ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರೋಣ್ ಉರುಳಿಸಿದ ಇಸ್ರೇಲ್

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಜೆರುಸಲೇಂ (ಎಎಫ್‌ಪಿ): ರಾಷ್ಟ್ರದ ವಾಯು ಗಡಿ ಉಲ್ಲಂಘಿಸಿದ ಅಪರಿಚಿತ ಡ್ರೋಣ್ ವಿಮಾನವನ್ನು ಇಸ್ರೇಲ್ ವಾಯು ಪಡೆ ಹೊಡೆದುರುಳಿಸಿದೆ.

ಮಾನವರಹಿತ ಡ್ರೋಣ್ ವಿಮಾನವು ಇಸ್ರೇಲ್ ವಾಯುಗಡಿ ಉಲ್ಲಂಘಿಸಿ ಮೆಡಿಟೇರಿಯನ್ ಸಮುದ್ರದ ಮೇಲಿನಿಂದ ಹಾರಾಡುತ್ತಿರುವುದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಪತ್ತೆಯಾಯಿತು. ಕೂಡಲೇ ಕಾರ್ಯಪ್ರವೃತ್ತರಾದ ವಾಯುಪಡೆ ಯೋಧರು ಅದನ್ನು ಹೊಡೆದು ಉರುಳಿಸಿದರು ಎಂದು ಮೂಲಗಳು ತಿಳಿಸಿವೆ.

ಈಗ ಯೋಧರು ಡ್ರೋಣ್ ಬಿದ್ದಿರುವ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದು, ಅವಶೇಷಗಳು ಪತ್ತೆಯಾದ ನಂತರ ಅದು ಯಾವ ದೇಶಕ್ಕೆ ಸೇರಿದ್ದು ಎಂಬುದು ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT