ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎನ್‌ಎ ಬೆರಳಚ್ಚು ಪರೀಕ್ಷೆಗೆ ಹಿನ್ನಡೆ

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹೈದರಾಬಾದ್: ತಂದೂರಿ ಕೊಲೆ ಪ್ರಕರಣ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಂತಹ ಪ್ರಕರಣಗಳ ತನಿಖೆಗೆ ನೆರವಾಗಿದ್ದ ಡಿಎನ್‌ಎ ಬೆರಳಚ್ಚು ವಿಧಾನವು ದುಬಾರಿ ವೆಚ್ಚದಿಂದಾಗಿ ಈಗ ಹಿನ್ನಡೆ ಅನುಭವಿಸುತ್ತಿದೆ.

ಈ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವ ಪೊಲೀಸ್ ಇಲಾಖೆಯು ಪ್ರತಿ ಪರೀಕ್ಷೆಗೂ 5 ಸಾವಿರ ರೂಪಾಯಿ ವ್ಯಯಿಸಬೇಕಾಗುತ್ತದೆ. ಮೂಲ ಮಾದರಿಗೆ ಹೋಲಿಸಲು ಕನಿಷ್ಠ ಮೂರು ಬಾರಿಯಾದರೂ ಬೆರಳಚ್ಚು ಪರೀಕ್ಷೆ ಮಾಡಬೇಕಾಗಿರುವುದರಿಂದ ಪ್ರತಿ ಪ್ರಕರಣಕ್ಕೆ ಏನಿಲ್ಲವೆಂದರೂ 20 ಸಾವಿರ ರೂಪಾಯಿ ಖರ್ಚಾಗುತ್ತದೆ.

`ಡಿಎನ್‌ಎ ಪರೀಕ್ಷೆಯಲ್ಲಿ ಬಳಸುವ ರಾಸಾಯನಿಕ ವಸ್ತು ದೇಶೀಯವಾಗಿ ಲಭ್ಯವಿರದ ಕಾರಣ ಆಮದು ಮಾಡಿಕೊಳ್ಳಲಾಗುತ್ತದೆ. ಹಾಗಾಗಿಯೇ ಬೆರಳಚ್ಚು ಮಾದರಿ ಪರೀಕ್ಷೆ ದುಬಾರಿಯಾಗುತ್ತದೆ. ಅದು ದೇಶೀಯವಾಗಿ ಲಭ್ಯವಾದಲ್ಲಿ ವೆಚ್ಚ ಕಡಿಮೆ ಆಗಲಿದೆ~ ಎಂದು ಡಿಎನ್‌ಎ ಬೆರಳಚ್ಚು ಹಾಗೂ ವಿಶ್ಲೇಷಣಾ ಕೇಂದ್ರದ (ಸಿಡಿಎಫ್‌ಡಿ) ನಿರ್ದೇಶಕ ಜೆ.ಗೌರಿಶಂಕರ್ ಹೇಳುತ್ತಾರೆ. ಡಿಎನ್‌ಎ ಬೆರಳಚ್ಚು ಪರೀಕ್ಷೆಯು ಅಲ್ಲಗಳೆಯಲಾಗದ ಪುರಾವೆ ಮೂಲಕ ಖಂಡಿತವಾಗಿಯೂ ಅಪರಾಧಿಗಳನ್ನು ಪತ್ತೆ ಹಚ್ಚಲು ನೆರವಾಗುತ್ತದೆ. ಆ ಮೂಲಕ ಅಪರಾಧ ನ್ಯಾಯಾಂಗ ವ್ಯವಸ್ಥೆ ಸುಧಾರಿಸುತ್ತದೆ ಎನ್ನುತ್ತಾರೆ ಅವರು.

ಭುವನೇಶ್ವರದಲ್ಲಿರುವ ಜೀವವಿಜ್ಞಾನ ಸಂಸ್ಥೆಯಲ್ಲಿ ಡಿಎನ್‌ಎ ಪರೀಕ್ಷಾ ವ್ಯವಸ್ಥೆಗೆ ಇತ್ತೀಚೆಗೆ ಒಡಿಶಾ ಸರ್ಕಾರದ ಜತೆ ಸಿಡಿಎಫ್‌ಡಿಯು ಒಪ್ಪಂದಕ್ಕೆ ಸಹಿ ಹಾಕಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳು, ಶವದ ಗುರುತು ಹಾಗೂ ನಾಪತ್ತೆಯಾದವರ ಗುರುತು ಪತ್ತೆಗೆ ಈ ಪ್ರಯೋಗಾಲಯವು ಸರ್ಕಾರಕ್ಕೆ ನೆರವು ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT