಯಗೊಳ್ಳಬೇಕಾಗಿಲ್ಲ. ಅಂತರ್ಜಾಲ ತಾಣಕ್ಕೆ ಯಾವುದೇ ಇಚ್ಚಿಸಿದ ಹೆಸರು ಇಟ್ಟುಕೊಳ್ಳುವ ಅವಕಾಶ ನೀಡಲು ಅಂತರ್ಜಾಲ ಮೇಲ್ವಿಚಾರಕರು ಸಮ್ಮತಿಸಿದ್ದಾರೆ.

ಅಂತರ್ಜಾಲ ತಾಣಗಳು ಪ್ರಾರಂಭಗೊಂಡು 26 ವರ್ಷಗಳ ಬಳಿಕ ಈ ಸಡಿಲಿಕೆ ಕಾರ್ಯಗತವಾಗಿದೆ. ಇಲ್ಲಿ ನಡೆದ ಇಂಟರ್‌ನೆಟ್ ಕಾರ್ಪೊರೇಷನ್ ಫಾರ್ ಅಸೈನ್ಡ್ ನೇಮ್ಸ ಆ್ಯಂಡ್ ನಂಬರ್ಸ್‌ ಸಂಸ್ಥೆಯ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಇದರ ಅನ್ವಯ ಇನ್ನು `ಡಾಟ್ ಕಾಮ್~ `ಡಾಟ್ ನೆಟ್~ ಬದಲು ಯಾವುದೇ ಭಾಷೆಯ, ಯಾವುದೇ ಲಿಪಿಯ ಹೆಸರನ್ನು ಇಟ್ಟುಕೊಳ್ಳಬಹುದಾಗಿದೆ. ಉದಾಹರಣೆಗೆ ಇನ್ನು `ಡಾಟ್ ಐಪ್ಯಾಡ್~ ಅಥವಾ `ಡಾಟ್ ಆ್ಯಪಲ್~ ಎಂದು ಹುಡುಕಿದಲ್ಲಿ ಗ್ರಾಹಕರಿಗೆ ಆಯಾ ಅಂತರ್ಜಾಲ ತಾಣಗಳು ನೇರವಾಗಿ ಎಟುಕಲಿದೆ.
ಈ ನಿರ್ಧಾರದಿಂದ ಅಂತರ್ಜಾಲದಲ್ಲಿ ಹೊಸ ಯುಗ ಆರಂಭವಾಗಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಪೀಟರ್ ಡೆಂಗೇಟ್ ಥ್ರಷ್ ತಿಳಿಸಿದ್ದಾರೆ.

1984ರಲ್ಲಿ `ಡಾಟ್ ಕಾಮ್~ ಯುಗ ಆರಂಭವಾದ ಬಳಿಕ ನಡೆದ ಅತ್ಯಂತ ದೊಡ್ಡ ಬದಲಾವಣೆ ಇದು ಎಂದು ವಿಶ್ಲೇಷಿಸಲಾಗಿದೆ. ಸುಮಾರು 6 ವರ್ಷಗಳ ಮಾತುಕತೆಗಳ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ಹೊಸ ಅಂತರ್ಜಾಲ ತಾಣಗಳ ಹೆಸರುಗಳು ಟ್ರೇಡ್‌ಮಾರ್ಕ್ ಹಾಗೂ ಕಾಪಿರೈಟ್‌ಗಳನ್ನು ಉಲ್ಲಂಘನೆ ಮಾಡಬಹುದು ಎಂಬ ಆತಂಕದಿಂದ ಈ ನಿರ್ಧಾರ ತೆಗೆದುಕೊಳ್ಳಲು ಇಷ್ಟು ವಿಳಂಬವಾಗಿತ್ತು.

ತಮ್ಮ ಅಂತರ್ಜಾಲ ತಾಣಗಳ ಹೆಸರು ಬದಲು ಮಾಡಬಯಸುವವರು ಮುಂದಿನ ವರ್ಷ  1,85,000 ಅಮೆರಿಕ್ ಡಾಲರ್‌ನೊಂದಿಗೆ ಅರ್ಜಿ ಸಲ್ಲಿಬಹುದಾಗಿದೆ.

ಈ ನಿರ್ಧಾರ ಕಂಪೆನಿಗಳಿಗೆ ತಮ್ಮ ಬ್ರ್ಯಾಂಡ್‌ಗಳ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಲು ಸಾಧ್ಯವಾಗುತ್ತದೆ ಎಂದು ಐಟಿ ಮ್ಯಾನೇಜರ್‌ಗಳು ಅಭಿಪ್ರಾಯಪಟ್ಟಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT