ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಸೆಲ್ ಚಾಲಿತ ಷೆವರ್ಲೆ ಬೀಟ್ ಮಾರುಕಟ್ಟೆಗೆ

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜನರಲ್ ಮೋಟಾರ್ ಇಂಡಿಯಾ ಡೀಸೆಲ್ ಚಾಲಿತ ಷೆವರ್ಲೆ ಬೀಟ್ ಕಾರನ್ನು ಬುಧವಾರ ಇಲ್ಲಿ ರಾಜ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಮೂರು ಮಾದರಿಗಳಲ್ಲಿ ಲಭ್ಯವಿರುವ ಈ ಕಾರಿನ ಬೆಂಗಳೂರು ಎಕ್ಸ್ ಷೊರೂಂ ಬೆಲೆ ್ಙ4.35 ಲಕ್ಷದಿಂದ ಪ್ರಾರಂಭವಾಗುತ್ತದೆ.

`ಇದು ದೇಶದ ಗರಿಷ್ಠ ಇಂಧನ ಕ್ಷಮತೆ ಹೊಂದಿರುವ ಡೀಸೆಲ್ ಚಾಲಿತ ಕಾರು. ಬೆಂಗಳೂರಿನಲ್ಲಿರುವ ಕಂಪೆನಿಯ ತಾಂತ್ರಿಕ ಕೇಂದ್ರದ ಸಹಭಾಗಿತ್ವದಲ್ಲಿ ಮುಂದಿನ ತಲೆಮಾರಿನ `ಸ್ಮಾರ್ಟ್‌ಟೆಕ್~ ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸಲಾಗಿದೆ. ಪ್ರತಿ ಲೀಟರ್‌ಗೆ 24 ಕಿ.ಮೀ ಇಂಧನ ಸಾಮರ್ಥ್ಯ ಹೊಂದಿದ್ದು, ಪವರ್ ಸ್ಟಿಯರಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ~ ಎಂದು ಜನರಲ್ ಮೋಟಾರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಕಾರ್ಲ್ ಸ್ಲ್ಯಾಮ್ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

`ಡೀಸೆಲ್ ಚಾಲಿತ ಷೆವರ್ಲೆ ಬೀಟ್ ಭಾರತೀಯ ಮಾರುಕಟ್ಟೆಗೆಂದೇ ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಮುಂದಿನ 18 ತಿಂಗಳಲ್ಲಿ ಕಂಪೆನಿಯು ಇನ್ನೂ 5 ಹೊಸ ಮಾದರಿಗಳನ್ನು ದೇಶಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಸ್ಲ್ಯಾಮ್ ಹೇಳಿದರು. ಕಂಪೆನಿಯ ಭಾರತೀಯ ಮಾರುಕಟ್ಟೆ ಮುಖ್ಯಸ್ಥ ಪಿ. ಬಾಲೇಂದ್ರನ್ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT