ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಗಂ ವಿನ್ಯಾಸ; ಲಲನೆಗೆ ಉಲ್ಲಾಸ

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

`ಹೆಣ್ಣಿಗೆ ಸೀರೆ ಅಂದವೋ; ಸೀರೆಗೆ ಹೆಣ್ಣು ಅಂದವೋ~ ಎಂಬುದು ಬಗೆಹರಿಯದ ಒಗಟು. ಆದರೆ, ಒಂದಂತೂ ಸತ್ಯ. ಹೆಣ್ಣು ಸೀರೆ ಉಟ್ಟುಕೊಂಡಾಗ ಆಕೆಯ ಚೆಲುವು ಇಮ್ಮಡಿಯಾಗುತ್ತದೆ. ನವಿಲು ಗರಿ ಬಿಚ್ಚಿ ನಿಂತಾಗ ನೋಡಲು ಎಷ್ಟು ಚಂದವೋ ನೀರೆ ಸೀರೆ ಉಟ್ಟಾಗ ಅಷ್ಟೇ ಚೆಂದ ಕಾಣಿಸುತ್ತಾಳೆ. ಹೆಣ್ಣಿನ ಸಹಜ ಚೆಲುವನ್ನು ವೃದ್ಧಿಸುವ `ಮಯೂರಿ~ ಕಲೆಕ್ಷನ್ ಈಗ ನಗರಕ್ಕೆ ಕಾಲಿಟ್ಟಿದೆ. ಅಂದಹಾಗೆ, ಈ ಸಂಗ್ರಹದ ವಿನ್ಯಾಸಕರು ತಂಗಂ ಮಥಾಯ್.

ದಸರೆ ಹಬ್ಬಕ್ಕೆ ಇನ್ನು ಕೆಲವೇ ದಿನಗಳಿವೆ. ಹಬ್ಬ ಹರಿದಿನಗಳಲ್ಲಿ ಮನೆಯಲ್ಲಿರುವ ಹೆಣ್ಣು ಮಕ್ಕಳು ಸೀರೆ ಉಟ್ಟುಕೊಂಡರೆ ಹಬ್ಬಕ್ಕೆ ಮೆರಗು ಬರುತ್ತದೆ. ಮನಕ್ಕೊಪ್ಪುವ ಬಣ್ಣದ ಆಕರ್ಷಕ ಕುಸುರಿಯುಳ್ಳ ಸೀರೆ ಉಟ್ಟು , ಕಾಲ್ಗೆಜ್ಜೆ ತೊಟ್ಟು ಝಲ್..ಝಲ್.. ಎನ್ನುವ ಶಬ್ದ ಹೊರಡಿಸುತ್ತಾ ಮನೆಯಲ್ಲಿ ಹೆಣ್ಣು ಮಕ್ಕಳು ಓಡಾಡುತ್ತ್ದ್ದಿರುವಾಗ ಕದ್ದು ನೋಡುವ ಗಂಡನ ಓರೆ ನೋಟವನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ಹೆಂಡತಿಯದ್ದು.

ಮನಃಶಾಸ್ತ್ರ ಪದವೀಧರೆಯಾದ ತಂಗಂ ಎಂಬತ್ತರ ದಶಕದಿಂದ ಸೀರೆ ವಿನ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭಾರತೀಯ ಹೆಣ್ಣು ಮಕ್ಕಳ ನಾಡಿಮಿಡಿತ ಅರಿತುಕೊಂಡಿರುವ ತಂಗಂ, ಹೆಣ್ಣು ಮಕ್ಕಳಿಗೆ ಇಷ್ಟವಾಗುವ ಸೀರೆಗಳನ್ನೇ ವಿನ್ಯಾಸಗೊಳಿಸುತ್ತಾ ಬರುತ್ತಿದ್ದಾರೆ.

ತಂಗಂ ಅವರ ಸಂಗ್ರಹದಲ್ಲಿ ಮನಸೆಳೆವ ಕಲಾತ್ಮಕ ಪ್ರಿಂಟ್ ಸೀರೆಗಳು ಮತ್ತು ಆಕರ್ಷಕ ಕುಸುರಿ ಕಲೆಯುಳ್ಳ ನೇಯ್ದ ಸೀರೆಗಳ ದೊಡ್ಡ ಸಂಗ್ರಹವಿದ್ದು, ಆಧುನಿಕತೆಯನ್ನು ಪ್ರತಿಬಿಂಬಿಸುವಂತಿವೆ. ಈ ಸೀರೆಗಳನ್ನು ಉಟ್ಟು ಕೊಂಡಾಗ ಮಹಿಳೆಯರು ಮತ್ತಷ್ಟು ಮೋಹಕವಾಗಿ ಕಾಣಿಸುತ್ತಾರೆ ಎಂಬುದು ತಂಗಂ ನೀಡುವ ವಿವರಣೆ.

ತಂಗಂ ಅವರು ವಿಶೇಷ ಆಸ್ಥೆ ವಹಿಸಿ ವಿನ್ಯಾಸಗೊಳಿಸಿದ ಸೀರೆಗಳಲ್ಲಿ ಸಾಕಷ್ಟು ಕಸುಬುದಾರಿಕೆ ಇದೆ. ಮೋಹಕ ವಿನ್ಯಾಸ ಹಾಗೂ ವಿವಿಧ ಬಣ್ಣಗಳ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಸೀರೆಗಳ ಬಾರ್ಡರ್‌ನಲ್ಲಿ ಚಿತ್ತಾಕರ್ಷಕ ಕಲೆ ಇದೆ. ಸೀರೆಗಳಲ್ಲಿನ ಎಳೆಗಳ ಸಂಯೋಜನೆಯಂತೂ ಅದ್ಭುತ.
 
ಸಾಕಷ್ಟು ಟ್ರೆಂಡಿಯಾಗಿರುವ ಈ ಸೀರೆಗಳನ್ನು ಹೆಣ್ಣುಮಕ್ಕಳು ಉಟ್ಟಾಗ ಅವರ ವೇಷಭೂಷಣದಲ್ಲಿ ನಾಜೂಕುತನ ಎದ್ದು ಕಾಣಿಸುತ್ತದೆ. ಚೆಲುವು ಕಣಕಣದಲ್ಲೂ ಅನುರಣಿಸುತ್ತದೆ. ಸೀರೆಗಳ ಜತೆಗೆ ಮಯೂರಿ ಸಂಗ್ರಹದಲ್ಲಿ ತುಷಾರ್ಸ್‌ ಹಾಗೂ ಸಲ್ವಾರ್ ಸೂಟ್‌ಗಳಿವೆ.

ತಂಗಂ ಅವರು ಮಯೂರಿ ಬ್ರ್ಯಾಂಡ್‌ನ ಮಾಲೀಕರೂ ಹೌದು. 35 ವರ್ಷದ ಅನುಭವದ ಎರಕದಲ್ಲಿ ಮೂಡಿ ಬಂದಿರುವ ಸೀರೆಗಳ ಸಂಗ್ರಹ ಎಲ್ಲರಿಗೂ ಇಷ್ಟವಾಗುವಂತಿವೆ. `ಫ್ಯಾಷನ್ ಎಂದರೆ ಹೊಸತನ. ಅದು ನಮ್ಮ ಅಭಿವ್ಯಕ್ತಿಯ ಸಂಕೇತ~ ಎನ್ನುವ ತಂಗಂ ಅವರ ಅಪರೂಪ ವಿನ್ಯಾಸದ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಶನಿವಾರ ಕೊನೆ.
ಸ್ಥಳ: ರೇನ್ ಟ್ರೀ, ಸ್ಯಾಂಕಿ ರಸ್ತೆ, ವಿಂಡ್ಸರ್ ಮ್ಯಾನರ್ ಎದುರು. ಮಾಹಿತಿಗೆ: 3272 3251.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT