ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಪಿ ಎಂಬ ವಿಶಿಷ್ಟ ಶಿಕ್ಷಣ

Last Updated 15 ಜುಲೈ 2012, 19:30 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರಿ, ಅನುದಾನಿತ ಹಾಗೂ ಕೆಲವು ಖಾಸಗಿ ಪಾಲಿಟೆಕ್ನಿಕ್‌ಗಳಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರಥಮ ವರ್ಷದ ತಾಂತ್ರಿಕ ಮತ್ತು ತಾಂತ್ರಿಕೇತರ ಡಿಪ್ಲೊಮಾ ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು ಆ. 6ರ ವರೆಗೆ ನಡೆಯಲಿದೆ.

ಬಹಳಷ್ಟು ಪೋಷಕರು, ವಿದ್ಯಾರ್ಥಿಗಳಿಗೆ ತಾಂತ್ರಿಕ ವಿಭಾಗದಲ್ಲಿ ಬಹು ಬೇಡಿಕೆಯಿರುವ ಪ್ರಮುಖ ಕೋರ್ಸುಗಳ ಬಗ್ಗೆ ಮಾತ್ರ ಮಾಹಿತಿಯಿದೆ. ಆದರೆ ಉತ್ತಮ ಉದ್ಯೋಗದ ಅವಕಾಶ ಇರುವ ತಾಂತ್ರಿಕೇತರ ವಿಭಾಗದ `ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್~ ಬಗ್ಗೆ ಅರಿವು ಕಡಿಮೆ ಎಂದೇ ಹೇಳಬಹುದು. ಇದರ ಪಠ್ಯಕ್ರಮದಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಅಧ್ಯಯನ ವಿಷಯಗಳಿರುವುದು ವಿಶೇಷ.

ಡಿಸಿಪಿ ಅವಧಿ 3 ವರ್ಷ, ಸೆಮಿಸ್ಟರ್ ಪದ್ಧತಿ ಒಳಗೊಂಡಿದೆ:
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಗರಿಷ್ಠಾಂಕ ಹಾಗೂ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ಮೀಸಲಾತಿ ಅನುಸಾರ ಪ್ರವೇಶಾವಕಾಶ ನೀಡಲಾಗುವುದು.

ಪಠ್ಯಕ್ರಮದ ವಿಷಯಗಳು: ವಾಣಿಜ್ಯ ಶಾಸ್ತ್ರ, ಲೆಕ್ಕಶಾಸ್ತ್ರ, ಕಚೇರಿ, ವ್ಯವಹಾರ ನಿರ್ವಹಣೆ, ವಾಣಿಜ್ಯ ಕಾನೂನು, ಆಡಿಟಿಂಗ್, ಟ್ಯಾಲಿ, ಕಂಪ್ಯೂಟರ್ ಬೇಸಿಕ್, ವೆಬ್‌ಡಿಸೈನ್, ಡಿಟಿಪಿ ಇಂಗ್ಲಿಷ್ ಭಾಷೆ ಇತ್ಯಾದಿ ಸಾಮಾನ್ಯ ಥಿಯರಿ ಮತ್ತು ಪ್ರಾಯೋಗಿಕ ವಿಷಯಗಳ ಜೊತೆಗೆ ಐಚ್ಛಿಕ ವಿಷಯಗಳಾಗಿ ಕನ್ನಡ ಅಥವಾ ಇಂಗ್ಲಿಷ್ ಶೀಘ್ರಲಿಪಿ, ಬೆರಳಚ್ಚು ಮತ್ತು ಕಂಪ್ಯೂಟರ್ ಬೆರಳಚ್ಚುಗಳನ್ನು ಕಲಿಯಬೇಕಾಗುತ್ತದೆ.

ಡಿಪ್ಲೊಮಾ ತೇರ್ಗಡೆ ನಂತರ ಶಿಕ್ಷಣ ಮುಂದುವರಿಸಲು ಇಚ್ಚಿಸುವವರು ನೇರವಾಗಿ 2ನೇ ಬಿಕಾಂ, ಬಿಬಿಎಂ, ಕಂಪೆನಿ ಸೆಕ್ರೆಟರಿ ಕಲಿಕೆಗೆ ಸೇರಬಹುದು. ಪದವಿ ನಂತರ ಸಿಎ, ಐಸಿಡಬ್ಲ್ಯು ನಂತಹ ಉನ್ನತ ವೃತ್ತಿಪರ ಕೋರ್ಸ್ ಕೂಡ ಮಾಡಬಹುದು.

ಡಿಪ್ಲೊಮಾ ಮುಗಿಸಿದರೆ  ಕೇಂದ್ರ, ರಾಜ್ಯ ಮತ್ತು ಖಾಸಗಿ ವಲಯದ ಉದ್ಯಮಗಳು, ವಾಣಿಜ್ಯ ಸಂಸ್ಥೆಗಳು 1 ವರ್ಷದ ಅಪ್ರೆಂಟಿಸ್ ತರಬೇತಿಗೆ ಅವಕಾಶ ಮಾಡಿಕೊಡುತ್ತವೆ. ಅಲ್ಲದೆ, ಅಕೌಂಟೆಂಟ್, ಆಪ್ತ ಸಹಾಯಕರು-ಕನ್ನಡ ಅಥವಾ ಇಂಗ್ಲಿಷ್ ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ಕಂಪ್ಯೂಟರ್ ಕೌಶಲ ಆಧಾರಿತ ಉದ್ಯೋಗಕ್ಕೆ ಸೇರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT