ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ಯೂರೊ ಡಿಜೆಡ್ ಸ್ಕೂಟರ್

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಹೀಂದ್ರಾ  ಟು ವೀಲರ್ಸ್, ಗಡುಸು ರಸ್ತೆಗಳಲ್ಲಿನ ಬಳಕೆಗಾಗಿಯೇ ವಿಶೇಷವಾಗಿ ರೂಪಿಸಿರುವ ಹೊಸ ಸ್ಕೂಟರ್ `ಡ್ಯೂರೊ ಡಿಜೆಡ್~ ಅನ್ನು ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿದೆ.

125 ಸಿಸಿ ಸಾಮರ್ಥ್ಯದ ಎಂಜಿನ್ ಒಳಗೊಂಡಿರುವ ಈ ಸ್ಕೂಟರ್, ಇದೇ ಸಾಮರ್ಥ್ಯದ ಇತರ ಸ್ಕೂಟರ್‌ಗಳಿಗಿಂತ ಹೆಚ್ಚಿನ ಇಂಧನ ಕಾರ್ಯಕ್ಷಮತೆ ಹೊಂದಿದೆ ಎಂದು ಸಂಸ್ಥೆಯ ಮಾರಾಟ ವಿಭಾಗದ ಉಪಾಧ್ಯಕ್ಷ ಧಮೇಂದ್ರ ಮಿಶ್ರಾ, ಗುರುವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗ್ರಾಹಕರ ಅಭಿಪ್ರಾಯ ಪರಿಗಣಿಸಿ ಈ  ಸ್ಕೂಟರ್‌ನಲ್ಲಿ ಸುರಕ್ಷಿತ ಚಾಲನೆಗಾಗಿ ಹಲವಾರು ಸೌಲಭ್ಯಗಳನ್ನು ಅಳವಡಿಸಲಾಗಿದೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಈ ಸ್ಕೂಟರ್ ಪ್ರತಿ ಲೀಟರ್‌ಗೆ 42 ರಿಂದ 45 ಕಿ. ಮೀ ದೂರ ಕ್ರಮಿಸುವ ಇಂಧನ ಕ್ಷಮತೆ ಹೊಂದಿದೆ. ಎರಡು ಹೊಸ ಬಣ್ಣಗಳೂ ಸೇರಿದಂತೆ ಒಟ್ಟು 7 ವರ್ಣಗಳಲ್ಲಿ ಲಭ್ಯ ಇದೆ.

ರಾಜ್ಯದಲ್ಲಿ ಇದರ ಬೆಲೆ ್ಙ 44,760 (ಎಕ್ಸ್ ಷೋರೂಂ) ಇದೆ. ಬಾಲಿವುಡ್  ನಟಿ ಕರೀನಾ ಕಪೂರ್, ಈ ಸ್ಕೂಟರ್‌ನ ಪ್ರಚಾರ ರಾಯಭಾರಿ ಆಗಿದ್ದಾರೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT