ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಢವಳೇಶ್ವರ ತಂಡ ಜಿಲ್ಲಾ ಮಟ್ಟಕ್ಕೆ

ತಾಲ್ಲೂಕು ಮಟ್ಟದ ಕಬಡ್ಡಿ, ಖೋಖೋ ಪಂದ್ಯಾವಳಿ
Last Updated 16 ಸೆಪ್ಟೆಂಬರ್ 2013, 9:00 IST
ಅಕ್ಷರ ಗಾತ್ರ

ಮಹಾಲಿಂಗಪುರ: ಮುಧೋಳದ ಕವಿ ಚಕ್ರವರ್ತಿ ರನ್ನ ಕ್ರೀಡಾಂಗಣದಲ್ಲಿ ಜರುಗಿದ ತಾಲ್ಲೂಕು ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಢವಳೇಶ್ವರ ಸರಕಾರಿ ಪ್ರೌಢ ಶಾಲೆಯ ತಂಡ ಪ್ರಥಮ ಸ್ಥಾನ ಗಳಿಸುವ ಮೂಲಕ ಮೇಲುಗೈ ಸಾಧಿಸಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿತು. ಇದೇ ಶಾಲೆಯ ಬಾಲಕಿಯರ ಕಬಡ್ಡಿ ತಂಡದವರೂ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದರು.

ಬಾಲಕರ ಖೋ ಖೋ ತಂಡದಲ್ಲಿ ಶಿವಾನಂದ ಅಂಬಿ, ಇಲಾಹಿ ಮುಲ್ಲಾ, ಅನೀಲ ಅಂಬಿ, ಅನ್ವರ ನದಾಫ, ಸಿದ್ಧಲಿಂಗ ಬೆಣ್ಣಿ, ಚೇತನ ದೇಶಪಾಂಡೆ, ಮಹೇಶ ಯರಗಟ್ಟಿ, ಅಲ್ಲಪ್ಪ ಬಿಸನ­ಕೊಪ್ಪ, ಮಹಾಲಿಂಗ ಪಟ್ಟಣಶೆಟ್ಟಿ, ಚೇತನ ಪಟ್ಟೇದ, ಮಂಜುನಾಥ ಪಟ್ಟಣಶೆಟ್ಟಿ, ಮಲ್ಲೇಶ ಗಾಣಿಗೇರ, ಮಂಜುನಾಥ ವಡರಟ್ಟಿ, ಬಸವರಾಜ  ಉಳ್ಳಾಗಡ್ಡಿ ಭಾಗವಹಿಸಿದ್ದರು.

ಪ್ರಶಸ್ತಿ ಪಡೆದ ಬಾಲಕಿಯರ ಕಬಡ್ಡಿ ತಂಡದಲ್ಲಿ ಬಂದವ್ವ ವಡರಟ್ಟಿ, ವಿದ್ಯಾಶ್ರೀ ಬಾಬರ, ಸುನೀತಾ ಹವಾಲ್ದಾರ, ಸಂಗೀತಾ ದಳವಾಯಿ, ಸುಧಾ ಗಿರೆವ್ವಗೋಳ, ಸೌಜನ್ಯ ಪಟ್ಟಣಶೆಟ್ಟಿ, ಪೂಜಾ ಕಂಕನವಾಡಿ, ಗುರವ್ವ ವಡರಟ್ಟಿ, ಆರತಿ ಕಾಮಶೆಟ್ಟಿ, ಪರವೀನ ಬಿ ಪಿಂಜಾರ,  ಸರಸ್ವತಿ ಹೊನಕುಪ್ಪಿ, ಸಾವಿತ್ರಿ ಆಂಬಿ ಪಾಲ್ಗೊಂಡಿದ್ದರು.

ವೈಯಕ್ತಿಕ ವಿಭಾಗದಲ್ಲಿ ವಿದ್ಯಾಶ್ರೀ ಬಾಬರ 3000 ಮೀ. ಓಟದಲ್ಲಿ ಪ್ರಥಮ ಸ್ಥಾನ ಹಾಗೂ 800 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿ­ದ್ದಾಳೆ, ರಂಗವ್ವ ಲೋಕುರಿ 3000 ಮೀ. ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ, ಭಲ್ಲೆ ಎಸೆತದಲ್ಲಿ ಇಲಾಹಿ ಮುಲ್ಲಾ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಅಯ್ಕೆಗೊಂಡಿದ್ದಾರೆ.

ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಗೈದ ತಂಡಗಳನ್ನು ಹಾಗೂ ವೈಯಕ್ತಿಕ ವಿಭಾಗದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡ ವಿದ್ಯಾರ್ಥಿಗಳನ್ನು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ದುಂಡಪ್ಪ ಕಮತಗಿ, ಮುಖ್ಯ ಶಿಕ್ಷಕ ಎಸ್.ಬಿ. ಬೆನಕಟ್ಟಿ, ಎಪಿಎಂಸಿ ಸದಸ್ಯ ಮಾರುತಿ ಹವಾಲ್ದಾರ, ದೈಹಿಕ ಶಿಕ್ಷಕ ಎಂ.ಬಿ. ಮನ್ನಿಕೇರಿ ಸೇರಿದಂತೆ ಗ್ರಾಮದ ಜನತೆ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT