ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿವೈಎಸ್‌ಎಸ್‌ಗೆ ಗೆಲುವು

ರಾಜ್ಯ ಯೂತ್ ಬ್ಯಾಸ್ಕೆಟ್‌ಬಾಲ್
Last Updated 18 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಮಂಡ್ಯದ ಡಿವೈಎಸ್‌ಎಸ್ ತಂಡ ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ಯೂತ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಬಾಲಕಿಯರ ವಿಭಾಗದಲ್ಲಿ ಗುರುವಾರ 49-20 ಪಾಯಿಂಟ್‌ಗಳಿಂದ ವಿಮಾನಪುರ ಎದುರು ಗೆಲುವು ಸಾಧಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಡಿವೈಎಸ್‌ಎಸ್ ತಂಡದ  ಆಕ್ಷಾ 14 ಪಾಯಿಂಟ್‌ಗಳನ್ನು ಕಲೆ ಹಾಕಿದರೆ, ಲೋಪಮುದ್ರ 10 ಅಂಕಗಳನ್ನು ಗಳಿಸಿ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದೇ ವಿಭಾಗದ ಇನ್ನೊಂದು ಪಂದ್ಯದಲ್ಲಿ ಮೌಂಟ್ಸ್ ಕ್ಲಬ್ 45-29ರಲ್ಲಿ ವಿದ್ಯಾನಗರದ ಕ್ರೀಡಾ ಶಾಲೆಯನ್ನು ಸೋಲಿಸಿತು.ಬಾಲಕರ ವಿಭಾಗದ ಸ್ಪರ್ಧೆಗಳಲ್ಲಿ ಧಾರವಾಡದ ಭಾರತ ಕ್ರೀಡಾ ಪ್ರಾಧಿಕಾರ 49-33ರಲ್ಲಿ ಅಪ್ಪಯ್ಯ ಕ್ಲಬ್ ಮೇಲೂ, ಬೀಗಲ್ಸ್ ಕ್ಲಬ್ 56-33 ಅಂಕಗಳಿಂದ ಯಂಗ್ ಓರಿಯನ್ಸ್ ಎದೂರು ಗೆಲುವು ಸಾಧಿಸಿದವು.ಬಾಲಕ ಹಾಗೂ ಬಾಲಕಿಯರ ಎರಡೂ ವಿಭಾಗಗಳ ಫೈನಲ್ ಪಂದ್ಯಗಳು ಶುಕ್ರವಾರ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT