ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಆರ್‌ಎಸ್ ಅಳವಡಿಕೆಗೆ ಇಂಗ್ಲೆಂಡ್ ಆಗ್ರಹ

Last Updated 23 ಮೇ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): `ಮುಂಬರುವ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಕ್ರಿಕೆಟ್ ಟೆಸ್ಟ್ ಸರಣಿಗೆ ತೀರ್ಪು ಮರು ಪರಿಶೀಲನೆ ಮಾಡುವ ನಿಯಮವನ್ನು (ಡಿಆರ್‌ಎಸ್) ಅಳವಡಿಕೆ ಮಾಡಬೇಕು~ ಎಂದು ಇಂಗ್ಲೆಂಡ್ ಮತ್ತು ವೆಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಪತ್ರ ಬರೆದಿದೆ.

ಭಾರತ ತಂಡದ ಹಿರಿಯ ಆಟಗಾರರು ಡಿಆರ್‌ಎಸ್‌ಗೆ ಬಲವಾಗಿ ವಿರೋಧಿಸುತ್ತಿರುವ ಕಾರಣ ಬಿಸಿಸಿಐ ಕೂಡಾ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಕಳೆದ ಸಲ ಭಾರತ ತಂಡ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದಾಗಲೂ, ಇದಕ್ಕೆ ಬಿಸಿಸಿಐ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಈ ಸಲ ಭಾರತ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎನ್ನುವ ಆಶಾವಾದವನ್ನು ಇಸಿಬಿ ಹೊಂದಿದೆ. ಈ ವಿಷಯವನ್ನು `ಡೇಲಿ ಟೆಲಿ  ಗ್ರಾಫ್~ ವರದಿ ಮಾಡಿದೆ.

ಭಾರತಕ್ಕೆ ಬರುವ ಮುನ್ನ ಇಂಗ್ಲೆಂಡ್ ತಂಡ ದುಬೈಯಲ್ಲಿರುವ `ಗ್ಲೋಬಲ್ ಕ್ರಿಕೆಟ್ ಅಕಾಡೆಮಿ~ಯಲ್ಲಿ ಮೂರು ದಿನಗಳ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದೆ. ಒಟ್ಟು ಮೂರು ಅಭ್ಯಾಸ ಪಂದ್ಯಗಳನ್ನು ಪ್ರವಾಸಿ ತಂಡ ಆಡಲಿದ್ದು, ಮೊದಲ ಪಂದ್ಯ ಅಕ್ಟೋಬರ್ 30ರಂದು ಮುಂಬೈಯಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT