ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಲ್ಲಿ ಡೇರ್‌ಡೆವಿಲ್ಸ್ ಪಂದ್ಯಕ್ಕೆ ಮಳೆ ಅಡ್ಡಿ

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಡರ್ಬನ್ (ಪಿಟಿಐ): ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಈಗ ಮಳೆಯದ್ದೇ ಆಟ. ಡೆಲ್ಲಿ ಡೇರ್‌ಡೆವಿಲ್ಸ್ ಹಾಗೂ ಆಕ್ಲೆಂಡ್ ಏಸಸ್ ನಡುವಿನ ಪಂದ್ಯವೂ ಮಳೆಯ ಕಾರಣ ರದ್ದಾಯಿತು. 

ಶುಕ್ರವಾರ ರಾತ್ರಿ ನಡೆಯಬೇಕಿದ್ದ `ಎ~ ಗುಂಪಿನ ಈ ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಉಭಯ ತಂಡಗಳಿಗೆ ತಲಾ ಎರಡು ಪಾಯಿಂಟ್ ನೀಡಲಾಯಿತು. ಮಾಹೇಲ ಜಯವರ್ಧನೆ ಸಾರಥ್ಯದ ಡೇರ್‌ಡೆವಿಲ್ಸ್ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಈ ತಂಡದ ಬಳಿ ಈಗ ಒಟ್ಟು ಆರು ಪಾಯಿಂಟ್‌ಗಳಿವೆ. ಡೇರ್‌ಡೆವಿಲ್ಸ್ ಭಾನುವಾರ ಪರ್ತ್ ಸ್ಕಾರ್ಚರ್ಸ್‌ ಎದುರು ಆಡಲಿದೆ.  

ಮುಂಬೈ ಇಂಡಿಯನ್ಸ್ ತಂಡದ ಎರಡನೇ ಪಂದ್ಯಕ್ಕೆ ಗುರುವಾರ ಮಳೆ ಅಡ್ಡಿಯಾಗಿತ್ತು. ಈ ತಂಡವೀಗ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ. ಈಗಾಗಲೇ ಕೋಲ್ಕತ್ತ ನೈಟ್ ರೈಡರ್ಸ್ ಹೊರಬಿದ್ದಿದೆ. ಎರಡು ಪಂದ್ಯದಲ್ಲಿ ಸೋಲು ಕಂಡಿದ್ದ ಈ ತಂಡದ ಮತ್ತೊಂದು ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT