ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಆರ್‌ಡಿಒದಿಂದ ಹೈಬ್ರಿಡ್ ದನಗಳು

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಎತ್ತರ ಪ್ರದೇಶಗಳಲ್ಲಿ ಸೇವೆಗೆ ನಿಯುಕ್ತರಾಗಿರುವ ಸೈನಿಕರ ಆಹಾರದ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ  ಡಿಆರ್‌ಡಿಒ ಪ್ರಯೋಗಾಲಯವು ಹೈಬ್ರಿಡ್ ಜಾತಿಯ ದನ ಹಾಗೂ ಆಡುಗಳನ್ನು ಅಭಿವೃದ್ಧಿಪಡಿಸಿದೆ.

ಲಡಾಖ್ ಹಾಗೂ ಹಿಮಾಲಯದ ಶೀತಪ್ರದೇಶಗಳಲ್ಲಿ ಬದುಕಬಲ್ಲ ಈ ಪ್ರಾಣಿಗಳನ್ನು ಲೇಹ್ ಮೂಲದ ಎತ್ತರದ ಪ್ರದೇಶಗಳ ಸಂಶೋಧನೆಗಾಗಿನ ರಕ್ಷಣಾ ಸಂಸ್ಥೆ (ದಿಹಾರ್) ಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

`ಮೊದಲು ಸೈನಿಕರು ಪ್ಯಾಕೇಜ್ಡ್ ಹಾಲು ಮತ್ತು ಮಾಂಸವನ್ನು ಉಪಯೋಗಿಸುತ್ತಿದ್ದರು. ಆದರೆ ಹೈಬ್ರಿಡ್ ದನಗಳು ಪ್ರತಿ ದಿನ 25ಲೀ.ನಷ್ಟು ಹಾಲನ್ನು ನೀಡಲಿದ್ದು ಇವುಗಳಿಂದ ಸೇನಾಪಡೆಗಳ ಶೇ 25ರಷ್ಟು ಆಹಾರ ಅಗತ್ಯಗಳನ್ನು ಪೂರೈಸಬಹುದಾಗಿದೆ~ ಎಂದು ಡಿಆರ್‌ಡಿಒ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯ ನಿಯಂತ್ರಣಾಧಿಕಾರಿ ಸೆಲ್ವಮೂರ್ತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT