ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಸೆಲ್ ಕಾರುಗಳ ಮಾರಾಟ ನಿರ್ಬಂಧ ಸಡಿಲಿಕೆಗೆ ಮನವಿ

Last Updated 14 ಡಿಸೆಂಬರ್ 2015, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನವದೆಹಲಿಯಲ್ಲಿ ಡೀಸೆಲ್ ಕಾರು ನೋಂದಣಿ ನಡೆಸದಂತೆ ನೀಡಿರುವ ಆದೇಶದಲ್ಲಿ ತುಸು ಮಾರ್ಪಾಡು ಮಾಡುವಂತೆ ಕೋರಿ ಕಾರು ಮಾರಾಟಗಾರರು ಸಲ್ಲಿಸಿರುವ ಅರ್ಜಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ವಿಚಾರಣೆಗೆ ಒಳಪಡಿಸಲು ಒಪ್ಪಿಗೆ ಸೂಚಿಸಿದೆ.

‘ಈ ಅರ್ಜಿಯನ್ನು ಮಂಗಳವಾರ ಪರಿಶೀಲಿಸೋಣ’ ಎಂದು ಎನ್‌ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಸ್ವತೇಂದರ್ ಕುಮಾರ್ ಅವರ ನೇತೃತ್ವದ ಪೀಠ ಸೋಮವಾರ ತಿಳಿಸಿದೆ. 

ಇದಕ್ಕೂ ಮುನ್ನ, ‘2015ರಲ್ಲಿ ತಯಾ ರಾಗಿರುವ ಕಾರುಗಳನ್ನು 2016ರಲ್ಲಿ ಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಾರೆ. ಹೀಗಾಗಿ ಈಗಾಗಲೆ ತಯಾರಾಗಿರುವ ಡೀಸೆಲ್ ಕಾರುಗಳನ್ನು ಮಾರಾಟ ಮಾಡಲು ಅನುಮತಿ ನೀಡಿ, ಆದೇಶವ ನ್ನು ತುಸು ಬದಲಿಸಬೇಕು’ ಎಂದು ಕಾರು ಮಾರಾಟಗಾರರ ಪರ ವಕೀಲರು ಪೀಠಕ್ಕೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT