ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಸೆಲ್ ಬೆಲೆ ಏರಿಕೆ ಸದ್ಯಕ್ಕಿಲ್ಲ

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): `ಶೀಘ್ರದಲ್ಲೇ ಮತ್ತೊಮ್ಮೆ ಡೀಸೆಲ್ ಬೆಲೆ ಹೆಚ್ಚಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ~ ಎಂದು ಪೆಟ್ರೋಲಿಯಂ ಸಚಿವ ಎಸ್.ಜಯಪಾಲ ರೆಡ್ಡಿ ಮಂಗಳವಾರ ಇಲ್ಲಿ ಸ್ಪಷ್ಟಪಡಿಸಿದ್ದಾರೆ.

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಎಫ್‌ಕೆಸಿಸಿಐ-ಫಿಕ್ಕಿ) ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸದ್ಯ ತೈಲ ಮಾರಾಟ ಕಂಪೆನಿಗಳು ಪ್ರತಿ ಲೀಟರ್ ಡೀಸೆಲ್ ಮಾರಾಟದ ಮೇಲೆ ರೂ.11.65 ನಷ್ಟ ಅನುಭವಿಸುತ್ತಿವೆ. ಹಾಗಿದ್ದರೂ ಸದ್ಯಕ್ಕಂತೂ ಮತ್ತೊಂದು ಸುತ್ತಿನ  ದರ ಪರಿಷ್ಕರಣೆ ಸಾಧ್ಯತೆ ಇಲ್ಲ ಎಂದಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಸರ್ಕಾರ ಡೀಸೆಲ್ ದರವನ್ನು ಪ್ರತಿ ಲೀಟರಿಗೆ ರೂ.5ರಷ್ಟು ಹೆಚ್ಚಿಸಿತ್ತು. ಇದರಿಂದ ಸೆಪ್ಟೆಂಬರ್ ತಿಂಗಳ ಸಗಟು ಸೂಚ್ಯಂಕ(ಡಬ್ಲ್ಯುಪಿಐ)   ಆಧರಿಸಿದ ಹಣದುಬ್ಬರ ದರ 10 ತಿಂಗಳಲ್ಲಿಯೇ ಗರಿಷ್ಠ ಮಟ್ಟವಾದ ಶೇ 7.81ರಷ್ಟಕ್ಕೆ ತಲುಪಿದೆ.

ತೈಲ ಮಾರಾಟ ಕಂಪೆನಿಗಳು ಪ್ರತಿ ಲೀಟರ್ ಸೀಮೆಎಣ್ಣೆ ಮಾರಾಟದ ಮೇಲೆ ರೂ.33.93 ಮತ್ತು 14.2 ಕೆ.ಜಿ ತೂಕದ `ಎಲ್‌ಪಿಜಿ~ ಸಿಲಿಂಡರ್ ಮಾರಾಟದ ಮೇಲೆ ರೂ.468.50 ನಷ್ಟ ಅನುಭವಿಸುತ್ತಿವೆ. ಇದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ರೂ.1,67,415 ಕೋಟಿಯಷ್ಟು ವರಮಾನ ನಷ್ಟ ಅಂದಾಜು ಮಾಡಲಾಗಿದೆ. ಜತೆಗೆ ಕಚ್ಚಾ ತೈಲ ಆಮದು ವೆಚ್ಚವೂ ಈವರೆಗೆ ರೂ.7.2 ಲಕ್ಷ ಕೊಟಿಯಷ್ಟಾಗಿದೆ ಎಂದು ವಿವರಿಸಿದರು.
 
2009-10ರಲ್ಲಿ 13.78 ಕೋಟಿ ಮೆಟ್ರಿಕ್ ಟನ್‌ನಷ್ಟಿದ್ದ ದೇಶೀಯ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ 2011-12ರಲ್ಲಿ ರೂ.14.80 ಕೋಟಿ ಮೆಟ್ರಿಕ್ ಟನ್‌ಗೆ ಏರಿದೆ. ಒಟ್ಟು ಬೇಡಿಕೆಯಲ್ಲಿ ಶೇ 70ರಷ್ಟು ತೈಲ ಆಮದು ಮಾಡಿಕೊಳ್ಳುತ್ತಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT