ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸ್ಕವರಿಯಲ್ಲಿ ಗ್ರೌಂಡ್ ಝೀರೊ

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಸೆ. 11ಕ್ಕೆ ಅಮೆರಿಕದ ನ್ಯೂಯಾರ್ಕ್‌ನ ವಿಶ್ವವಿಖ್ಯಾತ ವಿಶ್ವ ವ್ಯಾಪಾರ ಕೇಂದ್ರ ಕಟ್ಟಡವನ್ನು ಉಗ್ರಗಾಮಿಗಳು ಉರುಳಿಸಿ 10 ವರ್ಷ.

ಗ್ರೌಂಡ್ ಝೀರೊ ಎಂಬ ಹೆಸರಿನ ಈ ಸ್ಥಳದಲ್ಲಿ ಈಗ ಅದಕ್ಕಿಂತ ಭವ್ಯವಾದ 104 ಅಂತಸ್ತಿನ ಕಟ್ಟಡ ತಲೆಯೆತ್ತುತ್ತಿದೆ. ಅದರಲ್ಲಿ ನಾಲ್ಕು ಗಗನಚುಂಬಿಗಳು, ಒಂದು ಸಾರಿಗೆ ಕೇಂದ್ರ, ಒಂದು ವಸ್ತು ಸಂಗ್ರಹಾಲಯ ಮತ್ತು ಅತ್ಯಂತ ದೊಡ್ಡದಾದ  ಮಾನವ ನಿರ್ಮಿತ ಜಲಪಾತವನ್ನೊಳಗೊಂಡ ಸ್ಮಾರಕ ಸೇರಿವೆ.

ಈ ಕಟ್ಟಡ ನಿರ್ಮಾಣದ ಹಿಂದಿನ ಛಲ, ಶ್ರಮ, ಹಿಂದಿನ ಕಟ್ಟಡದ ಅವಘಡದಲ್ಲಿ ಬಂಧು ಬಾಂಧವರನ್ನು ಕಳೆದುಕೊಂಡವರ ಸಂಕಲ್ಪ, ಅಭಿಪ್ರಾಯ, ವಾಸ್ತುಶಿಲ್ಪಿಗಳ ಚಿಂತನೆ ಮುಂತಾದವುಗಳ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮ ಸರಣಿಯನ್ನು ಹೆಸರಾಂತ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ನಿರ್ಮಿಸಿದ್ದಾರೆ.

`ರೈಸಿಂಗ್: ರೀ ಬಿಲ್ಡಿಂಗ್  ಆಫ್ ಗ್ರೌಂಡ್ ಝೀರೊ~ ಎಂಬ ಈ ಸರಣಿ ಸೆ. 12 ರಿಂದ 17ರ ವರೆಗೆ ಪ್ರತಿ ರಾತ್ರಿ 9 ಗಂಟೆಗೆ  ಡಿಸ್ಕವರಿ ಚಾನಲ್‌ನಲ್ಲಿ ಪ್ರಸಾರವಾಗಲಿದೆ.

ಎಚ್‌ಬಿಒ ಸೀರೀಸ್
ಸಿನಿಮಾಗಳಿಗಿಂಥ ಕೊಂಚ ಉದ್ದ, ಮೆಗಾ ಧಾರಾವಾಹಿಗಳಿಗಿಂಥ ಚಿಕ್ಕದು. ಆದರೆ ಅದ್ಧೂರಿಯಲ್ಲಿ ಸಿನಿಮಾಗಳನ್ನೇ ಮೀರಿಸಬಹುದಾದ ಇವುಗಳನ್ನು ಸೀರೀಸ್ ಎಂದು ಕರೆಯಲಾಗುತ್ತದೆ. ಆಗಸ್ಟ್ ಕೊನೆ ವಾರದಿಂದ ಇಂಥ ಹಲವು ಸೀರೀಸ್‌ಗಳು ಎಚ್‌ಬಿಒ ಚಾನಲ್‌ನಲ್ಲಿ ಪ್ರಸಾರವಾಗುತ್ತಿವೆ. ಇವುಗಳಲ್ಲಿ ಬಹುತೇಕ ಸರಣಿಗಳು ಪ್ರಶಸ್ತಿ ಗೆದ್ದವು.

ಇಂಥ ಅದ್ಧೂರಿ ಸೀರೀಸ್‌ಗಳಲ್ಲಿ ಈಗ `ಗೇಮ್ ಆಫ್ ಥ್ರೋನ್~ ಆರಂಭಗೊಂಡಿದೆ. ಜಾರ್ಜ್ ಆರ್.ಆರ್.ಮಾರ್ಟಿನ್ ಅವರ `ಎ ಸಾಂಗ್ ಆಫ್ ಐಸ್ ಅಂಡ್ ಫೈರ್~ ಎಂಬ ಕೃತಿ ಆಧಾರಿತ ಈ ಸೀರೀಸ್‌ನಲ್ಲಿ ಏಳು ರಾಜಮನೆತಗಳ ಮೇಲೆ ಹಿಡಿತ ಸಾಧಿಸುವ ಸಲುವಾಗಿ ಎರಡು ಪ್ರಬಲ ಕುಟುಂಬಗಳು ನಡೆಸುವ ಹೋರಾಟ ಇದೆ.

ಪ್ರತಿ ಭಾನುವಾರ ಸಂಜೆ 6.30 ಹಾಗೂ ರಾತ್ರಿ 9ಕ್ಕೆ ಚಲನಚಿತ್ರ ಪ್ರಸಾರಕ್ಕೂ ಮುನ್ನ `ಗೇಮ್ ಆಫ್ ಥ್ರೋನ್~ ವೀಕ್ಷಿಸಬಹುದು.. ಇದರ ಪ್ರತಿಯೊಂದು ಸರಣಿಯೂ ರೋಮಾಂಚಕ, ಭಿನ್ನ.

ಇದೇ ರೀತಿ `ಮಿಲ್ಡರ್ಡ್ ಪೀರ್ಸ್~ ಎಂಬ ಮತ್ತೊಂದು ಸೀರೀಸ್ ಕೂಡಾ ಎಚ್‌ಬಿಒನಲ್ಲಿ ತೆರೆ ಕಾಣಲು ಸಿದ್ಧವಾಗಿದೆ. ಇದರ ಮುಖ್ಯ ಭೂಮಿಕೆಯಲ್ಲಿ `ಟೈಟಾನಿಕ್~ ಚಿತ್ರದಲ್ಲಿ ನಾಯಕ ನಟಿಯಾಗಿದ್ದ ಕೇಟ್ ವಿನ್ಸ್‌ಲೆಟ್ ಇದ್ದಾರೆ.

ಅದ್ಧೂರಿ ತಾರಾಗಣ ಹೊಂದಿರುವ ಈ ಸೀರೀಸ್‌ನ ಜತೆಗೆ ಹಂಗ್ ಎಂಬ ಮತ್ತೊಂದು ಸೀರೀಸನ್ನೂ ಎಚ್‌ಬಿಒ ಪರಿಚಯಿಸುತ್ತಿದೆ.  ಹೊಸತನದ ಹುಡುಕಾಟದಲ್ಲಿ ಸದಾ ಮುಂದಿರುವ ಎಚ್‌ಬಿಒ ಇಂಥ ದುಬಾರಿ ಸೀರೀಸ್‌ಗಳ ನಿರ್ಮಾಣದ ಹೊಸ ಶಕೆ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT