ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಸೆಲ್‌ ಮಾರಾಟ ಶೇ0.8 ಇಳಿಕೆ

ದಶಕದಲ್ಲೇ ಮೊದಲು
Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ದಶಕದಲ್ಲಿ ಇದೇ ಮೊದಲ ಬಾರಿಗೆ ದೇಶದಲ್ಲಿ ಡೀಸೆಲ್‌ಗೆ ಬೇಡಿಕೆ ತಗ್ಗಿದೆ ಎಂದು ಭಾರತೀಯ ತೈಲ ನಿಗಮ(ಐಒಸಿ) ಅಧ್ಯಕ್ಷ ಆರ್‌.ಎಸ್‌. ಬುಟೊಲ ಹೇಳಿದರು.

ಇಲ್ಲಿ ಗುರುವಾರ ‘3ನೇ ವಿಶ್ವ ಇಂಧನ ಶೃಂಗಸಭೆ’ಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ 15 ದಿನಗಳಿಗೊಮ್ಮೆ ತೈಲೋತ್ಪನ್ನಗಳ ಬೆಲೆ ಪರಿಷ್ಕರಣೆ ಆಗುತ್ತಿದೆ. ಡೀಸೆಲ್‌ ಬೆಲೆಯಲ್ಲಿ ಪದೇ ಪದೇ ಏರಿಕೆ ಆಗುತ್ತಿರುವುದರಿಂದಲೇ ಬೇಡಿಕೆ ಕಡಿಮೆ ಆಗಿದೆ ಎಂದರು.

ದೇಶದಲ್ಲಿ ಬಳಕೆಯಾಗುವ ಇಂಧನ ತೈಲಗಳಲ್ಲಿ ಡೀಸೆಲ್‌ ಪ್ರಮಾಣವೇ ಶೇ 45ರಷ್ಟಿದೆ. 2003ರಿಂದ ಈವರೆಗೆ ಡೀಸೆಲ್‌ ಮಾರಾಟದಲ್ಲಿ ಶೇ 68ರಷ್ಟು  ಹೆಚ್ಚಳ ಕಂಡುಬಂದಿದೆ. ಆದರೆ, ಈ ವರ್ಷ ಮಾತ್ರ ಶೇ 0.8ರಷ್ಟು ಬೇಡಿಕೆ ತಗ್ಗಿದೆ. 2013ರಲ್ಲಿ 394.60 ಲಕ್ಷ ಟನ್‌ ಡೀಸೆಲ್‌ ಮಾರಾಟವಾಗಿದೆ ಎಂದು ವಿವರಿಸಿದರು.

ವಿದ್ಯುತ್‌ ಉತ್ಪಾದನೆ ಪ್ರಮಾಣ ಹೆಚ್ಚಿರುವುದು ಸಹ ಡೀಸೆಲ್‌ ಬೇಡಿಕೆ ಕಡಿಮೆ ಆಗಲು ಕಾರಣ. ವಿದ್ಯುತ್‌ ಕಡಿತ ವಾದಾಗಲೆಲ್ಲ ಡೀಸೆಲ್‌ ಜನರೇಟರ್‌ ಬಳಕೆ ರೂಢಿ ಇದೆ. ಈ ಬಾರಿ ವಿದ್ಯುತ್‌ ಕಡಿತ ತಗ್ಗಿದೆ. ಡೀಸೆಲ್‌ ಮಾರಾಟವೂ ಕಡಿಮೆ ಆಗಲು ಈ ಅಂಶವೂ ಕಾರಣ ವಾಗಿದೆ ಎಂದು ವಿವರಿಸಿದರು.

ಆದರೆ, ಡೀಸೆಲ್‌ ಮಾರಾಟ ಕುಸಿತಕ್ಕೆ ಮುಖ್ಯವಾಗಿ ಬೆಲೆ ಏರಿಕೆಯೇ ಕಾರಣ. 2013ರ ಜನವರಿಯಿಂದ ಈವರೆಗೆ ಡೀಸೆಲ್‌ ಬೆಲೆ ಲೀಟರ್‌ಗೆ ಒಟ್ಟು ₨6.62ರಷ್ಟು ಏರಿಕೆಯಾಗಿದೆ. ಇದು ಡೀಸೆಲ್‌ ಬಳಕೆಯನ್ನೂ ದೊಡ್ಡ ಪ್ರಮಾಣದಲ್ಲಿ ತಗ್ಗಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT