ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಿಪ್ ವೈರ್‌ನಲ್ಲಿ ಚಾಪೆ

Last Updated 19 ಜನವರಿ 2011, 19:30 IST
ಅಕ್ಷರ ಗಾತ್ರ

ನಮ್ಮ ಅನೇಕ ರೈತರು ಪ್ರಯೋಗಶೀಲ ಮನೋಧರ್ಮದವರು. ಬೇಸಾಯದಲ್ಲಿ ಬಳಸಿಕೊಂಡ ವಸ್ತುಗಳನ್ನು ಗುಜರಿಗೆ ಹಾಕದೆ ಮತ್ತೆ ಬಳಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಅನೇಕ ಸಲಕರಣೆಗಳು ರೈತರ ಮನೆಯಂಗಳದಲ್ಲಿ ಹೊಸ ರೂಪ ಪಡೆದುಕೊಳ್ಳುತ್ತವೆ.

ಯಲ್ಲಾಪುರ ತಾಲೂಕಿನ ಆನಗೋಡಿನ ಮಾನಿಗದ್ದೆಯ ತಿಮ್ಮಣ್ಣ ಗಾಂವ್ಕಾರ್ ಎಂಬ ರೈತರು ಹನಿ ನೀರಾವರಿ ಕೊಳವೆಗಳನ್ನೇ ಬಳಸಿಕೊಂಡು ಅಡಿಕೆ ಒಣಗಿಸುವ ಚಾಪೆ ತಯಾರಿಸುತ್ತಾರೆ.

ಅವರು ತಮ್ಮ ಅಡಿಕೆ ತೋಟಕ್ಕೆ ಸುಧಾರಿತ ಸ್ಪ್ರಿಂಕ್ಲರ್ ಅಳವಡಿಸಿದ ನಂತರ ಮೊದಲು ಬಳಸುತ್ತಿದ್ದ ಹನಿ ನೀರಾವರಿಯ ಕೊಳವೆಗಳು ನಿರುಪಯೋಗಿಯಾಗಿದ್ದವು. ಅವನ್ನು ಕೊಳ್ಳುವವರು ಇರಲಿಲ್ಲ. ಅವನ್ನು ಹಾಗೇ ಬಿಡುವ ಬದಲು ಕೊಳವೆಗಳನ್ನು ಸೀಳಿ ಚಾಪೆ ಹೆಣೆಯಬಾರದೇಕೆ ಅನ್ನಿಸಿ ಕಾರ್ಯೋನ್ಮುಖರಾದರು.

ಉತ್ತರ ಕನ್ನಡ ಜಿಲ್ಲೆಯ ರೈತರು ಅಡಿಕೆ ಒಣಗಿಸಲು ಬಿದಿರು, ಶಮೆ,ಬೆತ್ತ, ವಾಟೆ ಇತ್ಯಾದಿಗಳಿಂದ ಹೆಣೆದ ಚಾಪೆಗಳನ್ನು ಬಳಸುತ್ತಾರೆ. ಕೆಲವು ರೈತರು ಹಳೆಯ ಸೀರೆಗಳ ಮೇಲೆ ಅಡಿಕೆ ಒಣಗಿಸುತ್ತಾರೆ. ಬಿದಿರು, ಶಮೆ,ಬೆತ್ತ, ವಾಟೆಗಳ ಲಭ್ಯತೆ ಈಗ ಕಡಿಮೆಯಾಗಿದೆ. ಅವುಗಳ ಬದಲು ಡ್ರಿಪ್ ಕೊಳವೆಗಳನ್ನೇ ಸೀಳಿ ಚಾಪೆ  ಹೆಣೆದು ಬಳಸಬಹುದು.

 ನಿರುಪಯೋಗಿ ಎಂದು ಅಟ್ಟಕ್ಕೆ ಎಸೆದ  ಡ್ರಿಪ್ ಕೊಳವೆಗಳಿಂದ ಚಾಪೆ ನೇಯುವುದಕ್ಕೂ ಅನೇಕರು  ಮುಂದಾಗಿದ್ದಾರೆ. ಚಾಪೆ ನೇಯುವುದು ಕೆಲವರಿಗೆ ಪಾರ್ಟ್‌ಟೈಂ ಉದ್ಯೋಗವಾಗಿದೆ. ಹಳೆಯ ಕೊಳವೆಗಳನ್ನು ಪಡೆದು ಚಾಪೆ ನೇಯ್ದುಕೊಟ್ಟು, 300 ರಿಂದ 500 ರೂಪಾಯಿವರೆಗೂ ಹಣ ಗಳಿಸಬಹುದು ಎನ್ನುತ್ತಾರೆ ತಿಮ್ಮಣ್ಣ.

ಡ್ರಿಪ್ ಚಾಪೆಗಳು ಹೆಚ್ಚು ಬಾಳಿಕೆ ಬರುತ್ತವೆ  ಕೊಳವೆಯ ಕಪ್ಪು ಬಣ್ಣ ಸಹಜವಾಗಿ ಬಿಸಿಲನ್ನು ಹೀರಿಕೊಳ್ಳುವುದರಿಂದ ಕೆಳ ಭಾಗದಿಂದಲೂ ಅಡಿಕೆಗೆ ಶಾಖ ಒದಗಿಸುತ್ತದೆ. ಮಳೆ, ಇಬ್ಬನಿಯಿಂದ  ಹಾಳಾಗುವುದಿಲ್ಲ. ಡ್ರಿಪ್ ವೈರ್‌ಗಳನ್ನು ಬಳಸಿ ಚಾಪೆ ಹೆಣೆಯುವ ಬಗ್ಗೆ ಮಾಹಿತಿ ಬೇಕಿದ್ದವರು  ತಿಮ್ಮಣ್ಣ ಗಾಂವ್ಕಾರ್ ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ನಂಬರ್ :9343336181 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT