ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇವಿಡ್ ಫೆರರ್‌ಗೆ ಶರಣಾದ ಸೋಮ್

Last Updated 28 ಮಾರ್ಚ್ 2011, 19:00 IST
ಅಕ್ಷರ ಗಾತ್ರ

ಮಿಯಾಮಿ (ಡಿಪಿಎ): ಭಾರತದ ಸೋಮ್‌ದೇವ್ ದೇವ್‌ವರ್ಮನ್ ಅವರ ಗೆಲುವಿನ ಓಟಕ್ಕೆ ತೆರೆಬಿದ್ದಿದೆ. ಇಲ್ಲಿ ನಡೆಯುತ್ತಿರುವ ಮಿಯಾಮಿ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಮೂರನೇ ಸುತ್ತಿನಲ್ಲಿ ಅವರು ಸೋಲು ಅನುಭವಿಸಿದರು.

ಭಾನುವಾರ ನಡೆದ ಪಂದ್ಯದಲ್ಲಿ ಸ್ಪೇನ್‌ನ ಡೇವಿಡ್ ಫೆರರ್ ಅವರು 6-4, 6-2 ರಲ್ಲಿ ಭಾರತದ ಆಟಗಾರನ ವಿರುದ್ಧ ಜಯ ಸಾಧಿಸಿ ನಾಲ್ಕನೇ ಸುತ್ತಿಗೆ ಮುನ್ನಡೆದರು.
ಆರನೇ ಶ್ರೇಯಾಂಕದ ಆಟಗಾರ ಫೆರರ್ ಮೊದಲ ಸೆಟ್‌ನಲ್ಲಿ ಗೆಲುವು ಪಡೆಯಲು ಅಲ್ಪ ಪ್ರಯಾಸಪಟ್ಟರು. ಆದರೆ ಎರಡನೇ ಸೆಟ್‌ನ್ನು ಸುಲಭವಾಗಿ ತಮ್ಮದಾಗಿಸಿಕೊಂಡರು.

ಇಂಡಿಯಾನ ವೆಲ್ಸ್‌ನಲ್ಲಿ ನಡೆದ ಎಟಿಪಿ ಮಾಸ್ಟರ್ಸ್ ಟೂರ್ನಿಯಲ್ಲಿ ಸೋಮ್‌ದೇವ್ ನಾಲ್ಕನೇ ಸುತ್ತು ಪ್ರವೇಶಿಸಿದ್ದರು. ಮಾತ್ರವಲ್ಲ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎನಿಸಿದ್ದರು. ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಅವರ ರಫೆಲ್ ನಡಾಲ್ ಕೈಯಲ್ಲಿ ಸೋಲು ಅನುಭವಿಸಿದ್ದರು. ಇದಕ್ಕೂ ಮೊದಲು ಅವರು ದುಬೈ ಓಪನ್ ಟೂರ್ನಿಯಲ್ಲಿ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ವಿರುದ್ಧವೂ ಆಡಿದ್ದರು.

ಜೊಕೊವಿಕ್‌ಗೆ ಜಯ: ಸರ್ಬಿಯದ ನೊವಾಕ್ ಜೊಕೊವಿಕ್ ಅವರು 6-2, 6-0 ರಲ್ಲಿ ಅಮೆರಿಕದ ಜೇಮ್ಸ್ ಬ್ಲೇಕ್ ವಿರುದ್ಧ ಜಯ ಸಾಧಿಸಿ ನಾಲ್ಕನೇ ಸುತ್ತಿಗೆ ಮುನ್ನಡೆದರು.
ಈ ಮೂಲಕ ಜೊಕೊವಿಕ್ ಪ್ರಸಕ್ತ ವರ್ಷ ತಮ್ಮ ಗೆಲುವಿನ ಓಟವನ್ನು ಮತ್ತೆ ಮುಂದುವರಿಸಿದ್ದಾರೆ. ಈ ಋತುವಿನಲ್ಲಿ ಆಡಿದ ಎಲ್ಲ 20 ಪಂದ್ಯಗಳಲ್ಲಿ ಅವರು ಜಯ ಸಾಧಿಸಿದ್ದಾರೆ. ಎರಡನೇ ಶ್ರೇಯಾಂಕದ ಜೊಕೊವಿಕ್ ಒಂದು ಗಂಟೆಯ ಹೋರಾಟದಲ್ಲಿ ಗೆಲುವು ಪಡೆದರು.ಮತ್ತೊಂದು ಪಂದ್ಯದಲ್ಲಿ ಅರ್ಜೆಂಟೀನಾದ ಜುವಾನ್ ಡೆಲ್ ಪೊಟ್ರೊ 6-3, 6-2 ರಲ್ಲಿ ರಾಬಿನ್ ಸೊಡೆರ್‌ಲಿಂಗ್ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT