ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಾದತ್ತ ಇಂಗ್ಲೆಂಡ್-ಲಂಕಾ ಟೆಸ್ಟ್

Last Updated 7 ಜೂನ್ 2011, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವೆ ಇಲ್ಲಿ ನಡೆಯುತ್ತಿರುವ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯವು ಡ್ರಾದತ್ತ ಸಾಗಿದೆ.

ಇಂಗ್ಲೆಂಡ್ ತಂಡದ ಅಲಿಸ್ಟರ್ ಕುಕ್ (106, 231ಎಸೆತ, 10ಬೌಂಡರಿ) ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತವನ್ನು ಕಲೆ ಹಾಕಿದೆ. ಆತಿಥೇಯ ತಂಡ ಎರಡನೇ ಇನಿಂಗ್ಸ್‌ನಲ್ಲಿ 78.1ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 335 ರನ್ ಗಳಿಸಿ ಡಿಕ್ಲೇರ್ಡ್ ಮಾಡಿಕೊಂಡಿದೆ. ಈ ಸವಾಲನ್ನು ಬೆನ್ನು ಹತ್ತಿರುವ ಶ್ರೀಲಂಕಾ ಐದನೇ ದಿನವಾದ ಮಂಗಳವಾರದ ಪಂದ್ಯ ನಡೆದಾಗ 26.3 ಓವರ್‌ಗಳಲ್ಲಿ 81 ರನ್ ಗಳಿಸಿದೆ.

ಮಂಗಳವಾರ ಕೊನೆಯ ದಿನವಾದ್ದರಿಂದ ಲಂಕಾಕ್ಕೆ ಗುರಿ ಮುಟ್ಟಲು ಇನ್ನೂ 260 ರನ್‌ಗಳ ಸವಾಲನ್ನು ತಲುಪಬೇಕಿದೆ. ಆದ್ದರಿಂದ ಪಂದ್ಯ ಬಹುತೇಕ ಡ್ರಾ ಸಾಗುವ ನಿರೀಕ್ಷೆಯಿದೆ. ಲಂಕಾ ತಂಡದ ಪರ ತಿಲಕರತ್ನೆ ದಿಲ್ಶಾನ್ ಮೊದಲ    ಇನಿಂಗ್ಸ್‌ನಲ್ಲಿ ಭರ್ಜರಿ ಶತಕ (193) ಗಳಿಸಿದ್ದರು.

ಸಂಕ್ಷಿಪ್ತ ಸ್ಕೋರು:  ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 486 ಹಾಗೂ 335ಕ್ಕೆ3 ಡಿಕ್ಲೇರ್ಡ್ (ಅಲಿಸ್ಟರ್ ಕುಕ್ 106, ಜೊನಾಥನ್ ಟ್ರಾಟ್ 58; ರಂಗಣ ಹಿರತ್ 87ಕ್ಕೆ3)

ಶ್ರೀಲಂಕಾ ಮೊದಲನೇ ಇನಿಂಗ್ಸ್‌ನಲ್ಲಿ 479 ಮತ್ತು 26.3 ಓವರ್‌ಗಳಲ್ಲಿ 2 ವಿಕೆಟ್‌ಗೆ 81. (ತರಂಗ ಪರಣವಿತನ ಬ್ಯಾಟಿಂಗ್ 37, ಮಾಹೇಲ ಜಯವರ್ಧನೆ 25; ಕ್ರಿಸ್ ಟ್ರಿಮ್ಲೆಟ್ 29ಕ್ಕೆ1.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT