ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಸೆಲ್ ದರ ಏರಿಕೆ ಸಂಭವ

Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯವು ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ವಿಶ್ಲೇಷಣೆಯ ಅರ್ಧ ವಾರ್ಷಿಕ ವರದಿಯ ಪರಿಣಾಮದಿಂದ ಸದ್ಯದಲ್ಲಿಯೇ ಡೀಸೆಲ್ ದರ ಏರಿಕೆಯಾಗುವ ಸಂಭವವಿದೆ. ಸೆಪ್ಟೆಂಬರ್‌ನಲ್ಲಿ ಡೀಸೆಲ್ ದರವನ್ನು ಲೀ.ಗೆ ರೂ. 5ರಷ್ಟು ಹೆಚ್ಚಿಸಲಾಗಿದ್ದಿತು.

ಹಣದುಬ್ಬರ ನಿಯಂತ್ರಣಕ್ಕೆ, ವಿತ್ತೀಯ ಕೊರತೆ ತಗ್ಗಿಸಲು ಮತ್ತು ಜಿಡಿಪಿ ಪ್ರಮಾಣ ಹೆಚ್ಚಿಸಬೇಕೆಂದರೆ ಇನ್ನಷ್ಟು ಕಠಿಣ ಸುಧಾರಣಾ ಕ್ರಮಗಳ ಅಗತ್ಯವಿದೆ ಎಂದು ಶಿಫಾರಸು ಮಾಡಿರುವ ವರದಿ, ಡೀಸೆಲ್ ಬೆಲೆ ಹೆಚ್ಚಿಸುವ ಬಗೆಗೂ ಗಮನ ಸೆಳೆದಿದೆ.

ಡೀಸೆಲ್ ಬೆಲೆಯನ್ನು ಒಮ್ಮೆಲೇ ಶೇ 30ರಷ್ಟು ಏರಿಸಿದರೆ ಸರಾಸರಿ ಹಣದುಬ್ಬರ ದರ ಶೇ 5.68ಕ್ಕೆ ತಗ್ಗುತ್ತದೆ. ಇಷ್ಟು ಪ್ರಮಾಣದ ದರ ಏರಿಕೆ ಬೇಡ ಎನ್ನುವುದಾದರೆ ಶೇ 10ರಷ್ಟಾದರೂ ಡೀಸೆಲ್ ಬೆಲೆ ಏರಿಸಬೇಕು. ಆಗ 2011-15ರ ಅವಧಿಯ ಹಣದುಬ್ಬರ ದರವು ಶೇ 6.66ಕ್ಕೆ ಬರಲಿದೆ ಎಂದು ವರದಿ ಹೇಳಿದೆ.

ಡೀಸೆಲ್ ದರ ಏರಿಸುವುದರಿಂದ ಸಾಗಣೆ ವೆಚ್ಚ ಹೆಚ್ಚಿ ತಕ್ಷಣವೇ ಎಲ್ಲ ಸರಕುಗಳ ಬೆಲೆಯಲ್ಲಿಯೂ ಭಾರಿ ಏರಿಕೆ  ಯಾಗುತ್ತದೆ. ಆದರೆ, ವಿತ್ತೀಯ ಕೊರತೆ ತಗ್ಗುವುದರಿಂದ ನಂತರದ ದಿನಗಳಲ್ಲಿ ಸರಕುಗಳ ಬೆಲೆಯೂ ತಕ್ಕಮಟ್ಟಿಗೆ ಇಳಿಯಲಿದೆ ಎಂದೂ ವರದಿ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT