ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಟಿಎಚ್‌ಗೂ ಬಂತು ಪೋರ್ಟೆಬಿಲಿಟಿ

Last Updated 16 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮೊಬೈಲ್ ಪೊರ್ಟೆಬಿಲಿಟಿ ಈಗ ಮೊಬೈಲ್ ಫೋನ್ ಬಳಕೆದಾರರಿಗೆ ಅಪರಿಚಿತವೇನಲ್ಲ. ಯಾವುದೇ ಮೊಬೈಲ್ ಸೇವಾ ಸಂಸ್ಥೆಯ ಚಂದಾದಾರರಾಗಿದ್ದರೂ ಹಳೆಯ ನಂಬರನ್ನೇ ಉಳಿಸಿಕೊಂಡು ಇನ್ನೊಂದು ಸಂಸ್ಥೆಗೆ ಸ್ಥಳಾಂತರಗೊಳ್ಳುವ `ಪೋರ್ಟೆಬಿಲಿಟಿ~ ಸಾಕಷ್ಟು ಜನಪ್ರಿಯವೂ ಆಗಿದೆ. ಇದರಿಂದ ಮೊಬೈಲ್ ಕಂಪೆನಿಗಳ ಸೇವೆಯ ಗುಣಮಟ್ಟವೂ ಸಾಕಷ್ಟು ಸುಧಾರಿಸಿದೆ.

ಅಂಥದೇ ಸೌಲಭ್ಯ ಈಗ ಡಿಟಿಎಚ್‌ನಲ್ಲೂ (ಡೈರೆಕ್ಟ್ ಟು ಹೋಮ್) ಪ್ರಾರಂಭವಾಗಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎನ್ನುತ್ತದೆ ಈ ಸೇವೆಯನ್ನು ಪರಿಚಯಿಸುತ್ತಿರುವ ಡಿಶ್ ಟಿವಿ. ಅದು ಡಿಶ್ ಫ್ರೀಡಮ್ ಎಂಬ ಕಂಡೀಷನಲ್ ಆಕ್ಸಸ್ ಮಾಡ್ಯೂಲ್ ಡಿವೈಸ್ ಬಿಡುಗಡೆ ಮಾಡಿದೆ.

ನಿಮ್ಮ ಬಳಿ ಯಾವುದೇ ಆಪರೇಟರ್‌ರ ಸೆಟ್ ಟಾಪ್ ಬಾಕ್ಸ್ ಇದ್ದರೂ ಅದರಲ್ಲಿ ಡಿಶ್ ಸಿಎಎಂ ಜೋಡಿಸಿಕೊಂಡರೆ ಸಾಕು. ಡಿಶ್ ಟಿವಿಯ ಸೇವೆಯನ್ನು ಪಡೆಯಬಹುದು.

`ಟ್ರಾಯ್‌ನ ಡಿಟಿಎಚ್ ಪರವಾನಗಿ ನಿಯಮಗಳ ಪ್ರಕಾರ ಗ್ರಾಹಕರಿಗೆ ಆಪರೇಟರ್‌ಗಳನ್ನು ಬದಲಾಯಿಸಿಕೊಳ್ಳುವ ಆಯ್ಕೆ ನೀಡುವುದು ಕಡ್ಡಾಯ. ಅಲ್ಲದೆ ಎಲ್ಲಾ ಆಪರೇಟರ್‌ಗಳು ಈ ರೀತಿ ಬದಲಾವಣೆಗೆ ಅನುಕೂಲವಾಗುವ ಸೆಟ್ ಟಾಪ್ ಬಾಕ್ಸ್ ನೀಡುವುದು ಸಹ ಕಡ್ಡಾಯ. ಈ ಆಯ್ಕೆಯನ್ನು ಬಳಸಿಕೊಳ್ಳಲು ನಾವು ಗ್ರಾಹಕರಿಗೆ ಅವಕಾಶ ಕಲ್ಪಿಸುತ್ತಿದ್ದೇವೆ. ಭಾರತೀಯ ಡಿಟಿಎಚ್ ಅಧ್ಯಾಯವನ್ನೇ ಬದಲಿಸುವ ಈ ಉತ್ಪನ್ನಕ್ಕೆ 990 ರೂ ಬೆಲೆ ನಿಗದಿಪಡಿಸಿದ್ದೇವೆ~ ಎನ್ನುತ್ತಾರೆ ಡಿಶ್ ಟಿವಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರ ಜವಹರ್ ಗೋಯಲ್.

ದೇಶದಲ್ಲಿ 330 ಲಕ್ಷ ಡಿಟಿಎಚ್ ಚಂದಾದಾರರಿದ್ದಾರೆ. ಅವರಲ್ಲಿ ಶೇ 20ರಷ್ಟು ಜನ ತಾವು ಚಂದಾದಾರರಾಗಿರುವ ಡಿಟಿಎಚ್ ಸೇವೆಯನ್ನೇ ಬಳಸಿಕೊಳ್ಳುತ್ತಿಲ್ಲ. ಏಕೆಂದರೆ ಆ ಕಂಪೆನಿಯ ಸೇವೆ ಅವರಿಗೆ ತೃಪ್ತಿ ತರದೇ ಇರಬಹುದು. ಅವರನ್ನು ತಲುಪಲು ಡಿಶ್ ಪ್ರಯತ್ನಿಸುತ್ತಿದೆ ಎನ್ನುವುದು ಅವರ ವಿವರಣೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT